ಬಕ್ರೀದ್ ಹಬ್ಬಕ್ಕೆ ಕುರಿ ಮೇಕೆ ಟಗರು ವ್ಯಾಪಾರ ಜೋರು

KannadaprabhaNewsNetwork |  
Published : May 25, 2026, 01:45 AM IST
ಗೌರಿಬಿದನೂರಿನ ನಡೆದ ಜಾನುವಾರು ಸಂತೆಯಲ್ಲಿ ಮಾರಾಟಕ್ಕೆ ಇರಿಸಿದ್ದ ಕುರಿ-ಮೇಕೆಗಳು. | Kannada Prabha

ಸಾರಾಂಶ

ಗೌರಿಬಿದನೂರು ಮಾತ್ರವಲ್ಲದೆ ಕೋಲಾರ, ತುಮಕೂರು, ಉತ್ತರ ಕನ್ನಡ, ದಾವಣಗೇರಿ, ಬಳ್ಳಾರಿ, ತಮಿಳುನಾಡು, ಆಂಧ್ರ ಪ್ರದೇಶ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಮಾರಾಟಗಾರರು ಮಾರುಕಟ್ಟೆಗೆ ಬಂದಿದ್ದರು.

ಕುರಿ, ಮೇಕೆ ಖರೀದಿಗೆ ಕಿಕ್ಕರಿದು ತುಂಬಿದ ವ್ಯಾಪಾರಿಗಳು, ಗ್ರಾಹಕರು । ಬಕ್ರೀದ್ ಹಬ್ಬಕ್ಕೆ ಮುಸ್ಲಿಮರ ಸಿದ್ಧತೆ

ಅರುಣ್‌ ಕುಮಾರ್‌ ಎಸ್‌ ವಿ

ಕನ್ನಡಪ್ರಭ ವಾರ್ತೆ ಗೌರಿಬಿದನೂರುಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಹಬ್ಬಕ್ಕಾಗಿ ಮುಸ್ಲಿಂ ಸಮುದಾಯದವರು ತಯಾರಿ ನಡೆಸುತ್ತಿದ್ದಾರೆ. ಕುರ್ಬಾನಿ ನೀಡಲು ಅಗತ್ಯವಿರುವ ಕುರಿ-ಮೇಕೆಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಜಾನುವಾರು ಸಂತೆಯಲ್ಲಿ, ಕುರಿ-ಮೇಕೆಗಳ ಮತ್ತು ಟಗರು ವ್ಯಾಪಾರ ಜೋರಾಗಿ ನಡೆಯಿತು.ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಕಳೆದ ಎರಡು-ಮೂರು ವಾರಕ್ಕಿಂತ ಈ ವಾರದ ಸಂತೆಯಲ್ಲಿ ಖರೀದಿದಾರರು ಹಾಗೂ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ದೃಶ್ಯಕಂಡು ಬಂದಿತು.ಗೌರಿಬಿದನೂರು ಮಾತ್ರವಲ್ಲದೆ ಕೋಲಾರ, ತುಮಕೂರು, ಉತ್ತರ ಕನ್ನಡ, ದಾವಣಗೇರಿ, ಬಳ್ಳಾರಿ, ತಮಿಳುನಾಡು, ಆಂಧ್ರ ಪ್ರದೇಶ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಮಾರಾಟಗಾರರು ಮಾರುಕಟ್ಟೆಗೆ ಬಂದಿದ್ದರು. ಹಿಂಡುಗಳ ಲೆಕ್ಕದಲ್ಲಿ ಕುರಿ-ಮೇಕೆಗಳನ್ನು ಖರೀದಿಸಿ, ಲಾರಿಗಳಲ್ಲಿ ಕೊಂಡೊಯ್ದರು. ಖರೀದಿದಾರರು ರಸ್ತೆ ಮಧ್ಯದಲ್ಲಿ ಗಾಡಿ ಇಟ್ಟು ತಮ್ಮ ಇಚ್ಚೆಯ ಕುರಿ ಹಾಗೂ ಟಗರು ಖರೀದಿಸಿದರು.ಬರುವ ಮೇ 28ರಂದು ಬಕ್ರೀದ್ ಹಬ್ಬವಿದ್ದು, ಮುಸ್ಲಿಂ ಸಮುದಾಯದವರು ವ್ಯಾಪಾರಿಗಳೊಂದಿಗೆ ಚರ್ಚಸಿ, ಬೆಲೆಯನ್ನು ಚೌಕಾಶಿ ಮಾಡಿ ತಮ್ಮ ಇಷ್ಟದ ಕುರಿ ಮತ್ತು ಟಗರುಗಳನ್ನು ಪಡೆದುಕೊಂಡರು. ಈ ಭಾನುವಾರ ಜರುಗಿದ ಸಂತೆಯಲ್ಲಿ ಕುರಿ, ಮೇಕೆ ಮತ್ತು ಟಗರುಗಳ ಮಾರಾಟ ಜೋರಾಗಿತ್ತು. ಬೆಲೆ ದುಬಾರಿಯಾಗಿದ್ದರೂ ಜನರು, ಹಬ್ಬಕ್ಕಾಗಿ ಖರೀದಿಸುವುದು ಅನಿವಾರ್ಯವಾಗಿತ್ತು.ಕಳೆದ ಎರಡು ವಾರಗಳಿಂದ ಅಲ್ಪ ಕುಸಿತ ಕಂಡಿದ್ದ ಟಗರು ಮುತ್ತು ಕುರಿ ವ್ಯಾಪಾರದಲ್ಲಿ ಈ ವಾರದ ಸಂತೆಯಲ್ಲಿ ಬೆಲೆ ಏರಿಕೆ ಖಂಡಿದೆ. ಉತ್ತಮ ಬೆಲೆಗೆ ಮರಿಗಳು ಮಾರಾಟವಾದರೆ ರೈತರು ಕೂಡಾ ಸಂತೋಷವಾಗಿರುತ್ತಾರೆ ಎಂದು ಬಿಜಾಪುರದಿಂದ ಬಂದ ಕುರಿ ವ್ಯಾಪಾರಿಯೊಬ್ಬರು ಕನ್ನಪ್ರಭಗೆ ತಿಳಿಸಿದರು.ಕಳೆದ ವರ್ಷದ ಬಕ್ರೀದ್ ಸಂದರ್ಭದಲ್ಲಿ ಕನಿಷ್ಠ 7 ಸಾವಿರಕ್ಕೆ ಕುರಿ-ಮೇಕೆ-ಟಗರುಗಳು ಸಿಕ್ಕಿದ್ದವು. ಆದರೆ, ಈ ವರ್ಷ ಕನಿಷ್ಠ 10 ಸಾವಿರದಿಂದ ದರ ಶುರುವಾಯಿತು. 6 ತಿಂಗಳ ಮರಿಯಿಂದ ಹಿಡಿದು ಎರಡೂರು ವರ್ಷಗಳ ಕುರಿ-ಟಗರು-ಮೇಕೆಗಳು ಮಾರುಕಟ್ಟೆಯಲ್ಲಿದ್ದವು. ಗರಿಷ್ಠ ₹ 2.50ಲಕ್ಷದವರೆಗೂ ಕೆಲ ಕುರಿ-ಮೇಕೆ-ಟಗರುಗಳು ಮಾರಾಟವಾದವು.''''''''ವರ್ಷಪೂರ್ತಿ ಮೇಕೆ ಕುರಿ ಸಾಕುವುದೇ ನಮ್ಮ ಕಾಯಕ. ಬಕ್ರೀದ್ ಸಂದರ್ಭದಲ್ಲಿ ಕೆಲ ಕುರಿ-ಮೇಕೆಗಳನ್ನು ಮಾರಾಟ ಮಾಡುತ್ತೇವೆ. ಈ ವರ್ಷ ದರ ಸ್ವಲ್ಪ ಜಾಸ್ತಿ ಇದೆ. ನಮ್ಮ ಅನುಕೂಲಕ್ಕೆ ತಕ್ಕಂತೆ, ಖರೀದಿದಾರರ ಜೊತೆ ಮಾತುಕತೆ ನಡೆಸಿ ಮಾರಾಟ ಮಾಡುತ್ತಿದ್ದೇವೆ'''''''' ಚೆನ್ನಾಗಿ ಸಾಕಿ ಬೆಳೆಸಿದ ಟಗರುಗಳನ್ನು ಇಂದು ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದೆ, ಒಂದಕ್ಕೆ ₹45ವಿರವರೆಗೆ ಬೆಲೆ ಹೇಳಿದ್ದೆ, ಜೋಡಿಗೆ ₹80 ಸಾವಿರಕ್ಕೆ ಮಾರಾಟವಾಗಿದೆ'''''''' ಎಂದು ಮಂಚೇನಹಳ್ಳಿ ಗ್ರಾಮದ ಕುರಿಗಾಹಿ ಬಸಪ್ಪ ಹೇಳಿದರು.ಸಣ್ಣ ಪ್ರಮಾಣದ ಕುರಿ ಮತ್ತು ಟಗರು ಮರಿಗಳು ಸುಮಾರು ₹10ಸಾವಿರದಿಂದ ₹15ಸಾವಿರದವರೆಗೆ ಮಾರಾಟವಾದವು. ಇನ್ನೂ ದೊಡ್ಡ ಕುರಿಗಳು ಒಂದಕ್ಕೆ ಕನಿಷ್ಠ ₹22 ಸಾವಿರದಿಂದ ಗರಿಷ್ಠ ₹52 ಸಾವಿರದವರೆಗೆ ಮಾರಾಟವಾಗಿದ್ದು ಖಂಡು ಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಹೆಚ್ಚಳ
ಕಾಂಗ್ರೆಸ್‌ ಸರ್ಕಾರದಿಂದ ಜನತೆಗೆ ವಂಚನೆ: ನಿತಿನ್‌