ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜಸ್ಥಾನ್ ಸಮಾಜದವರು ಇಂದು ನಡೆದ ಭಾವೈಕ್ಯಯತೆಯ ಸಮಾನತೆ ಸಂದೇಶ ಸಾರುವ ಧರ್ಮ ರಥದ ಮೆರವಣಿಗೆಯಲ್ಲಿ ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದುಕೊಂಡು, ಕನ್ನಡದ ಶಲ್ಯಗಳನ್ನು ಹಾಕಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ತಮಗೆ ಆಶ್ರಯ ನೀಡಿರುವ ಕನ್ನಡದ ಮಣ್ಣಿನ ಋಣ ತೀರಿಸುವ ದಿಕ್ಕಿನಲ್ಲಿ ಭಾವೈಕ್ಯತೆಯ ಸಂದೇಶ ನಾಡಿಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಶಿರವಿ ಸಮಾಜದ ಮೇಲೆ ಕನ್ನಡಿಗರು ಇಟ್ಟಿರುವ ಪ್ರೀತಿ, ಮಮತೆ, ವಿಶ್ವಾಸ, ಬೆಂಬಲ ಹಾಗೂ ಪ್ರೋತ್ಸಾಹವನ್ನು ಕಂಡು ನನಗೆ ಹೃದಯ ತುಂಬಿ ಬಂದಿದೆ. ದೇವಿಯ ಮಂದಿರ ನಿರ್ಮಿಸಿ ಕೋಮು ಸೌಹಾರ್ದತೆ, ಸಹಬಾಳ್ವೆಗೆ ಕಾರಣರಾಗಿದ್ದಾರೆ ಎಂದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ರಾಜಸ್ಥಾನ್ ಸಮಾಜದವರು ಸೌಹಾರ್ದತೆಯಿಂದ ಬದುಕುವ ಜೊತೆಗೆ ಗ್ರಾಮದೇವತೆ ದೊಡ್ಡಕೇರಮ್ಮನವರ ಜಾತ್ರೆ ವೇಳೆ 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನಪ್ರಸಾದ ನೀಡುವ ಮೂಲಕ ನಾವು ಕೊಡುಗೆ ದಾನಗಳು ಕೂಡ ಹೌದು ಎಂಬುದನ್ನು ನಿರೂಪಿಸಿ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಆರ್.ಲೋಕೇಶ್, ಕೆ.ಆರ್.ರವೀಂದ್ರಬಾಬು, ತಾಲೂಕು ಜೆಡಿಎಸ್ ಮುಖಂಡ ಜಾನಕಿರಾಮ್, ನಿರ್ಗಮಿತ ಆರಕ್ಷಕ ನಿರೀಕ್ಷಕಿ ಸುಮಾರಾಣಿ, ತಾಲೂಕಿನ ಸಿರವಿ ಸಮಾಜದ ಅಧ್ಯಕ್ಷ ಜೈ ರಾಮ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಧರ್ಮೇಂದ್ರ, ಮಲ್ಲಾರಾಮ್, ಮೋತಿ ರಮೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.