ಕನ್ನಡಪ್ರಭ ವಾರ್ತೆ ಜಮಖಂಡಿ
ಕಳೆದ ವರ್ಷ ಅವರು ಹೋರಾಟ ನಡೆಸಿದ್ದು, ಅದಕ್ಕೆ ಸಾರ್ವಜನಿಕರ ಮೆಚ್ಚುಗೆ ದೊರೆತಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೈತರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿದ್ದರೂ ಅವರ ಕುಟುಂಬದ ಸದಸ್ಯರನ್ನು ಹೆಸರಿಸಿ ಹಗುರವಾಗಿ ಮಾತನಾಡಿದ್ದನ್ನು ಯಾವ ಸಾತ್ವಿಕರು ಸಹಿಸುವುದಿಲ್ಲ. ರೈತರ ಸಮಸ್ಯೆಗೆ ಕೂಡಲೇ ಸ್ವಂದಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಆದರೂ ಅವರ ಕುಟುಂಬದವರ ಬಗ್ಗೆ ಹಗುರವಾಗಿ ಮಾತನಾಡುವ ಶಶಿಕಾಂತ ಗುರುಜಿ ಅಂತವರು ಎಚ್ಚರಿಕೆಯ ಮಾತುಗಳನ್ನಾಡಲಿ. ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರಕ್ಕೆ ಪ್ರತಿ ಖಾತೆಗೆ ₹ 2500 ಘೋಷಿದ್ದರ ಕುರಿತು ಮಾತನಾಡಲಿ ಎಂದಿದ್ದಾರೆ.
ಕೇಂದ್ರ ಸಚಿವ ಕಬ್ಬು ಬೆಳೆಗಾರರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ್ದಾರಲ್ಲದೇ ಕೂಡಲೇ ಕೇಂದ್ರ ಸರ್ಕಾರದ ಗಮನ ಸೆಳೆದು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.