ಡಾ. ಆರ್.ಎಸ್. ಜೀರೆ ಜನ್ಮದಿನಾಚರಣೆ: ಗಜೇಂದ್ರಗಡದಲ್ಲಿ ಅನ್ನಸಂತರ್ಪಣೆ

KannadaprabhaNewsNetwork |  
Published : Dec 18, 2023, 02:00 AM IST
ಗಜೇಂದ್ರಗಡ ಡಾ.ಆರ್.ಎಸ್.ಜೀರೆ ಜನ್ಮದಿನಾಚರಣೆ ನಿಮಿತ್ತ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಅನ್ನಸಂತರ್ಪಣೆ ನಡೆಯಿತು. | Kannada Prabha

ಸಾರಾಂಶ

ವೈದ್ಯ, ಸಮಾಜಸೇವಕ ಆರ್.ಎಸ್. ಜೀರೆ ಅವರ ಜನ್ಮ ದಿನಾಚರಣೆ ನಿಮಿತ್ತ ಭಾನುವಾರ ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಡಾ. ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಜೀರೆ ಅಭಿಮಾನಿಗಳು ಅನ್ನ ಸಂತರ್ಪಣೆ ನಡೆಸಿದರು.

ಡಾ. ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಜೀರೆ ಅಭಿಮಾನಿಗಳಿಂದ ಕಾರ್ಯಕ್ರಮ

ಗಜೇಂದ್ರಗಡ: ವೈದ್ಯ, ಸಮಾಜಸೇವಕ ಆರ್.ಎಸ್. ಜೀರೆ ಅವರ ಜನ್ಮ ದಿನಾಚರಣೆ ನಿಮಿತ್ತ ಭಾನುವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಡಾ. ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಜೀರೆ ಅಭಿಮಾನಿಗಳು ಅನ್ನ ಸಂತರ್ಪಣೆ ನಡೆಸಿದರು.ಈ ವೇಳೆ ಡಾ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ರಫೀಕ್ ತೋರಗಲ್ ಮಾತನಾಡಿ, ವೈದ್ಯರಾಗಿರುವ ಡಾ.ಆರ್.ಎಸ್. ಜೀರೆ ಅವರು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದು ಬಡ ರೋಗಿಗಳ ಪಾಲಿಗೆ ಆಶಾಕಿರಣದಂತೆ ಕಾಣುತ್ತಿದ್ದಾರೆ. ಎಲ್ಲವೂ ದುಬಾರಿ ಎಂಬ ದಿನಮಾನದಲ್ಲಿ ಕಳೆದ ೩೦ಕ್ಕೂ ಅಧಿಕ ವರ್ಷಗಳಿಂದ ಪಟ್ಟಣದಲ್ಲಿ ₹೫ಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ, ಚಿಕಿತ್ಸೆ ಎನ್ನುವುದು ಹಣ ಗಳಿಸುವ ದಾರಿಯಾಗಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.

ಸ್ಪರ್ಧಾತ್ಮಕ ಜೀವನದಲ್ಲಿ ಶಿಕ್ಷಣವು ಅತಿ ಅವಶ್ಯಕ. ಹೀಗಾಗಿ ಪ್ರತಿಯೊಬ್ಬರೂ ಅದರಲ್ಲೂ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲಿ ಎಂಬ ಆಶಯದೊಂದಿಗೆ ಸೃಶತಾ ಪ್ಯಾರಾ ಮೆಡಿಕಲ್ ಹಾಗೂ ಸಾಯಿದತ್ತಾ ಸ್ಕೂಲ್ ಆಫ್ ನರ್ಸಿಂಗ್ ಆರಂಭಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಿದ್ದು ಅನುಕರಣೀಯ ಎಂದರು.ಮುಖಂಡರಾದ ಶರಣಪ್ಪ ಚಳಗೇರಿ, ಕಳಕಪ್ಪ ಪೋತಾ ಮಾತನಾಡಿ, ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿನ ಬಡ ರೋಗಿಗಳ ಪಾಲಿಗೆ ನೆರಳಿನಂತೆ ಕೆಲಸ ನಿರ್ವಹಿಸುವ ಜತೆಗೆ ಶೈಕ್ಷಣಿಕ ಕಾಳಜಿ ಹಾಗೂ ಸಾಮಾಜಿಕ ಸೇವೆ ಮೂಲಕ ಜನತೆಗೆ ಚಿರಪರಿಚಿತವಾಗಿರುವ ಡಾ. ಆರ್.ಎಸ್. ಜೀರೆ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು, ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ಹಾಗೂ ಸಾರ್ವಜನಿಕರಿಗೆ ಪಲಾವ್ ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜೀರೆ ಅವರ ಸಾಮಾಜಿಕ ಕಾಳಜಿಯನ್ನು ಅಕ್ಷರ ಸಹ ಅವರ ಅಭಿಮಾನಿಗಳು ಹಾಗೂ ಡಾ. ಅಬ್ದುಲ್ ಕಲಾಂ ಟ್ರಸ್ಟ್‌ ಪದಾಧಿಕಾರಿಗಳು ಮೈಗೂಡಿಸಿಕೊಂಡಿರುವುದು ಸ್ವಾಗತಾರ್ಹ ಎಂದರು.

ಮುತ್ತಣ್ಣ ಗೊರವರ, ಖಾಜಾಹುಸೇನ ವಸ್ತಾದ, ಉಮೇಶ ಕಲಮಶೆಟ್ಟಿ, ಜಾಫರ ಗೊಲಗೇರಿ, ಮಹ್ಮದ ಅಕ್ಕಿ, ರೋಣಪ್ಪ ಹಲಗಿ, ಮೈಬುಸಾಬ ಬಳ್ಳಾರಿ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ