ಶಿರೂರು ಮಠ ಧಾನ್ಯ ಮುಹೂರ್ತ ಸಂಪನ್ನ

KannadaprabhaNewsNetwork |  
Published : Dec 15, 2025, 03:45 AM IST
 ಧಾನ್ಯ ಮುುಹೂರ್ತಕ್ಕೆ ಅಕ್ಕಿ ಮುಡಿಗಳನ್ನು ಭಕ್ತರು ತಲೆ ಮೇಲೆ ರಥಬೀದಿಯಲ್ಲಿ ಮೆರವಣಿಗೆ ಮಾಡಿದರು | Kannada Prabha

ಸಾರಾಂಶ

ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಾಲ್ಕನೇ ಮತ್ತು ಕೊನೆಯ ಧಾನ್ಯ ಮುಹೂರ್ತವನ್ನು ಭಾನುವಾರ ನಡೆಸಲಾಯಿತು.

ಜ. 18ರಂದು ಪರ್ಯಾಯ ಶ್ರೀ ಕೃಷ್ಣ ಪೂಜಾಧಿಕಾರ ಸ್ವೀಕರಿಸಲಿರುವ ಶಿರೂರು ಮಠ

ಉಡುಪಿ: ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಾಲ್ಕನೇ ಮತ್ತು ಕೊನೆಯ ಧಾನ್ಯ ಮುಹೂರ್ತವನ್ನು ಭಾನುವಾರ ನಡೆಸಲಾಯಿತು.

ಆರಂಭದಲ್ಲಿ ಮುಂಜಾನೆ 6.15ಕ್ಕೆ ಶಿರೂರು ಮಠದಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ ನಡೆಸಿ, ರಥಬೀದಿಯಲ್ಲಿರುವ ಕನಕನ ಕಿಂಡಿಯಲ್ಲಿ ಕೃಷ್ಣದರ್ಶನಗೈದು, ಚಂದ್ರಮೌಳಿಶ್ವರ, ಅನಂತೇಶ್ವರ ದೇವಾಲಯಗಳಿಗೆ ತೆರಳಿ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಶಿರೂರು ಮಠದಿಂದ ನೂರಾರು ಭಕ್ತರು ಅಕ್ಕಿಯ ಮೂಡಿಗಳನ್ನು ತಲೆ ಮೇಲೆ ಹೊತ್ತು, ಮಂಗಳ ವಾದ್ಯಗಳ‍ೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ನಡೆಸಿ, ಕೃಷ್ಣ ಮಠಕ್ಕೆ ತರಲಾಯಿತು. ಅಲ್ಲಿ 7.45ರ ಸುಮುಹೂರ್ತದಲ್ಲಿ ಬಡಗು ಮಾಳಿಗೆಯಲ್ಲಿ, ಅಕ್ಕಿಯ ಮುಡಿಗಳನ್ನಿಟ್ಟು ಪೂಜೆ ಸಲ್ಲಿಸಿ, ಮುಹೂರ್ತವನ್ನು ಸಂಪನ್ನಗೊಳಿಲಾಯಿತು.

ಇದೇ ಸಂದರ್ಭ, ಹಿಂದಿನ ಕಟ್ಟಿಗೆ ಮುಹೂರ್ತದ ಸಂದರ್ಭದಲ್ಲಿ ಮಧ್ವ ಸರೋವದ ಬಳಿ ನೂರಾರು ಲೋಡು ಕಟ್ಟಿಗೆಗಳನ್ನು ರಥದ ರೀತಿಯಲ್ಲಿ ಜೋಡಿಸಲಾಗಿದ್ದು, ಅದಕ್ಕೆ ಶಿಖರ ಪ್ರತಿಷ್ಠೆಯನ್ನೂ ನಡೆಸಲಾಯಿತು.ಭಾವಿ ಪರ್ಯಾಯ ಶಿರೂರು ಮಠದ ದಿವಾನ ಡಾ. ಉದಯ ಸರಳತ್ತಾಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣ, ಪ್ರಮುಖರಾದ ಎಂ. ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಪರ್ಯಾಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ನಂದನ್ ಜೈನ್, ಮಧುಕರ್ ಮುದ್ರಾಡಿ, ವಿಷ್ಣು ಪ್ರಸಾದ್ ಪಾಡೀಗಾರ್ ಮತ್ತು ಅಧಿಕ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.ನಾಲ್ಕು ಮುಹೂರ್ತಗಳು ಸಂಪನ್ನ:

ಅನ್ನಬ್ರಹ್ಮನ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಡುಪಿ ಕೃಷ್ಣಮಠದಲ್ಲಿ 2 ವರ್ಷಗಳ ಕಾಲ ಪರ್ಯಾಯ ನಡೆಸುವ ಮಠಕ್ಕೆ ಪ್ರತಿದಿನ ಸಾವಿರಾರು ಮಂದಿಗೆ ಅನ್ನದಾನ ಮಾಡುವ ಜವಾಬ್ದಾರಿ ಇರುತ್ತದೆ. ಅದಕ್ಕೆ ಅದಕ್ಕೆ ಅಗತ್ಯವಾದ ಬಾಳೆ ಎಲೆ, ಭತ್ತ, ಕಟ್ಟಿಗೆ ಮತ್ತು ಧಾನ್ಯಗಳನ್ನು ಸಂಗ್ರಹಿಸಿಡುವ ಬಾಳೆ ಮುಹೂರ್ತ, ಭತ್ತ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಧಾನ್ಯ (ಅಕ್ಕಿ) ಮುಹೂರ್ತಗಳನ್ನು ನಡೆಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!