ಶಿಗ್ಗಾಂವಿ ತಾಲೂಕು ಭಾವೈಕ್ಯದ ನೆಲ: ಜಿಲಾನಿ ಜಂಗ್ಲಿ

KannadaprabhaNewsNetwork | Published : Jul 2, 2025 12:19 AMUpdated   : Jul 02 2025, 12:20 AM IST
ಭಾವೈಕ್ಯತಾ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮುಖಂಡ ಜಿಲಾನಿ ಜಂಗ್ಲಿ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿನ ಸರ್ವ ಧರ್ಮದವರು ಕೂಡಿ ಆಚರಿಸುವ ಭಾವೈಕ್ಯ ಸಾರುವ ನಡಿಗೆಯಾಗಿದೆ.

ಶಿಗ್ಗಾಂವಿ: ಪರಂಪರಾಗತವಾಗಿ ಈ ಕ್ಷೇತ್ರ ಇಂದಿಗೂ ಭಾವೈಕ್ಯದ ನೆಲವಾಗಿದೆ. ಸರ್ವ ಧರ್ಮದ ಜನರಲ್ಲಿ ಸಮಾನತೆ, ಸೌಹಾರ್ದ ಕಾಣುತ್ತಿದ್ದೇವೆ. ಈ ವರ್ಷವೂ ಮೊಹರಂ ಅಂಗವಾಗಿ ಸರ್ವ ಧರ್ಮದ ಸಮುದಾಯದ ಸ್ವಾಮಿಗಳ ಸಹಯೋಗದಲ್ಲಿ ಜು. ೩ರಂದು ಮಧ್ಯಾಹ್ನ ೩ಕ್ಕೆ ಭಾವೈಕ್ಯತಾ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮುಖಂಡ ಜಿಲಾನಿ ಜಂಗ್ಲಿ ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ನಡೆದ ಭಾವೈಕ್ಯತಾ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿಗ್ಗಾಂವಿ ಸಾಲಗೇರಿ ಓಣಿಯ ಅಹಲೇ ಸುನ್ನತುಲ್ ಜಮಾತ, ಪುರಸಭೆ ಸದಸ್ಯೆ ನಸ್ರೀಬಾನು ಮುಕ್ತಾರಖಾನ ತಿಮ್ಮಾಪುರ ಅವರ ಸಹಯೋಗದಲ್ಲಿ ಭಾವೈಕ್ಯತಾ ನಡಿಗೆ ನಡೆಯಲಿದೆ. ಅಂದು ಪಟ್ಟಣದ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಿಂದ ಸರ್ವಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಮಾರ್ಕೆಟ್ ರಸ್ತೆ ಮಾರ್ಗವಾಗಿ ಸಾಲಗೇರಿ ಓಣಿಯ ದೊಡ್ಡ ದೇವರ ಮಸೀದಿಯವರೆಗೆ ಜರುಗಲಿದೆ. ನಂತರ ಮೊಹರಂ ದೇವರಿಗೆ ವಿಶೇಷ ಪೂಜೆ ಜರುಗಲಿದೆ ಎಂದರು.ಸಮಾಜ ಸೇವಕ ಮುಕ್ತಾರಖಾನ ತಿಮ್ಮಾಪುರ ಮಾತನಾಡಿ, ತಾಲೂಕಿನ ಸರ್ವ ಧರ್ಮದವರು ಕೂಡಿ ಆಚರಿಸುವ ಭಾವೈಕ್ಯ ಸಾರುವ ನಡಿಗೆಯಾಗಿದೆ ಎಂದರು.ವಿರಕ್ತಮಠ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಮಾಮಹುಸೇನ ಅದಂಬಾಯಿ, ರಬ್ಬಾನಿ ಗೋಟಗೋಡಿ, ಆಸ್ಕರ್ ಅಲಿ ಮುಳಕೇರಿ, ಹಜರೇಸಾಬ ಲಕ್ಷ್ಮೇಶ್ವರ, ಮೌಲಾಲಿ ಟಪಾಲ, ಮಕ್ಬುಲ್ ಅಹ್ಮದ ಗುಜ್ಜರ ಸೇರಿದಂತೆ ಹಲವರು ಇದ್ದರು.ಜಿಲ್ಲಾಸ್ಪತ್ರೆ ವೈದ್ಯರಿಗೆ ಸನ್ಮಾನ

ಹಾವೇರಿ: ವೈದ್ಯರ ದಿನಾಚರಣೆ ನಿಮಿತ್ತ ಇಲ್ಲಿಯ ಹೆಲ್ಪ್ ಎಜ್ಯುಕೇಶನಲ್ ಮತ್ತು ವೆಲ್‌ಫೆರ್ ಸೊಸೈಟಿ ವತಿಯಿಂದ ಜಿಲ್ಲಾಸ್ಪತ್ರೆ ವೈದ್ಯರನ್ನು ಸನ್ಮಾನಿಸಲಾಯಿತು.ನಗರದ ನಂ. 2 ಸರ್ಕಾರಿ ಶಾಲೆ ಮುಖ್ಯಾಧ್ಯಾಪಕ ಜಿ.ಆರ್. ಯಲವದಹಳ್ಳಿ ಮಾತನಾಡಿ, ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರು ಜೀವ ಉಳಿಸುವ ದೇವರಾಗಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದರು.ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಪರಸಪ್ಪ ಚುರ್ಚಿಹಾಳ, ನೇತ್ರ ತಜ್ಞ ಡಾ. ನಾಗೇಂದ್ರಪ್ಪ, ಶಸ್ತ್ರ ಚಿಕಿತ್ಸಕ ಡಾ. ನಿರಂಜನ ಮಾನಿಬಣಕಾರ, ಡಾ. ಗೌಸಮೋಹಿದ್ದಿನ ತಾಂಬೂಳಿ, ಸಂಘಟನೆ ಅಧ್ಯಕ್ಷ ಹಜರತಅಲಿ ಮೇಲ್ಮುರಿ, ಉಪಾಧ್ಯಕ್ಷ ಸಾಧಿಕ ಮೇಲ್ಮುರಿ, ಕಾರ್ಯದರ್ಶಿ ಗರೀಬಸಾಬ ಕಳ್ಳಿಹಾಳ, ಅಬ್ದುಲ್‌ಖಾದರ ಧಾರವಾಡ, ಹಬಿಬುಲ್ಲಾ ಮುಲ್ಲಾ ಇತರರು ಇದ್ದರು.

PREV