ಆಸ್ತಿ ವಿಚಾರವಾಗಿ ಅಜ್ಜಿಯ ಮೊಮ್ಮಗ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಬನ್ನೇರುಘಟ್ಟದ ಕೆಂಚಕಾಯನಹಳ್ಳಿಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಸಂತೆ ಕೊಡಳ್ಳಿ ಮೂಲದ ಗೌರಮ್ಮ ಕೊಲೆಯಾದ ಮಹಿಳೆ. ಪ್ರಜ್ವಲ್ ಕೊಲೆ ಆರೋಪಿ.
ಬೆಂಗಳೂರು ದಕ್ಷಿಣ : ಆಸ್ತಿ ವಿಚಾರವಾಗಿ ಅಜ್ಜಿಯ ಮೊಮ್ಮಗ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಬನ್ನೇರುಘಟ್ಟದ ಕೆಂಚಕಾಯನಹಳ್ಳಿಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಸಂತೆ ಕೊಡಳ್ಳಿ ಮೂಲದ ಗೌರಮ್ಮ ಕೊಲೆಯಾದ ಮಹಿಳೆ. ಪ್ರಜ್ವಲ್ ಕೊಲೆ ಆರೋಪಿ.
ಮಗಳ ಮನೆ ಸಮೀಪ ವಾಸ
ಗೌರಮ್ಮ ಮಗಳ ಮನೆ ಸಮೀಪವಿರುವ ಕೆಂಚಕಾಯನಹಳ್ಳಿಯಲ್ಲಿ ವಾಸವಾಗಿದ್ದರು. ಗೌರಮ್ಮ ಅವರಿಗೆ ಇಬ್ಬರು ಮಕ್ಕಳು. ಮಗ ಪೇಂಟ್ ಕೆಲಸ ಮಾಡುತ್ತಿದ್ದಾರೆ. ಮಗನ ವರ್ತನೆಗೆ ಬೇಸತ್ತು ಗೌರಮ್ಮ ಮಗಳ ಬಳಿ ಬಂದು ನೆಲೆಸಿದ್ದರು. ಕೆಂಗೇರಿಯಲ್ಲಿ ತಮಗಿದ್ದ ಹಣದಲ್ಲಿ ಮನೆ ಕಟ್ಟಿಸುತ್ತಿದ್ದರು. ತಮ್ಮ ಆಸ್ತಿಯನ್ನು ಮೊಮ್ಮಗ ಪ್ರಜ್ವಲ್‌ಗೆ ನೀಡಬಾರದು ಎಂದು ಗೌರಮ್ಮ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕೆ ಪ್ರಜ್ವಲ್ ಅಜ್ಜಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ದಿನ ಗೌರಮ್ಮ ಅವರ ಪತಿ ದುರ್ಗಯ್ಯ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಗೌರಮ್ಮ ಒಬ್ಬರೇ ಇದ್ದರು. ಈ ವೇಳೆ ಪ್ರಜ್ವಲ್ ಮನೆಗೆ ಬಂದು ಹಣಕ್ಕಾಗಿ ಜಗಳ ಮಾಡಿದ್ದಾನೆ. ಮಾತು ಮಿತಿ ಮೀರಿ ಚಾಕುವಿನಿಂದ ಅಜ್ಜಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ತಾಯಿ ಬಳಿ ಅಜ್ಜಿಯನ್ನು ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ.
ಆರೋಪಿ ಪ್ರಜ್ವಲ್‌ನನ್ನು ಬಂಧಿಸಿದ್ದಾರೆ
ತಾನು ಏನೂ ಮಾಡಿಲ್ಲ ಎಂಬಂತೆ ನಾಟಕ ಮಾಡಿದ್ದ. ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳ ಮಹಜರು ಮಾಡಿ ಅನುಮಾನದ ಮೇರೆಗೆ ಪ್ರಜ್ವಲ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಲಿಸಿಕೊಂಡು ಆರೋಪಿ ಪ್ರಜ್ವಲ್‌ನನ್ನು ಬಂಧಿಸಿದ್ದಾರೆ.