ಶಿಮುಲ್‌ ಚುನಾವಣೆ: ಅಂತಿಮ ಕಣದಲ್ಲಿ ಉಳಿದವರು 41 ಮಂದಿ

KannadaprabhaNewsNetwork |  
Published : Aug 09, 2024, 12:32 AM IST
 ಶಿಮುಲ್‌ ಹಾಲು ಒಕ್ಕೂಟ. | Kannada Prabha

ಸಾರಾಂಶ

ಶಿಮುಲ್‌ ಚುನಾವಣೆಗೆ ಆ.6 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿತ್ತು. 64 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 41 ಮಂದಿ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆ‌.14 ರಂದು ನಡೆಯಲಿರುವ ಶಿಮುಲ್‌ ಹಾಲು ಒಕ್ಕೂಟದ ಚುನಾವಣೆಗೆ 41 ಜನ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.

ಚುನಾವಣೆಗೆ ಆ.6 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿತ್ತು. 64 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 41 ಮಂದಿ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.

ಕೆಂಚೇನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ ಎಸ್.ಕುಮಾರ್, ಬುಳ್ಳಾಪುರದ ಹಾಲು ಉತ್ಪಾದಕರ ಸಂಘದಿಂದ ಹೆಚ್.ಬಿ.ದಿನೇಶ್, ಯಡವಾಲ ಹಾಲು ಉತ್ಪಾದಕರ ಸಂಘದಿಂದ ಕೆ.ಎಲ್.ಜಗದೀಶ್ವರ್, ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಆನಂದ್ ಡಿ, ತ್ಯಾಜವಳ್ಳಿ ಹಾಲು ಒಕ್ಕೂಟದಿಂದ ಟಿ.ಬಿ.ಜಗದೀಶ್ವರ್, ದೊಡ್ಡ ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಬಿ.ಡಿ.ಭೂಕಾಂತ್, ಹಿರೇಮಾಗಡಿ ಹಾಲು ಉತ್ಪಾದಕರ ಸಂಘದಿಂದ ಗಂಗಾಧರಪ್ಪ, ಹಿರೇಜಂಬೂರು ಹಾಲು ಒಕ್ಕೂಟದಿಂದ ಶಿವಶಂಕರಪ್ಪ, ತ್ಯಾವಗೋಡುಹಾಲು ಒಕ್ಕೂಟದಿಂದ ಟಿ‌.ಎಸ್.ದಯಾನಂದ್‌ ದಾವಣಗೆರೆ ವಿಭಾಗದಲ್ಲಿ ಹಿರೇಗೋಣಿ ಗೆರೆಯ ಹಾಉ ಉತ್ಪಾದಕರ ಸಂಘದಿಂದ ಬಿ.ಎಂ.ಬಸವರಾಜಪ್ಪ ಕುರುವ ಹಾಲು ಒಕ್ಕೂಟದಿಂದ ಕೆ.ಜಿ.ಸುರೇಶ್‌, ಕಂಚುಗಾರನಹಳ್ಳಿ ಹಾಲು ಒಕ್ಕೂಟದಿಂದ ಎಚ್.ಕೆ.ಬಸಪ್ಪ, ಹನಗವಾಡಿ ಹಾಲುಒಕ್ಕೂಟದಿಂದ ಜಗದೀಶಪ್ಪ ಬಣಕಾರ್, ಗೋಪನಾಳು ಹಾಲು ಒಕ್ಕೂಟದಿಂದ ಎಚ್.ಕೆ.ಪಾಲಾಕ್ಷಪ್ಪ, ಕುಂದೂರು ಹಾಲು ಒಕ್ಕೂಟದಿಂದ ವೈ.ಎಂ.ಅನಿಲ್ ಕುಮಾರ್ , ಕತ್ತಲಗೆರೆ ಹಾಲು ಒಕ್ಕೂಟದಿಂದ ಕೆ.ನಾಗರಾಜ್, ಹನುಮನಹಳ್ಳಿ ಹಾಲು ಒಕ್ಕೂಟದಿಂದ ಬಿ.ಜಿ. ಬಸವರಾಜಪ್ಪ, ಬಿ.ಕಲಪನಹಳ್ಳಿ ಹಾಲು ಒಕ್ಕೂಟದಿಂದ ಚೇತನ ಎಸ್ ನಾಡಿಗೆರ, ಯಲವಟ್ಟಿ ಹಾಲು ಒಕ್ಕೂಟದಿಂದ ಶಾಂತವೀರಪ್ಪ, ಚಿತ್ರದುರ್ಗ ವಿಭಾಗದಲ್ಲಿ ಬಬ್ಬೂರು ಹಾಲು ಒಕ್ಕೂಟದಿಂದ ಜಿ.ಪಿ.ಯಶವಂತರಾಜು, ಕೊರಟೀಕೆರೆ ಹಾಲು ಉತ್ಪಾದಕ ಸಂಘದಿಂದ ರಮೇಶಪ್ಪ, ಸಿರಿಗೆರೆ ಹಾಲೂ ಒಕ್ಕೂದಿಂದ ತಿಪ್ಪೇಸ್ವಾಮಿ, ಓಬವ್ವ ನಾಗಶಿಹಳ್ಳಿ ಹಾಲು ಒಕ್ಕೂಟದಿಂದ ರೇವಣಸಿದ್ದಪ್ಪ, ಟಿ.ನೂಲೆನೂರು ಜಿ.ಬಿ.ಶೇಖರಪ್ಪ, ತಾರೇಕೆರೆ ಶಂಕರಲಿಂಗಪ್ಪ, ನರಿಹರನಗರ ಹಾಲು ಉತ್ಪಾದಕರ ಸಂಘ ಬಿ.ಸಿ.ಸಂಜೀವಮೂರ್ತಿ, ಯಾದಲಗಟ್ಟೆ ಹಾಲು ಒಕ್ಕೂಟದಿಂದ ಸಿ.ವೀರಭದ್ರಬಾಬು, ಈರಣ್ಣನಪಾಳ್ಯ ಹಾಲು ಉತ್ಪಾದಕ ಒಕ್ಕೂಟದಿಂದ ಕಾಂತರಾಜು, ಚಿಲ್ಲನಹಳ್ಳಿ ಹಾಲು ಉತ್ಪಾದಕ ಒಕ್ಕೂಟದಿಂದ ಶಿವಣ್ಣ ಪಿ.ಎಲ್. ಎ.ಎಂ ಶಿವಾನಂದ, ಬಿ.ಆರ್ ರವಿಕುಮಾರ್ ಕಣದಲ್ಲಿ ಉಳಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಣ್ಣಿಹಳ್ಳದ ಪೂರ್ಣ ಯೋಜನೆಗೆ ಅನುಮೋದನೆ ನೀಡಿ: ಮುನೇನಕೊಪ್ಪ
ಪಾಲಕರೇ, ಡಿಜಿಟಲ್ ಉಪವಾಸಕ್ಕೆ ಸಿದ್ಧರಾಗಿ