ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರ: ಎಚ್ಡಿಕೆಗೆ ಶಾಸಕ ಉದಯ್‌ ಎಚ್ಚರಿಕೆ

KannadaprabhaNewsNetwork | Published : Sep 7, 2024 1:32 AM

ಸಾರಾಂಶ

ಒಂದು ವೇಳೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಳಾಂತರ ಮಾಡುವ ಬದಲು ಮಂಡ್ಯದಲ್ಲೇ ಇನ್ನೊಂದು ಉಪ ಕೇಂದ್ರ ತೆರೆಯುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಿ. ಇದಕ್ಕೆ ನಮ್ಮ ಅಭಿಯಂತರವಿಲ್ಲ. ಅದನ್ನು ಬಿಟ್ಟು ಇಡೀ ಕೇಂದ್ರವನ್ನೇ ಸ್ಥಳಾಂತರ ಮಾಡುವುದರ ವಿರುದ್ಧ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಚಳವಳಿ ನಡೆಸಬೇಕಾದಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಮಂಡ್ಯಕ್ಕೆ ಸ್ಥಳಾಂತರ ಮಾಡುವ ಮೂಲಕ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಹುಮತ ನೀಡಿದ ಕ್ಷೇತ್ರದ ಜನರಿಗೆ ಬಹುದೊಡ್ಡ ಬಹುಮಾನ ನೀಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ವ್ಯಂಗ್ಯವಾಡಿದರು.

ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಹಾಲಿ ಮದ್ದೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರದಿಂದ ಮಂಡ್ಯ ಜಿಲ್ಲಾ ಜನರಿಗೆ ಸಾಕಷ್ಟು ಪ್ರಯೋಜನಗಳು ಆಗುತಿದ್ದವು. ಆದರೆ, ಕೇಂದ್ರವನ್ನು ಸಂಸದ ಕುಮಾರಸ್ವಾಮಿ ಅವರು ಮಂಡ್ಯ ನಗರಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸುತ್ತಿರುವುದು ಲೋಕಾಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ ಕ್ಷೇತ್ರದ ಜನರಿಗೆ ಕೆಡಕನ್ನು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಒಂದು ವೇಳೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಳಾಂತರ ಮಾಡುವ ಬದಲು ಮಂಡ್ಯದಲ್ಲೇ ಇನ್ನೊಂದು ಉಪ ಕೇಂದ್ರ ತೆರೆಯುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಿ. ಇದಕ್ಕೆ ನಮ್ಮ ಅಭಿಯಂತರವಿಲ್ಲ. ಅದನ್ನು ಬಿಟ್ಟು ಇಡೀ ಕೇಂದ್ರವನ್ನೇ ಸ್ಥಳಾಂತರ ಮಾಡುವುದರ ವಿರುದ್ಧ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಚಳವಳಿ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಮದ್ದೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೆ.9ಕ್ಕೆ ನಿಗದಿಯಾಗಿದೆ. ಪುರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದೆ. ಕಾಂಗ್ರೆಸ್ 3 ಸ್ಥಾನ ಹೊಂದಿದ್ದರೂ ಸಹ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿದರೆ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗುತ್ತದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನಾ ಅಕ್ರಮಗಳ ಕುರಿತಾಗಿ ತನಿಖೆ ಮಾಡಲು ಮುಂದಾಗಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹ ವಿಚಾರಣೆ ಆಯೋಗ ಮಧ್ಯಂತರ ವರದಿ ವಿವರಗಳನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದೆ. ಹಗರಣದಲ್ಲಿ 7223.58 ಕೋಟಿ ರು, ವೆಚ್ಚದಲ್ಲಿ ಬರೋಬರಿ 1.120 ಕೋಟಿ ರು. ಅವ್ಯವಹಾರ ನಡೆದಿರುವುದು ವರದಿಯಲ್ಲಿ ಬಹಿರಂಗಗೊಂಡಿದೆ. ಇದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ ಎಂದು ತಿಳಿಸಿದರು.

Share this article