ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ಕೃಷ್ಣಮಠದ ಕನಕನ ಕಿಂಡಿಯ ಮುಂಭಾಗದಲ್ಲಿ ನಡೆಯಿತು.
ಉಡುಪಿ: ಜ. 18ರಂದು ನಡೆಯುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ಕೃಷ್ಣಮಠದ ಕನಕನ ಕಿಂಡಿಯ ಮುಂಭಾಗದಲ್ಲಿ ನಡೆಯಿತು.
ಇದಕ್ಕೆ ಮೊದಲು ಭಾವಿ ಪರ್ಯಾಯ ಶಿರೂರು ಮಠದ ದಿವಾಣರಾದ ಡಾ. ಉದಯ ಸರಳತ್ತಾಯರ ನೇತೃತ್ವದಲ್ಲಿ ಶಿರೂರು ಮಠದಲ್ಲಿ ಶ್ರೀ ವಿಠಲ ದೇವರಲ್ಲಿಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸುವರ್ಣ ಕನಕನ ಕಿಂಡಿಯಲ್ಲಿ ಶ್ರೀ ಕಷ್ಣನಿಗೆ ಪ್ರಾರ್ಥನೆ ಸಲ್ಲಿಸಿ, ಆಹ್ಪಾನ ಪತ್ರಿಕೆಗಳನ್ನು ಸಮರ್ಪಿಸಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್‍ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ ಕೆದ್ಲಾಯ, ಹೊರೆಕಾಣಿಕೆ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಕೆ. ಉದಯಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಂಧ್ಯಾ ರಮೇಶ್, ಶ್ರೀಕಾಂತ್ ನಾಯಕ್, ನಯನಾ ಗಣೇಶ್, ವೀಣಾ ಎಸ್. ಶೆಟ್ಟಿ, ನವೀನ್ ಭಂಡಾರಿ, ವಸಂತ ಭಾರದ್ವಜ್, ಶ್ರೀಕಾಂತ್ ಆಚಾರ್ಯ ಮತ್ತಿತರರಿದ್ದರು.
ಶಿರೂರು ಮಠದ ಪರ್‍ಯಾಯ ಎಂದರೆ ಅದು ಜನರದ್ದೇ ಪರ್‍ಯಾಯ. ಆದ್ದರಿಂದ ಸಮಾಜದ ಎಲ್ಲ ವರ್ಗದ ಜನರು ಭಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿ ಪರ್‍ಯಾಯೋತ್ಸವವನ್ನು ಯಶಸ್ವಿಗೊಳಿಸಬೇಕು. ಉಡುಪಿ ಜಿಲ್ಲೆಯ ಪ್ರತಿಯೊಬ್ಬರನ್ನು ಪರ್‍ಯಾಯೋತ್ಸವಕ್ಕೆ ಆಹ್ಪಾನಿಸುತಿದ್ದು, ಪ್ರತಿಯೊಂದು ಮನೆಗೂ ಆಮಂತ್ರಣ ಪತ್ರ ತಲುಪಿಸುತಿದ್ದೇವೆ ಎಂದು ಮಠದ ದಿವಾನರಾದ ಉದಯ ಸರಳತ್ತಾಯರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.