- ಜಿಲ್ಲಾಡಳಿತ ಕ್ರಮದಿಂದ ರೈತರು, ಕಚೇರಿ ಸಿಬ್ಬಂದಿಗೆ ಅಲೆದಾಟ ತಪ್ಪಲ್ಲ: ಸತೀಶ್ ಅಸಮಾಧಾನ
- ತಾಲೂಕು ಕಚೇರಿಯಿಂದ ಶಿವಾಲಿ ಟಾಕೀಸ್ ಬಳಿ ಬಾಡಿಗೆ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಸರಿಯೇ?
- ಶಿಥಿಲ ಕಟ್ಟಡ ನೆಪದಲ್ಲಿ ಬಡರೈತರು, ಇಲಾಖೆ ನೌಕರರ ಸಮಸ್ಯೆಗಳನ್ನು ಜಿಲ್ಲಾಡಳಿತ ಪರಿಗಣಿಸಿಲ್ಲ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಎಪಿಎಂಸಿ ರೈತ ಭವನದ ತಾಲೂಕು ಕಚೇರಿಯಲ್ಲಿದ್ದ ಭೂ ಸರ್ವೇ ಮತ್ತು ಭೂ ದಾಖಲೆಗಳ ಕಚೇರಿಯನ್ನು ಸ್ಥಳಾಂತರಿಸಿದ್ದಾರೆ. ತಾಲೂಕು ಕಚೇರಿಯಲ್ಲೇ ಸರ್ವೇ ಕಚೇರಿ ಸಹ ಇದ್ದು, ತಹಸೀಲ್ದಾರ ಅಧೀನದಲ್ಲಿ ಇರುತ್ತದೆ. ಈಗ ಹೊಸ ಬಸ್ ನಿಲ್ದಾಣ ಎದುರಿನಲ್ಲಿ ಹಾಗೂ ಎಪಿಎಂಸಿ ಪ್ರಾಂಗಣದಲ್ಲೇ ಸರ್ವೆ ಇಲಾಖೆ ಇದ್ದುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿತ್ತು ಎಂದು ತಿಳಿಸಿದ್ದಾರೆ.
ಈ ಕುರಿತು ಎಡಿಎಲ್‌ಆರ್ ಕಸ್ತೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ಆಗ ಅವರು, ಈಗಿರುವ ಕಟ್ಟಡ ಶಿಥಿಲಗೊಂಡಿದೆ, ಮೇಲ್ಚಾವಣಿ ದುರ್ಬಲವಾಗಿದ್ದು, ಮಳೆ ಬಂದರೆ ಸೋರುತ್ತದೆ, ಯಾವ ಕ್ಷಣದಲ್ಲಾದರೂ ವಿದ್ಯುತ್ ಶಾರ್ಟ್ ಸಕ್ಯೂಟ್ ಆಗಬಹುದು. ಸಿಬ್ಬಂದಿಗೆ ಸೂಕ್ತ ರಕ್ಷಣೆ ಇಲ್ಲ, ಭೂ ದಾಖಲೆಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ಅನುಮೋದನೆ ಪಡೆದೇ, ಕಚೇರಿ ಸ್ಥಳಾಂತರಿಸಲು ತೀರ್ಮಾನಿಸಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಬಡರೈತರು, ಮಹಿಳೆಯರ ಸಮಸ್ಯೆ ಜಿಲ್ಲಾಡಳಿತ ಪರಿಗಣಿಸಿಲ್ಲ ಎಂದಿದ್ದಾರೆ.
ಬಾಕ್ಸ್ ಕಟ್ಟಡ ದುರಸ್ತಿಗೆ ಅಧಿಕಾರಿಗಳೇ ನಿರ್ಲಕ್ಷ್ಯ ಆದರೆ, ಶಿಥಿಲ ಕಟ್ಟಡವನ್ನು ದುರಸ್ತಿಗೆ ತಹಸೀಲ್ದಾರ್ ಕಚೇರಿಯಿಂದ ಎಪಿಎಂಸಿ ಕಚೇರಿಗೆ ಪತ್ರವನ್ನೇ ಬರೆದಿಲ್ಲ. ಕಳೆದ 3 ವರ್ಷಗಳಿಂದಲೂ ಜಿಲ್ಲಾಧಿಕಾರಿ ಅವರೇ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿದ್ದಾರೆ. ಆದರೂ, ತಾಲೂಕು ಕಚೇರಿಯ ಶಿಥಿಲ ಕಟ್ಟಡ ದುರಸ್ಥಿ ಕಡೆಗೆ ಗಮನ ಹರಿಸದಿರುವುದು ಸೋಜಿಗದ ಸಂಗತಿ ಎಂದು ಜಿಲ್ಲಾಧಿಕಾರಿ ಕಾರ್ಯವೈಖರಿ ಬಗ್ಗೆ ಬಿ.ಎಂ.ಸತೀಶ ಕೊಳೇನಹಳ್ಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.