ತಾಲೂಕಿನ ಶಿರಗೋಡು ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಭಾನುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಶಿರಗೋಡು ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಭಾನುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.
ದೇವಾಲಯದಲ್ಲಿ ರಥೋತ್ಸವ ಅಂಗವಾಗಿ ತೇರಿಗೆ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿ ಸ್ವಾಮಿಯನ್ನು ಇಟ್ಟು ಪೂಜೆ ಸಲ್ಲಿಸಿ ಬಳಿಕ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.
ಈ ವೇಳೆ ಭಕ್ತರು ಗೋವಿಂದ ಗೋವಿಂದ ನಾಮಸ್ಮರಣೆಯ ಮೂಲಕ ಕಣ್ತುಂಬಿಕೊಂಡರು. ರಥಕ್ಕೆ ಹಣ್ಣು-ದವನ ಎಸೆದು ಭಕ್ತರು ಹರಕೆ ತೀರಿಸಿದರು. ಪ್ರಧಾನ ಅರ್ಚಕ ರಾಮಕೃಷ್ಣ ಅವರ ನೇತೃತ್ವದಲ್ಲಿ ಬೆಳಗಿನಿಂದ ದೇವಾಲಯದ ಲಕ್ಷ್ಮಿ ವೆಂಕಟೇಶ್ವರ ಪದ್ಮಾವತಿಗೆ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನಡೆಯಿತು.2ನೇ ಚಿಕ್ಕ ತಿರುಪತಿ ಖ್ಯಾತಿ:
ಲಕ್ಷ್ಮೀ ವೆಂಕಟರಮಣ ದೇಗುಲಕ್ಕೆ ಚಿಕ್ಕ ತಿರುಪತಿಯಂದೇ ಪ್ರಖ್ಯಾತಿ ಪಡೆದಿದೆ. ಭಕ್ತರ ದಂಡು:
ರಥೋತ್ಸವಕ್ಕೆ ಸುತ್ತಲಿನ ಲೊಕ್ಕನಹಳ್ಳಿ, ಉದ್ದನೂರು, ಬೆಳ್ತೂರು, ಮಹಾಲಿಂಗನ ಕಟ್ಟೆ ಹನೂರು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಭಕ್ತರ ಭದ್ರತೆಗೆ ಪೊಲೀಸರ ಬಂದೋಬಸ್ತ್ ಒದಗಿಸಲಾಗಿತ್ತು. ದೇಗುಲದ ವತಿಯಿಂದ ಅನ್ನದಾಸೋಹ, ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.