ಕನ್ನಡಪ್ರಭ ವಾರ್ತೆ ಇಂಡಿ
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಅವರು ಪ್ರಚಾರ ಪ್ರಿಯರಲ್ಲದ್ದರಿಂದ ಅವರು ಮಾಡಿರುವ ಕೆಲಸಗಳು ಪ್ರಚಾರ ಪಡೆದಿಲ್ಲ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಇಂತಹ ನಾಯಕರ ಅಗತ್ಯ ಇದೆ. ಆದ್ದರಿಂದ 2024ರ ಚುನಾವಣೆಯಲ್ಲಿ ಮತ್ತೇ ಇವರನ್ನೇ ಗೆಲ್ಲಿಸೋಣ. ಆದ್ದರಿಂದ ವರಿಷ್ಠರು ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ನಾನು ಮಾಡುವೆ ಎಂದರು.
ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು, 9 ವರ್ಷದಲ್ಲಿ 7 ರಾಷ್ಟ್ರೀಯ ಹೆದ್ದಾರಿ ವಿಜಯಪುರಕ್ಕೆ, ರೈಲ್ವೆ ಓವರ್ ಬ್ರಿಡ್ಜ್, ವಿದ್ಯುತ್ ಚಾಲಿತ ರೈಲು, ಬ್ರಾಡ್ಜಗೇಜ್, ಕೆರೆ ತುಂಬುವ ಯೋಜನೆ, ನೀರಾವರಿ, ವಿದ್ಯುತ್ ಸಂಗ್ರಹ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನೋಡಿ ತಿಳಿದುಕೊಳ್ಳಬೇಕು ಎಂದು ಹೇಳಿದರು.ಅಭಿವೃದ್ಧಿ ಮಾಡುವ ಹಂಬಲ ಸಂಸದರಲ್ಲಿ ಇನ್ನೂ ಸಾಕಷ್ಟು ಇದೆ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಠಿಯಿಂದ ಅವರನ್ನು ಮತ್ತೇ ಗೆಲ್ಲಿಸಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸೋಣ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ರಾಷ್ಟ್ರೀಯ ನಾಯಕರು ನೀಡಬೇಕು. ಸಂಸದ ಜಿಗಜಿಣಗಿ ಅವರು ಸಜ್ಜನ ರಾಜಕಾರಣಿಯಾಗಿ, ಜಾತ್ಯಾತೀತ ಮನೋಭಾವ, ಗುರುಹಿರಿಯರ ಮೇಲೆ ಪ್ರೀತಿ, ಹಿರಿಯರ ಜೊತೆ ಹಿರಿಯರಾಗಿ,ಕಿ ರಿಯರ ಜೊತೆ ಕಿರಿಯರಾಗಿ ಬೆರೆತು, ಪಕ್ಷ ಸಂಘಟನೆಯ ಜೊತೆಗೆ ಸರ್ವರ ಹೃದಯದಲ್ಲಿ ಮನೆ ಮಾತಾಗಿದ್ದಾರೆ ಎಂದರು.