ಶತಾಯುಷಿ ಶ್ರೀಕೃಷ್ಣ ಜಯದೇವ ರಾವ್‌ಗೆ ಹವ್ಯಕ ಕೃಷಿ ರತ್ನ ಪ್ರದಾನ

KannadaprabhaNewsNetwork |  
Published : Feb 11, 2025, 12:45 AM IST
೧೦ಎಸ್.ಆರ್.ಎಸ್೪ಪೊಟೋ೧ (ಶ್ರೀಕೃಷ್ಣ ಜಯದೇವ ರಾವ್ ವಡ್ಡಿನಕೊಪ್ಪ ಹಾಗೂ ರಾಧಾ ರಾವ್ ದಂಪತಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.)೧೦ಎಸ್.ಆರ್.ಎಸ್೪ಪೊಟೋ೨ (ಹಾರ್ಮೋನಿಯಂ ವಾದಕ ಪಂಡಿತ್ ಸುವೇಂದು ಬ್ಯಾನರ್ಜಿ ಕೊಲ್ಕತ್ತ ಅವರು ಹಾರ್ಮೋನಿಯಂ ಸೋಲೋ ನಡೆಸಿಕೊಟ್ಟರು.) | Kannada Prabha

ಸಾರಾಂಶ

ಶ್ರೀಕೃಷ್ಣ ರಾವ್ ದಂಪತಿ ಸಾರ್ಥಕ ಹಾಗೂ ಮಾದರಿ ಜೀವನ ನಡೆಸಿದ್ದು, ಕಲ್ಗುಂಡಿಕೊಪ್ಪ, ಸುಗಾವಿ, ಬೆಂಗಳೆ, ಓಣಿಕೇರಿ ಭಾಗದಲ್ಲಿ ನಡೆಸುತ್ತಿರುವ ಕೃಷಿಕರ ಜೀವನಕ್ಕೆ ಮಾದರಿಯಾಗಿ ಗುರುತಿಸಿಕೊಂಡವರು.

ಶಿರಸಿ: ಮಾದರಿ ಕೃಷಿಕ, ಹಾರ್ಮೋನಿಯಂ ವಾದಕ, ಶತಾಯುಷಿ ಶ್ರೀಕೃಷ್ಣ ಜಯದೇವ ರಾವ್ ವಡ್ಡಿನಕೊಪ್ಪ ಹಾಗೂ ರಾಧಾ ರಾವ್ ದಂಪತಿಗೆ ಅವರ ಮನೆಯಂಗಳದ ತೋಟದ ನಡುವೆ ಭವ್ಯ ವೇದಿಕೆಯಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀಕೃಷ್ಣ ರಾವ್ ದಂಪತಿ ಸಾರ್ಥಕ ಹಾಗೂ ಮಾದರಿ ಜೀವನ ನಡೆಸಿದ್ದು, ಕಲ್ಗುಂಡಿಕೊಪ್ಪ, ಸುಗಾವಿ, ಬೆಂಗಳೆ, ಓಣಿಕೇರಿ ಭಾಗದಲ್ಲಿ ನಡೆಸುತ್ತಿರುವ ಕೃಷಿಕರ ಜೀವನಕ್ಕೆ ಮಾದರಿಯಾಗಿ ಗುರುತಿಸಿಕೊಂಡವರು.ಅವರ ಪತ್ನಿ ರಾಧಾರವರು ಕೂಡ ೯೫ರ ವಯಸ್ಸಿನಲ್ಲಿ ಶ್ರೀಕೃಷ್ಣ ರಾವ್ ಅವರ ಬದುಕಿಗೆ ಹೆಗಲಾಗಿ ಸಾಥ್ ನೀಡುತ್ತಿರುವುದು ಉಲ್ಲೇಖನಿಯವಾಗಿದೆ.ಶತಾಯುಷ್ಯ ಕೃತಜ್ಞತಾ ಅಂಗವಾಗಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ವಿಸ್ತಾರವಾದ ರಾವ್ ಕುಟುಂಬಸ್ಥರೆಲ್ಲರೂ ಸೇರಿ ಮನೆ ಪಕ್ಕದಲ್ಲಿರುವ ಅಡಕೆ- ತೆಂಗು ತೋಟದ ನಡುವೆ ಭವ್ಯವಾದ ಚಪ್ಪರದ ವೇದಿಕೆ ನಿರ್ಮಿಸಿ, ಧಾರ್ಮಿಕ ಕಾರ್ಯಕ್ರಮವಾಗಿ ಅಷ್ಟೋತ್ತರ ಶತ ನಾರಿಕೇಳ ಮಹಾ ಗಣಪತಿ ಹವನ ಹಾಗೂ ಮುಕ್ಕೋಟಿ ದೇವತೆ ಪೂಜೆಗಾಗಿ ಸಾಲಂಕೃತ ಕಾಮಧೇನು ಪೂಜೆ ಮತ್ತು ೧೦೮ ಮುತ್ತೈದೆಯರ ಬಾಗಿನ ಸಮರ್ಪಣೆಗಾಗಿ ದೇವಿ ಸಂತೃಪ್ತಿ ಪೂಜೆಗಳನ್ನು ವಿಧಿವತ್ತಾಗಿ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭೆ ಶ್ರೀಕೃಷ್ಣ ರಾವ್ ದಂಪತಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಹವ್ಯಕ ಮಹಾಸಭಾದ ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ, ಶಿರಸಿ ಹುಲೇಮಳಗಿ ಬ್ರದರ್ಸ್‌ನ ಲೋಕೇಶ ಹೆಗಡೆ, ಡಾ. ಕೃಷ್ಣಮೂರ್ತಿ ರಾಯ್ಸದ್ ಮಾತನಾಡಿದರು. ಹವ್ಯಕ ಮಹಾಸಭೆಯ ನಿರ್ದೇಶಕ ಜಿ.ಎಂ. ಭಟ್ಟ ಕಾಜಿನಮನೆ ಶುಭ ಹಾರೈಸಿದರು.

ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಸುವೇಂದು ಬ್ಯಾನರ್ಜಿ ಕೊಲ್ಕತ್ತ ಅವರು ಹಾರ್ಮೋನಿಯಂ ಸೋಲೋವನ್ನು ವೈವಿಧ್ಯಮಯವಾಗಿ ನಡೆಸಿಕೊಟ್ಟರು. ತಬಲಾದಲ್ಲಿ ಪಂಡಿತ ಶಂತನು ಶುಕ್ಲ ಮುಂಬೈ ಸಾಥ್ ನೀಡಿದರು.ಆರ್ಥಿಕ ಸಾಮರ್ಥ್ಯ ತಿಳಿದು ಸಾಲ ನೀಡಲು ತಹಸೀಲ್ದಾರ್ ಸೂಚನೆ

ದಾಂಡೇಲಿ: ನಗರ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ಹಾವಳಿಯು ಹೆಚ್ಚಾಗಿರುವ ಕುರಿತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮುಖ್ಯಸ್ಥರ ಹಾಗೂ ಸಿಬ್ಬಂದಿಗಳೊಂದಿಗೆ ಅಂಬೇವಾಡಿಯ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸಭೆಯನ್ನು ಕರೆಯಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು, ಆರ್‌ಬಿಐ ನಿಯಮದಂತೆ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ಸಾಲಗಾರರಿಗೆ ಮಾನಸಿಕ ಹಿಂಸೆ ಹಾಗೂ ಯಾವುದೇ ರೀತಿಯಲ್ಲಿ ಕಿರುಕುಳ, ತೇಜೋವಧೆ ಮಾಡಬಾರದು. ಆರ್ಥಿಕ ಸಾಮರ್ಥ್ಯ ತಿಳಿದು ಸಾಲ ನೀಡಬೇಕು. ಅಧಿಕ ಬಡ್ಡಿದರ ವಿಧಿಸುವ ಹಾಗಿಲ್ಲ ಎಂದರು.ಸಿಪಿಐ ಜಯಪಾಲ ಪಾಟೀಲ ಮಾತನಾಡಿ, ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಂಡೇಲಿ, ಹಳಿಯಾಳ ಭಾಗದಲ್ಲಿ ಈಗಾಗಲೇ ಅನೇಕ ಪ್ರಕರಣಗಳನ್ನು ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ. ಸಾಲಗಾರರ ಮನೆಗೆ ತಡರಾತ್ರಿ ಹೋಗಿ ಸಾಲ ವಸೂಲಾತಿ ಮಾಡಬಾರದು. ಇಂತಹ ಘಟನೆಗಳು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಡಿವೈಎಸ್‌ಪಿ ಶಿವಾನಂದ ಮದರಖಂಡಿ ಮಾತನಾಡಿ, ಹೆಣ್ಣುಮಕ್ಕಳಿಗೆ ಕೆಟ್ಟದಾಗಿ ಮಾತನಾಡುವುದಾಗಲಿ, ಏಕವಚನ ಬಳಸುವದಾಗಲಿ ಮಾಡುವ ಹಾಗಿಲ್ಲ. ವಸೂಲಿಗೆ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯ ಒಳಗೆ ಹೋಗಬೇಕು. ಒಂದೇ ಕುಟುಂಬದ ಇತರೆ ಸದಸ್ಯರಿಗೆ ಸಾಲ ಕೊಡುವಂತಿಲ್ಲ. ಪದೇ ಪದೇ ಸಾಲ ತುಂಬುವಂತೆ ಕಿರುಕುಳ ನೀಡುತ್ತಿರುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಎಸ್‌ಐ ಅಮೀನ ಅತ್ತಾರ ಸ್ವಾಗತಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌