ಹುಬ್ಬಳ್ಳಿ:
ಇಲ್ಲಿನ ಗೋಕುಲ್ ರಸ್ತೆಯ ವಿಶ್ವಶ್ರಮ ಚೇತನ ಆವರಣದ ಸಭಾಭವನದಲ್ಲಿ ಡಾ. ಕೆ.ಎಸ್. ಶರ್ಮಾ ಅವರ ಮಾತೆ ದಿ. ಸಂಪತಮ್ಮ ಅವರ 28ನೇ ಶ್ರದ್ಧಾ ಸಮರ್ಪಣೆ ಕಾರ್ಯಕ್ರಮ ಉದ್ದೇಶಿಸಿ ಹಾಗೂ ''''''''ಭಾರತದ ನ್ಯಾಯವಾದಿ ಪ್ರಶಸ್ತಿ'''''''' ಪುರಸ್ಕೃತ ಹಿನ್ನೆಲೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಂದು ಶರ್ಮಾ ಅವರು ದಿನಗೂಲಿ ನೌಕರರ ಪರವಾಗಿ ಹೋರಾಟ ಮಾಡದಿದ್ದರೆ ದಿನಗೂಲಿ ನೌಕರರ ಸಮಸ್ಯೆ ತಾಂಡವಾಡುವಂತಿತ್ತು. ದಿನಗೂಲಿ ನೌಕರರ ಉಳಿವಿಗಾಗಿ ಅವರು ಹೋರಾಡಿದ್ದಾರೆ ಎಂದ ಅವರು, ಸಂಘಟಿತರಾದರೆ ಹಕ್ಕು ಉಳಿಯುತ್ತದೆ. ಪ್ರಶ್ನೆ ಕೇಳುವ ಪ್ರವೃತ್ತಿ ಇದ್ದರೆ ಮಾತ್ರ ಸಮಾಜ ಮುಂದುವರಿಯುತ್ತದೆ. ಇದರಿಂದ ಅನ್ಯಾಯ ಸರಿಪಡಿಸಬಹುದು ಎಂದರು.ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಮಾತನಾಡಿ, ಮೋಹನ ಕಾತರಕಿ ಅವರಿಗೆ ಮಹತ್ತರ ಪ್ರಶಸ್ತಿಯಾದ ಭಾರತದ ನ್ಯಾಯವಾದಿ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ. ಅವರ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು.
ಕವಿವಿ ಉಪಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿ, ಮೋಹನ ಕಾತರಕಿ ಅವರು ನಮ್ಮ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ. ಅವರಿಗೆ ಭಾರತ ನ್ಯಾಯವಾದಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರಾಂಶುಪಾಲರಾದ ಡಾ. ಮಂಜುಳಾ ಎಸ್.ಆರ್. ಮಾತನಾಡಿದರು. ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ, ಪೊಲೀಸ್ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ದ.ರಾ. ಬೇಂದ್ರೆ ಅವರು ರಚಿಸಿದ ನಾಳಿನ ಕನಸು ಎಂಬ ಮರು ಮುದ್ರಣಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಪ್ರಾಂಶುಪಾಲ ಸಿ.ಸಿ. ಹಿರೇಮಠ ಸ್ವಾಗತಿಸಿದರು. ಸುಲೋಚನ ಪೊತ್ನೀಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ರವೀಂದ್ರ ಶಿರೋಳ್ಕರ್ ವಂದಿಸಿದರು. ಈ ವೇಳೆ ವಿಜಯಾ ಮೋಹನ್ ಕಾತರಕಿ, ಸೋಮಶೇಖರ ಹುದ್ದಾರ, ಸುಮಿತ್ರಾ ಪೋತ್ನಿಸ್, ವಿ.ಜಿ. ಸೊಪ್ಪಿನಮಠ, ಕರ್ನಾಟಕ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.