ಜೇನುನೊಣದಿಂದ ಕಾಡು, ಕೃಷಿ ಅಭಿವೃದ್ಧಿ: ಮಾದೇಗೌಡ

KannadaprabhaNewsNetwork |  
Published : May 25, 2026, 01:45 AM IST
ಜೇನು ನೊಣ ದಿನಾಚರಣೆಯಲ್ಲಿ | Kannada Prabha

ಸಾರಾಂಶ

ಜಮೀನುಗಳಲ್ಲಿ ಸೂರ್ಯಕಾಂತಿ, ಎಳ್ಳು, ಉಚ್ಚೆಳ್ಳು ಬೆಳೆಗಳಲ್ಲಿ 100ರಲ್ಲಿ 90ರ ಭಾಗದಷ್ಟು ಪರಾಗಸ್ಪರ್ಶ ಮಾಡಿ ಕೊಡುವುದರಿಂದ ಇಳುವರಿ ಕೊಡುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಜೇನುನೊಣಗಳ ಸಂತತಿಯು ಕಡಿಮೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜೇನು ನೊಣಗಳಿಂದ ಜೇನು ತುಪ್ಪದ ಮೂಲಕ ಜನರಿಗೆ ಅಮೂಲ್ಯವಾದ ಔಷಧಿ, ಕಾಡಿನ ಮರಗಳ ಹೂವುಗಳಿಗೆ ಪರಾಗಸ್ಪರ್ಶ ಮಾಡುವುದರ ಮೂಲಕ ಸಸ್ಯಗಳ ಬೆಳವಣಿಗೆ, ಕಾಡಿನ ಅಭಿವೃದ್ಧಿ, ಕೃಷಿ ಅಭಿವೃದ್ಧಿಯಾಗುತ್ತಿದೆ ಎಂದು ಸೋಲಿಗರ ಸಂಘದ ಕಾರ್ಯದರ್ಶಿ ಡಾ. ಸಿ. ಮಾದೇಗೌಡ ಅವರು ತಿಳಿಸಿದರು.

ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿ ಸೋಲಿಗರ ಅಡವಿ ಸಂಸ್ಕರಣ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜೇನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲಿಗರು ಜೇನನ್ನು ದೇವರು ಎಂದು ಪೂಜೆ ಮಾಡುತ್ತಾರೆ ಮತ್ತು ಹಾಡುಗಳನ್ನು ಹೇಳುತ್ತಾ ಆರಾಧಿಸುತ್ತಾರೆ, ಸೋಲಿಗರಲ್ಲದೆ ಕಾಡಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಜೇನಿನಿಂದ ಜೀವನೋಪಾಯ ನಡೆಯುತ್ತಿದೆ, ಆದಿವಾಸಿಗಳ ಬದುಕು ಜೇನು ತುಪ್ಪಗಳ ಮೇಲೆ ನಿಂತಿದೆ. ಅಲ್ಲದೆ ಸೋಲಿಗರು ಜೇನು ತುಪ್ಪವನ್ನು ಸುಸ್ಥಿರವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ಏಟ್ರಿ ಸಂಸ್ಧೆಯ ಡಾ. ಸಿದ್ದಪ್ಪ ಶೆಟ್ಟಿಯವರು ಮಾತನಾಡಿ, ಅಡವಿ ಸಂಸ್ಕರಣ ಘಟಕದಲ್ಲಿ ಜೇನುನೊಣಗಳ ದಿನಾಚರಣೆಯನ್ನು ಹಮ್ಮಿಕೊಂಡಿರುವುದು, ಆಯೋಜಿಸಿರುವುದು ತುಂಬಾ ಖುಷಿಯ ವಿಚಾರವಾಗಿದೆ. ಏಟ್ರಿ ಸಂಸ್ಥೆಯು 32 ವರ್ಷಗಳಿಂದ ಜೇನಿನ ಕುರಿತು ಕೆಲಸವನ್ನು ಮಾಡುತ್ತಿದೆ, ನೀವು ನಿಮ್ಮ ತಾತ- ಮುತ್ತಾತಂದಿರ ಕಾಲದಿಂದಲೂ ಜೇನು ಸಂಗ್ರಹಣೆ ಮಾಡಿ ಜೀವನ ನಡೆಸುತ್ತಿದ್ದೀರಾ, ಹಾಗೆಯೇ ಕಾಡಿಗೆ ಅವಲಂಭಿತರಾಗಿದ್ದೀರಾ, ಜೇನು ನಿಮಗೆ ಬಾಳಿ ಬದುಕಲು ಸಹಾಯವಾಗಿದೆ ಎಂದರು.

ಸಂಶೋಧನೆ ಪ್ರಕಾರ ಜೇನು ನೊಣಗಳು ಕಾಡಿನಲ್ಲಿ ಪರಾಗಸ್ಪರ್ಶ ಮಾಡಿ ಜೇನು ಸಂಗ್ರಹಣೆ ಮಾಡುತ್ತವೆ. ಕಾಡಿನ ಹಲವು ಮರಗಿಡಗಳು ಕಾಯಿ ಕಟ್ಟಲು ಜೇನುನೊಣ ಕಾರಣ, ಬೀಜಗಳು ಕೆಳಗೆ ಬೀಳುವುದರಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಸಹಾಯವಾಗಿದೆ, ಕಾಡು ಬೆಳೆಯುವುದರಲ್ಲಿ ಜೇನುನೊಣಗಳು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಜಮೀನುಗಳಲ್ಲಿ ಸೂರ್ಯಕಾಂತಿ, ಎಳ್ಳು, ಉಚ್ಚೆಳ್ಳು ಬೆಳೆಗಳಲ್ಲಿ 100ರಲ್ಲಿ 90ರ ಭಾಗದಷ್ಟು ಪರಾಗಸ್ಪರ್ಶ ಮಾಡಿ ಕೊಡುವುದರಿಂದ ಇಳುವರಿ ಕೊಡುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಜೇನುನೊಣಗಳ ಸಂತತಿಯು ಕಡಿಮೆಯಾಗುತ್ತಿದೆ, ಕಾಡುಗಳಲ್ಲಿ, ಹಳ್ಳಿಗಳಲ್ಲಿ, ನಗರ ಪ್ರದೇಶಗಳಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇದರಿಂದ ಜಾಗರೂಕರಾಗಬೇಕು ಮತ್ತು ಜೇನುನೊಣಗಳ ಸಂರಕ್ಷಣೆ ಮಾಡಬೇಕು. ಜೇನುನೊಣಗಳಿಂದ ಕಾಡಿನ ಬೆಳವಣಿಗೆಯಾಗುತ್ತದೆ, ಬೆಳೆಗಳ ಅಭಿವೃದ್ಧಿಯಾಗುತ್ತದೆ, ಬಿಳಿಗಿರಿರಂಗನಬೆಟ್ಟದಲ್ಲಿ ಅಡವಿ ಜೇನು ಸಂಸ್ಕರಣ ಸಂಘವನ್ನು ಸ್ಥಾಪಿಸಿಕೊಂಡು ಸೋಲಿಗರು ಜೇನುತುಪ್ಪ ಸಂಗ್ರಹಣೆ, ಸಂಸ್ಕರಣೆ, ಮಾರಾಟವನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ, ಇದಕ್ಕೆ ಏಟ್ರಿ ಸಂಸ್ಥೆಯಿಂದ ಸಹಕಾರ ನೀಡಲಾಗಿದೆ ಎಂದು ತಿಳಿಸಿದರು.

ಮಾದಮ್ಮ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಸಿದ್ದೇಗೌಡ, ಕಾರನಕೇತೇಗೌಡ, ನಂಜೇಗೌಡ, ಬಸಮ್ಮ, ಮಂಜುನಾಥ, ಶಿವಕುಮಾರ, ಮಾದೇಶ, ಮಹೇಶ , ಕೇತಮ್ಮ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಹೆಚ್ಚಳ
ಕಾಂಗ್ರೆಸ್‌ ಸರ್ಕಾರದಿಂದ ಜನತೆಗೆ ವಂಚನೆ: ನಿತಿನ್‌