ಕುರುಬ ಸಮಾಜದ ಕಾರ್ಯಕ್ರಮಕ್ಕೆ ಪಾಲ್ಗೊಳ್ಳದಿರಲು ಕೈ, ಕುರುಬ ನಾಯಕರ ನಿರ್ಧಾರ

KannadaprabhaNewsNetwork | Published : Mar 15, 2025 1:04 AM

ಸಾರಾಂಶ

Shepherd leaders decide not to participate in the program of the shepherd community

-ಕಾಂಗ್ರೆಸ್, ಕುರುಬ ಸಮಾಜದ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಸ್ಪಷ್ಟನೆ

----

ಕನ್ನಡಪ್ರಭ ವಾರ್ತೆ ಶಹಾಪುರ

ನೂತನ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕುರುಬ ಸಮಾಜದಿಂದ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಈ ಕಾರ್ಯಕ್ರಮದಲ್ಲಿ ಅವರೊಬ್ಬರಿಗೆ ಮಾತ್ರ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇಂತಹ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಸಮಾಜದ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ನಮ್ಮ ಸಮಾಜದವರು ಕೈ ಪದಾಧಿಕಾರಿಗಳು, ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಕುರುಬ ಸಮಾಜದ ಹಲವರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಾಗೂ ಕುರುಬ ಸಮಾಜದ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಅವರು ಸ್ಪಷ್ಟ ಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಮಾಜದವರೊಬ್ಬರು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿರುವುದು ಸಮಾಜ ಸಂತಸ ತರುವಂತಹದ್ದೆ, ಆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಅವರೊಬ್ಬರಿಗೆ ಮಾತ್ರ ಸನ್ಮಾನ ಏರ್ಪಡಿಸಿದ್ದು, ನಮ್ಮ ಸಮಾಜದಲ್ಲಿಯೇ ರಾಜ್ಯ ಸರ್ಕಾರ ಹಲವು ಕ್ಷೇತ್ರಗಳಿಗೆ ನಾಮನಿರ್ದೇಶನಗೊಂಡವರು ಹಲವರಿದ್ದು, ಅವರಿಗೆ ಸನ್ಮಾನ ಹಮ್ಮಿಕೊಂಡಿರುವುದು ಸೋಜಿಗವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಉಳಿದವರು ಭಾಗವಹಿಸುವುದು ಬಿಡುವುದು ಅವರವರ ವೈಯಕ್ತಿಕತೆಗೆ ಬಿಟ್ಟ ವಿಚಾರ. ಅದು ಸಮಾಜದ ಕಾರ್ಯಕ್ರಮ ಆಗಬೇಕಿತ್ತು. ಅಲ್ಲಿ ಒಂದು ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ನಾವುಗಳಾರು ಆ ಕಾರ್ಯಕ್ರಮ ಹೋಗುವುದಿಲ್ಲ ಎಂದು ತಿಳಿಸಿದರು.

ಹಿರಿಯ ಮುಖಂಡರಾದ ಗಿರೆಪ್ಪಗೌಡ ಬಾಣತಿಹಾಳ, ಈರಣ್ಣಗೌಡ ಮಲ್ಲಾಬಾದಿ, ಶಿವಮಹಾಂತ ಚಂದಾಪುರ, ಧರ್ಮಣ್ಣ ಹೋತಪೇಟ, ಶರಭಣ್ಣ ರಸ್ತಾಪುರ, ಶಾಂತಗೌಡ ಪಾಟೀಲ್, ಬಿಕ್ಷಣಗೌಡ, ಭೀಮಾಶಂಕರಗೌಡ ಹುಲಕಲ್, ಕಳಸಪ್ಪಗೌಡ ಶಖಾಪುರ, ರೇವಣಸಿದ್ದಪ್ಪಗೌಡ ಶೆಟಿಗೇರಾ, ಸಿದ್ದಪ್ಪ ಕನ್ಯಾಕೋಳೂರ, ಶಾಂತು ಪಾಟೀಲ್, ಶರಣಗೌಡ ಚಾಮನಾಳ, ಮಲ್ಲನಗೌಡ ತಿಪ್ಪನಳ್ಳಿ, ಚನ್ನಬಸವ ಹೊಸಕೇರಾ, ತಮ್ಮಣ್ಣಗೌಡ, ಮಂಜುನಾಥ ಬಿರಾದಾರ್ ಸೇರಿದಂತೆ ಇತರರಿದ್ದರು.

--

14ವೈಡಿಆರ್4: ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಕುರುಬ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.

Share this article