- ವಾಣಿಜ್ಯ, ನಾಗರಿಕರ ಹಿತದೃಷ್ಠಿಯಿಂದ ಸಂಸದರಿಗೂ ಮನವಿ: ಶಂಕರ ಖಟಾವಕರ್ ಹೇಳಿಕೆ- - - ಕನ್ನಡಪ್ರಭ ವಾರ್ತೆ ಹರಿಹರ ನಗರದೊಳಗೆ ಹಾದುಹೋಗಿರುವ ಶಿವಮೊಗ್ಗ ಮತ್ತು ಹೊಸಪೇಟೆ ಹೆದ್ದಾರಿ ಅಭಿವೃದ್ಧಿ ಚರ್ಚೆಗಳು ನಡೆದಿವೆ. ರಸ್ತೆ ಅಭಿವೃದ್ಧಿ ಬದಲು ಛೇಂಬರ್ ಆಫ್ ಕಾಮರ್ಸ್‍ನಿಂದ ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಒತ್ತಡ ಹೇರಲಾಗುತ್ತಿದೆ ಎಂದು ಹರಿಹರ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮರ್ಚೆಂಟ್ಸ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಶಂಕರ್ ಖಟಾವ್‍ಕರ್ ಹೇಳಿದರು.
ನಗರದ ನಡುವೆ ರಸ್ತೆ ಇದೆ. ಅಭಿವೃದ್ಧಿ ಕಾರ್ಯದಿಂದ ರಸ್ತೆ ಅಕ್ಕಪಕ್ಕದ ವರ್ತಕರ ಮಳಿಗೆಗಳನ್ನು ತೆರವುಗೊಳಿಸಲಾಗುತ್ತದೆ. ಅಲ್ಲದೇ, ವಿಪರೀತ ವಾಹನಗಳ ಸಂಚಾರದಿಂದ ವರ್ತಕರಿಗೆ, ಗ್ರಾಹಕರಿಗೆ, ಸ್ಥಳೀಯರಿಗೆ ಹಾಗೂ ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಆದಕಾರಣ ಸಂಸ್ಥೆ ವತಿಯಿಂದ ಬೈಪಾಸ್ ರಸ್ತೆ ನಿರ್ಮಿಸಬೇಕೆಂದು ಸಂಸದರಿಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ನಗರದ ಅಭಿವೃದ್ಧಿ ಆಗುತ್ತಿಲ್ಲ. ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮತ್ತಿಲ್ಲ. ವಿಶಾಲವಾದ ಎಪಿಎಂಸಿ ಮಾರುಕಟ್ಟೆ ಇದ್ದರೂ, ರೈತರು ಅಕ್ಕಪಕ್ಕದ ದಾವಣಗೆರೆ ರಾಣೇಬೆನ್ನೂರು ಎಪಿಎಂಸಿಗೆ ಕೃಷಿ ಉತ್ಪನ್ನ ಸಾಗಿಸಬೇಕಾಗಿದೆ. ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಬೇಡಿಕೆಯಿದ್ದರೂ ಅದು ಆಗುತ್ತಿಲ್ಲ ಎಂದರು.ಹರಿಹರ ರೈಲ್ವೆ ನಿಲ್ದಾಣಕ್ಕೆ ಬರುವ ರೈಲುಗಳನ್ನು 3ನೇ ಪ್ಲಾಟ್‍ಫಾರ್ಮ್‍ನಲ್ಲಿ ನಿಲುಗಡೆ ಮಾಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. 1ನೇ ಪ್ಲಾಟ್‍ಫಾರನಲ್ಲಿ ನಿಲ್ಲಿಸುವಂತೆ ಛೇಂಬರ್ ಆಫ್ ಕಾಮರ್ಸ್‍ನಿಂದ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
- - - -22ಎಚ್‍ಆರ್‍ಆರ್3:
ಹರಿಹರದ ಛೇಂಬರ್ ಆಫ್ ಕಾಮರ್ಸ್ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಶಂಕರ್ ಖಟಾವ್‍ಕರ್ ಮಾತನಾಡಿದರು.