ಲಾಟರಿ ಮೂಲಕ ಆಶ್ರಯ ನಿವೇಶನ

KannadaprabhaNewsNetwork |  
Published : Aug 23, 2025, 02:01 AM IST
ಶಿರ್ಷಿಕೆ.೨೧ಕೆ.ಎಂ.ಎಲ್‌.ಆರ್.೩- ಮಾಲೂರು ನಗರಸಭೆಯ ಸಭಾಂಗಣದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಾಲೂರಿನಲ್ಲಿ ೧,೨೦೦ ನಿವೇಶನಗಳು ನಮ್ಮಲ್ಲಿ ಲಭ್ಯವಿದ್ದು, ೪೭೪ ಅರ್ಜಿಗಳು ವಜಾ ಮಾಡುವುದಿಲ್ಲ. ಅವರು ಸೆ.೧೫ರ ಒಳಗೆ ಪೂರ್ಣವಾದ ದಾಖಲೆಗಳನ್ನು ನೀಡಿದರೆ, ಅಂದು ನಡೆಸುವ ಲಾಟರಿ ಮೂಲಕ ನಿವೇಶನಗಳ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಸೇರಿಸಲಾಗುವುದು. ದಾಖಲೆಗಳನ್ನು ಸಲ್ಲಿಸಲು ಹಾಗೂ ನಿವೇಶನಕ್ಕಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆ ತಕರಾರು ಸಲ್ಲಿಸಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ನಗರಸಭೆಯ ಆಶ್ರಯ ಯೋಜನೆ ನಿವೇಶನ ಪಡೆಯಲು ಸಲ್ಲಿಕೆ ಮಾಡಿದ್ದ ೧೩೬೯ ಅರ್ಜಿಗಳ ಫಲಾನುಭವಿಗಳಲ್ಲಿ ೬೮೯ ಮಂದಿ ಫಲಾನುಭವಿಗಳು ಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದು, ಉಳಿದ ೪೭೪ ಮಂದಿ ಸೆಪ್ಟೆಂಬರ್‌ ೧೫ರೊಳಗೆ ದಾಖಲೆಗಳನ್ನು ನೀಡಿದರೆ ಅವರಿಗೂ ಸಹ ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.

ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂತರ ದಾಖಲೆಗಳನ್ನು ಸಲ್ಲಿಸಿದವರನ್ನು ೨ನೇ ಹಂತದಲ್ಲಿ ಆಯ್ಕೆ ಮಾಡಲಾಗುವುದು ಎಂದರು.

ಅರ್ಜಿ ವಜಾ ಮಾಡುವುದಿಲ್ಲ

೧,೨೦೦ ನಿವೇಶನಗಳು ನಮ್ಮಲ್ಲಿ ಲಭ್ಯವಿದ್ದು, ೪೭೪ ಅರ್ಜಿಗಳು ವಜಾ ಮಾಡುವುದಿಲ್ಲ. ಅವರು ಸೆ.೧೫ರ ಒಳಗೆ ಪೂರ್ಣವಾದ ದಾಖಲೆಗಳನ್ನು ನೀಡಿದರೆ, ಅಂದು ನಡೆಸುವ ಲಾಟರಿ ಮೂಲಕ ನಿವೇಶನಗಳ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಸೇರಿಸಲಾಗುವುದು. ದಾಖಲೆಗಳನ್ನು ಸಲ್ಲಿಸಲು ಹಾಗೂ ನಿವೇಶನಕ್ಕಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆ ತಕರಾರು ಸಲ್ಲಿಸಲು ಅವಕಾಶವಿದೆ. ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ೨೨ ವರ್ಷಗಳ ಹಿಂದೆ ನಿವೇಶನ ಹಂಚಿಕೆಗೆ ಇದ್ದ ಸಮಸ್ಯೆಯನ್ನು ಬಗೆಹರಿಸಿದಂತಾಗಿದೆ ಎಂದು ಶಾಸಕರು ಹೇಳಿದರು.

400 ಎಕರೆ ಭೂಮಿ ಬೇಕು

ಅದೇ ರೀತಿ ೨೮ ಗ್ರಾ.ಪಂ ಗಳಲ್ಲಿಯೂ ನಿವೇಶನ ರೈತ ಫಲಾನುಭವಿಗಳಿಗೆ ನಿವೇಶನ ನೀಡಲು ಈಗಾಗಲೇ ಗ್ರಾಮ ಹಾಗೂ ತಾಲೂಕು ಪಂಚಾಯಿತಿ ೧೪ ಸಾವಿರ ಫಲಾನುಭವಿಗಳು ಗುರುತಿಸಿದೆ ೪೦೦ ಎಕರೆ ಜಮೀನಿನ ಅಗತ್ಯವಿದೆ, ತಹಶಿಲ್ದಾರ್ ಹಾಗೂ ಸರ್ವೆ ಇಲಾಖೆಯವರು ಭೂಮಿ ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಸರ್ಕಾರದ ನೀತಿ ನಿಯಮನುಸಾರ ನಿವೇಶನಗಳನ್ನು ನೀಡಲಾಗುವುದು.ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವಿಜಯಲಕ್ಷ್ಮಿ, ಉಪಾಧ್ಯಕ್ಷ ವಿಜಯಲಕ್ಷ್ಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿ ಕೃಷ್ಣಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ರಾಜಪ್ಪ, ಪೌರಾಯುಕ್ತ ಎ ಬಿ ಪ್ರದೀಪ್, ಆಶ್ರಯ ಸಮಿತಿ ಸದಸ್ಯರಾದ ದಿನೇಶ್ ಗೌಡ, ಜಾಕಿ ಮಂಜು, ಹಾಜರಿದ್ದರು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ