ಶಿರಾ ತಾಲೂಕು ಶಾಶ್ವತ ನೀರಾವರಿ ಪ್ರದೇಶವಾಗಲಿದೆ

KannadaprabhaNewsNetwork |  
Published : Feb 03, 2026, 01:15 AM IST
೨ಶಿರಾ೨: ಶಿರಾ ತಾಲೂಕಿನ ಮದಲೂರು ಗ್ರಾಮ ಪಂಚಾಯತಿ ನೂತನ ಕಟ್ಟಡಕ್ಕೆ ಶಾಸಕ ಟಿ.ಬಿ.ಜಯಚಂದ್ರ ಶಂಕು ಸ್ಥಾಪನೆ ನೆರವೇರಿಸಿದರು.  | Kannada Prabha

ಸಾರಾಂಶ

ತಾಲೂಕಿಗೆ ಕಳೆದ ೨೩ ವರ್ಷಗಳಿಂದ ಹೇಮಾವತಿ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಭದ್ರ ಮೇಲ್ದಂಡೆ ಯೋಜನೆ, ಎತ್ತಿನ ಹೋಳೆ ಯೋಜನೆ ನೀರು ಹರಿಯುತ್ತದೆ. ಆ ನಂತರ ಶಿರಾ ತಾಲೂಕು ಸುಭಿಕ್ಷವಾಗುತ್ತದೆ. ಶಾಶ್ವತ ನೀರಾವರಿ ಆಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿಗೆ ಕಳೆದ ೨೩ ವರ್ಷಗಳಿಂದ ಹೇಮಾವತಿ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಭದ್ರ ಮೇಲ್ದಂಡೆ ಯೋಜನೆ, ಎತ್ತಿನ ಹೋಳೆ ಯೋಜನೆ ನೀರು ಹರಿಯುತ್ತದೆ. ಆ ನಂತರ ಶಿರಾ ತಾಲೂಕು ಸುಭಿಕ್ಷವಾಗುತ್ತದೆ. ಶಾಶ್ವತ ನೀರಾವರಿ ಆಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.

ತಾಲೂಕಿನ ಮದಲೂರು ಗ್ರಾಮ ಪಂಚಾಯತಿ ನೂತನ ಕಟ್ಟಡ ಶಂಕು ಸ್ಥಾಪನೆ ಅಂಗವಾಗಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಶಿರಾ ತಾಲೂಕಿನಲ್ಲಿ ನೂತನ ತಾಲೂಕು ಪಂಚಾಯಿತಿ ಕಟ್ಟಡಗಳು ಸಮರೋಪಾದಿಯಲ್ಲಿ ನಿರ್ಮಾಣವಾಗುತ್ತಿವೆ. ಇಲ್ಲಿಯವರೆಗೆ ಸುಮಾರು ೧೮ ಗ್ರಾ.ಪಂ. ಕಟ್ಟಡಗಳು ನಿರ್ಮಾಣವಾಗಿವೆ. ಎಲ್ಲಾ ಗ್ರಾ.ಪಂ. ಕಟ್ಟಡಗಳಿಗೂ ಸುಮಾರು ೧೦ ಲಕ್ಷ ರು. ಅನುದಾನ ನೀಡಿದ್ದೇನೆ. ಮದಲೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ರಾಧಾಕೃಷ್ಣ ಶೆಟ್ಟಿ ಕುಟುಂಬದವರು ಸುಮಾರು ೧೦ ಗುಂಟೆ ಜಮೀನು ದಾನ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

ದಿಶಾ ಸಮಿತಿ ಸದಸ್ಯ ಮದಲೂರು ನರಸಿಂಹಮೂರ್ತಿ ಮಾತನಾಡಿ, ಬರದ ನಾಡಾಗಿದ್ದ ಶಿರಾ ತಾಲೂಕಿಗೆ ಹೇಮಾವತಿ ನೀರು ತಂದು ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ಅವರ ಕಾರ್ಯ ಎಲ್ಲಾ ಕಾಲಕ್ಕೂ ತಾಲೂಕಿನ ಜನತೆ ಮರೆಯಲು ಸಾಧ್ಯವಿಲ್ಲ ಹಾಗೂ ರಾಧಾಕೃಷ್ಣ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿ ನೀಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾಂಗ್ರೆಸ್ ಯುವ ಮುಖಂಡ ಡಿ.ಸಿ.ಅಶೋಕ್ ಮಾತನಾಡಿ ಶಾಸಕ ಟಿ.ಬಿ.ಜಯಚಂದ್ರ ಅವರು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿದ ಪರಿಣಾಮ ಅಂತರ್ಜಲ ಹೆಚ್ಚಾಗಿದೆ. ತಾಲೂಕಿನ ಜನತೆ ಅವರ ಕಾರ್ಯವನ್ನು ಮರೆಯಬಾರದು ಎಂದರು. ಮದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಭೂದಾನ ನೀಡಿದ ರಾಧಾಕೃಷ್ಣ ಶೆಟ್ಟಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಮೇಶಪ್ಪ, ಮುಖಂಡ ಶ್ರೀರಂಗ ಯಾದವ್ ,ಸದಸ್ಯರಾದ ರಾಧ ಶಿವಕುಮಾರ್, ಲತಾ, ರಂಗನಾಥ್, ಲೀಲಾ, ಸುಮಿತ್ರಮ್ಮ, ಪಟೇಲ್ ಈರಣ್ಣ, ಶಾಂತಮ್ಮ, ಚಂದ್ರಣ್ಣ, ಚಂದ್ರಶೇಖರ, ಸಾವಿತ್ರಮ್ಮ ,ತ್ರಿವೇಣಿ, ಎಇಇ ರಾಜಣ್ಣ, ಪಿಡಿಒ ಕರಿಯಪ್ಪ, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಡಿ.ವೈ.ಗೋಪಾಲ್, ಉಪನ್ಯಾಸಕ ಗುಡ್ಡಣ್ಣ, ಮುಖಂಡರಾದ ಯಶೋಧರ, ಸಿದ್ದಲಿಂಗ ಮೂರ್ತಿ, ನಾಗೇಂದ್ರಪ್ಪ ಸೇರಿದಂತೆ ಹಲವಾರು ಮುಖಂಡರು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ