ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕಿನ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಥಾಮಸ್ ಜೈಕಾರ್ ನೇತೃತ್ವದಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ವಾಹನ ಚಾಲಕರು ನೂತನ ಜಿಲ್ಲಾಧ್ಯಕ್ಷ ಚಲುವರಾಜು ಅವರಿಗೆ ಬಾರಿ ಗಾತ್ರದ ಹಾರ ಹಾಕಿ ಶಾಲು ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ತಾಲೂಕು ಅಧ್ಯಕ್ಷ ಥಾಮಸ್ ಜೈಕಾರ್ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರು ಮಂಡ್ಯ ಜಿಲ್ಲೆಯ ಎಲ್ಲಾ ಸರ್ಕಾರಿ ವಾಹನ ಚಾಲಕರ ಹಿತ ಕಾಯುವ ಮೂಲಕ ಸಂಘದ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯಬೇಕು ಎಂದರು.ಈ ವೇಳೆ ಆರೋಗ್ಯ ಇಲಾಖೆ ವಾಹನ ಚಾಲಕರಾದ ಜೋನ್, ಸುರೇಶ್, ಸತೀಶ್, ಬಿರೇಶ್, ನಾಗೇಂದ್ರ, ಪ್ರವೀಣ್, ಪಾಂಡವಪುರ ಶಿವಲಿಂಗು ಇತರರು ಇದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಷ್ಠಾನದ ಉದ್ಘಾಟನೆ ಹಾಗೂ ಜನಮುಖಿ ಅಧಿಕಾರಿ ಪ್ರಶಸ್ತಿಯನ್ನು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಅವರಿಗೆ ವಿಶ್ರಾಂತ ಅಪರ ಮುಖ್ಯ ಕಾರ್ಯದರ್ಶಿ ಡಾ.ಚಿರಂಜೀವಿ ಸಿಂಗ್ ನೀಡುವರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಎಂ.ಎನ್.ಮಹೇಶ್‌ಕುಮಾರ್ ಅವರಿಗೆ ನೀಡಿ ಗೌರವಿಸುವರು. ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರವನ್ನು ಹನಿಯಂಬಾಡಿಯ ಎಚ್.ಎಂ.ಅನುಷಾ, ಮಂಗಲ ಗ್ರಾಮದ ಪ್ರಮೋದಿನಿ ಅವರಿಗೆ ಬೆಂಗಳೂರಿನ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ.ವೆಂಕಟಪ್ಪ ನೀಡಲಿದ್ದಾರೆ ಎಂದು ನುಡಿದರು.ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿನಂದನಾ ನುಡಿಗಳನ್ನಾಡುವರು. ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮತ್ತು ಎಂ.ಆರ್.ಶಶಿಕಲಾ ಉಪಸ್ಥಿತರಿರುವರು ಎಂದು ಹೇಳಿದರು.