ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಬೈಪಾಸ್ ರಸ್ತೆಯಲ್ಲಿ ಸೇತುವೆ ಸಮೀಪ ವಾಹನ ದಟ್ಟಣೆ ಹೆಚ್ಚು. ಈ ಹಿನ್ನೆಲೆ ಹಳೇ ಸೇತುವೆ ಪಕ್ಕದಲ್ಲಿಯೇ ಮತ್ತೊಂದು ಸೇತುವೆ ನಿರ್ಮಿಸಲಾಗಿದೆ. ₹20.16 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ವಿಶಾಲವಾದ ರಸ್ತೆ, ಪಾದಚಾರಿಗಳಿಗೆ ವಾಕಿಂಗ್ ಪಾತ್ ಇದೆ.
ಉದ್ಘಾಟನೆ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಭಾಗಕ್ಕೆ ಸೇತುವೆಯ ಅಗತ್ಯವಿತ್ತು. ₹20.16 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಈ ಹಿಂದೆ ಒಂದು ಸರ್ಕಾರ ಶಂಕುಸ್ಥಾಪನೆ ನೆರವೇರಿಸಿ, ಮತ್ತೊಂದು ಸರ್ಕಾರ ಬಂದಾಗ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಈಗ ಗುತ್ತಿಗೆದಾರರು ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೆ ಬೋನಸ್ ದೊರೆಯಲಿದೆ. ಹಾಗಾಗಿ, ಎಲ್ಲ ಕಾಮಗಾರಿಗಳು ವೇಗ ಪಡೆದಿವೆ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಬಹು ವರ್ಷದಿಂದ ಇಲ್ಲಿ ಸೇತುವೆಯ ಅಪೇಕ್ಷೆ ಇತ್ತು. ಸಂಸದ ರಾಘವೇಂದ್ರ ಅದನ್ನು ಈಡೇರಿಸಿದ್ದಾರೆ. ಯಡಿಯೂರಪ್ಪ, ರಾಘವೇಂದ್ರ ಅವರು ಮಲಗಿದ್ದಾಗ ಕನಸು ಕಾಣಲಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಜನ ಕಂಡ ಕನಸನ್ನು ನನಸು ಮಾಡಿದ್ದಾರೆ ಎಂದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್, ಸಂತೋಷ್ ಬಳ್ಳಕೆರೆ, ಅನಿತಾ ರವಿಶಂಕರ್, ಲಕ್ಷ್ಮೀನಾಯಕ್ ಸೇರಿದಂತೆ ಹಲವರಿದ್ದರು.- - - -17ಎಸ್‌ಎಂಜಿಕೆಪಿ05:
ಶಿವಮೊಗ್ಗ ನಗರದ ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ನೂತನ ಸೇತವೆಯನ್ನು ಭಾನುವಾರ ಸಂಸದ ಬಿ.ವೈ.ರಾಘವೇಂದ್ರ ಲೋಕಾರ್ಪಣೆ ಮಾಡಿದರು.