ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಕೆ.ಎಲ್.ಇ ಕಾಲೇಜಿನ ಸಭಾ ಭವನದಲ್ಲಿ ಕೆಎಲ್ಇ ಸಂಸ್ಥೆ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕೆಎಲ್ಇ ಅಂಗಸಂಸ್ಥೆಗಳ ವತಿಯಿಂದ ನಾಡು ಕಂಡ ಅಪ್ರತಿಮ ತ್ಯಾಗವೀರ ಸಿರಸಂಗಿ ಲಿಂಗರಾಜ ಅವರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬು ರೈತ ಎಂಬುದನ್ನು ಮನಗಂಡಿದ್ದ ಲಿಂಗರಾಜರು ತಮ್ಮ 150 ಎಕರೆ ಹೊಲದಲ್ಲಿ ಕೃಷಿ ತರಬೇತಿ ಶಾಲೆ ಸ್ಥಾಪಿಸಿ, ಭೂ ಅಭಿವೃದ್ಧಿ ನೀರಾವರಿ ಯೋಜನೆಗಳಿಗಾಗಿ ಹಲವಾರು ಕೆರೆಗಳನ್ನು ಕಟ್ಟಿಸಿದ್ದಾರೆ. ಅವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಅವರ ದೂರದೃಷ್ಟಿತ್ವದಿಂದಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭವಾದವು. ಕೃಷಿಯನ್ನೇ ನಂಬಿದ್ದ ಲಿಂಗಾಯತ ಸಮುದಾಯವು ಶಿಕ್ಷಣದತ್ತ ಒಲವು ತೋರುವಂತೆ ಮಾಡಿದರು. ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಆ ಕಾಲದಲ್ಲಿಯೇ ಸಹಕಾರ ತತ್ವದ ಅಡಿ ಕೃಷಿಕರಿಗಾಗಿ ಮಾರುಕಟ್ಟೆ ನಿರ್ಮಾಣ, ಹೀಗೆ ಹತ್ತು ಹಲವು ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.ಪ್ರಾಚಾರ್ಯ ಎಸ್.ಐ ಕುಂದಗೋಳ ಮಾತನಾಡಿ, ಸಿರಸಂಗಿ ಲಿಂಗರಾಜರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರು ಎಲ್ಲಾ ಆಸ್ತಿ ದಾನ ಮಾಡಿದರು. ಅಪರೂಪದ ಸಾಧಕರಲ್ಲಿ ಇವರು ಕೂಡ ಒಬ್ಬರು. ಲಿಂಗರಾಜರು ವಿದ್ಯಾದಾನ ಮಾಡಿ ಸರಸ್ವತಿ ಮಾನಸ ಪುತ್ರರಾದರು ಎಂದರು.
ಈ ಟ್ರಸ್ಟ್ ಈಗಲೂ ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮುಂದುವರಿಸಿದೆ. ಇದರ ಸಹಾಯ ಪಡೆದ ಪ್ರಮುಖರಲ್ಲಿ ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪ ಕುಂಬಾರ ಸೇರಿ ಇನ್ನೂ ಅನೇಕ ಮಹನೀಯರಿದ್ದಾರೆ ಎಂದು ತಿಳಿಸಿದರು.