ಶಿರ್ವ ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವಾರ್ಷಿಕೋತ್ಸವ

KannadaprabhaNewsNetwork |  
Published : Mar 29, 2025, 12:36 AM IST
27ವಿಶ್ವ | Kannada Prabha

ಸಾರಾಂಶ

ಶಿರ್ವದ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವ ಶಿರ್ವ ಹಿಂದೂ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಕಾಪು

ಶಿರ್ವದ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ದ್ವಾದಶ ವರ್ಷದ ವಾರ್ಷಿಕೋತ್ಸವ ಶಿರ್ವ ಹಿಂದೂ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಜರುಗಿತು.

ಮುಂಡ್ಕೂರು ಶ್ರೀವಿಶ್ವ ಬ್ರಾಹ್ಮಣ ಯುವ ಸೇವಾದಳದ ಗೌರವ ಅಧ್ಯಕ್ಷ ಪ್ರಸಾದ್ ತಂತ್ರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವಬ್ರಾಹ್ಮಣರು ಬ್ರಾಹ್ಮಣತ್ವವನ್ನು ಬೆಳೆಸಬೇಕು. ಮುಂದಿನ ಪೀಳಿಗೆಯಲ್ಲಿ ನಿತ್ಯ ಅನುಷ್ಠಾನಗಳ ಜಾಗೃತಿ ಮೂಡಿಸಬೇಕು. ದೇವರ ವಿಗ್ರಹಗಳನ್ನು ಸೃಷ್ಠಿಸುವ ನಾವು ದೇವರ ಪೂಜೆಯನ್ನು ಯಾಕೆ ಬಿಟ್ಟುಕೊಟ್ಟಿದ್ದೇವೆ ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದರು.ಈ ಸಂದರ್ಭ ಹಿರಿಯ ವೈದಿಕ ಮೋಹನ್ ಪುರೋಹಿತ ದಂಪತಿಯನ್ನು ಸನ್ಮಾನಿಸಲಾಯಿತು. ಶಿರ್ವ ವ್ಯ.ಸೇ. ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಆಚಾರ್ಯ, ವೇದಾವತಿ ಆಚಾರ್ಯರನ್ನು ಅಭಿನಂದಿಸಲಾಯಿತು.

೨೭ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ೫ ಜನರಿಗೆ ವೈದ್ಯಕೀಯ ಚಿಕಿತ್ಸಾ ವ್ಯಚ್ಚ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಂಜುಳಾ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ವರದಿ ಓದಿದರು. ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಗೌರವ ಅಧ್ಯಕ್ಷ ಸುರೇಶ ಆಚಾರ್ಯ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್ ಆಚಾರ್ಯ, ಕುತ್ಯಾರು ಯುವವೃಂದದ ಅಧ್ಯಕ್ಷ ಶ್ರೇಯಸ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ ವೇದಿಕೆಯಲ್ಲಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಉಮೇಶ ಆಚಾರ್ಯ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಆಚಾರ್ಯ ವಂದಿಸಿದರು. ಪ್ರೀತಂ ಆಚಾರ್ಯ ನಿರೂಪಿಸಿದರು. ಮಹಿಳಾ ಬಳಗದವರಿಂದ ಸಾಂಸ್ಕೃತಿಕ ವೈವಿಧ್ಯ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ