ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಜಾಲಿಹಾಳ ಚಿರಾಗ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಬರುವ ಫೆ.1 ರಂದು ಶನಿವಾರ ಸಂಜೆ 7 ಗಂಟೆಗೆ ಜಾಲಿಹಾಳ ಗ್ರಾಮದ ಬಯಲು ರಂಗಮಂದಿರದಲ್ಲಿ ಶಿವಸಂಚಾರ-24 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಕುರ್ತಕೋಟಿ ಹೇಳಿದರು.ಪಟ್ಟಣದ ಚಿರಾಗ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.1 ರಂದು ಸಂಜೆ 7 ಗಂಟೆಗೆ ಜಾಲಿಹಾಳದ ಬಯಲು ರಂಗ ಮಂದಿರದಲ್ಲಿ ಶಿವಸಂಚಾರ-24 ಪ್ರಥಮ ದಿನದ ನಾಟಕ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಉದ್ಘಾಟಿಸುವರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಅಧ್ಯಕ್ಷತೆ ವಹಿಸುವರು. ಅಂದು ಬಾದಾಮಿ ತಾಲೂಕು ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲಾಗುವುದು. ಅತಿಥಿಗಳಾಗಿ ಮುಖಂಡರಾದ ಎಂ.ಡಿ.ಯಲಿಗಾರ, ಬಸವರಾಜ ಗೋಗೇರಿ, ಬಸವರಾಜ ದಳವಾಯಿ, ಅಜೀಜ್ ಮುಲ್ಲಾ, ಗಂಗಾಧರ ವಡ್ಡರ, ಎಸ್.ಎಚ್.ಪಾಟೀಲ, ಶಂಕರ ಗಿರಿತಿಮ್ಮನ್ನವರ ಆಗಮಿಸುವರು ಎಂದರು.2ನೇ ನಾಟಕ ಫೆ.2ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಎಂ.ಬಿ.ಹಂಗರಗಿ ವಹಿಸುವರು. ಬೀಳಗಿಯ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎ.ಆರ್.ಪ್ಯಾಟೀಮಠ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶೇಖರಗೌಡ ಪಾಟೀಲ, ಮುತ್ತು ನಾಯ್ಕರ್, ಬಸವರಾಜ ಡೊಳ್ಳಿನ, ನಿಂಗನಗೌಡ ಪಾಟೀಲ, ಹುಲಗಪ್ಪ ಬಿಳೆಕಲ್ಲ, ಶಿವಯ್ಯ ವಸ್ತ್ರದ ಆಗಮಿಸುವರು. ಜಾಲಿಹಾಳ ಗ್ರಾಪಂ ಕಾರ್ಮಿಕರಿಗೆ ಸನ್ಮಾನಿಸಲಾಗುವುದು. ಫೆ, 3 ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ಮಂಜುನಾಥ ಹೊಸಮನಿ ವಹಿಸಲಿದ್ದು, ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡ್ರ ಉದ್ಘಾಟಿಸಲಿದ್ದು, ಎಫ್.ಸಿ.ಬಾಣದ, ದೊಡ್ಡಯ್ಯ ಭೂಸನೂರಮಠ, ಅರುಣ ಟೆಂಗಿನಕಾಯಿ, ಶಿವಪ್ಪ ಹೊರಕೇರಿ, ಸಂದ್ರಗೌಡ ಪಾಟೀಲ, ನಾಗೇಶ ಅಕ್ಕಿ, ಚನ್ನಬಸಪ್ಪ ಮಾದರ ಆಗಮಿಸಿದ್ದು, ಗ್ರಾಮದ ಸವಿತಾ ಸಮಾಜದ ಬಂಧುಗಳಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಿಂಗಪ್ಪ ಗಿರಿತಿಮ್ಮನ್ನವರ, ಶಿವಾಜಿ ಘಾಟಗೆ, ಅಂದಯ್ಯ ಫಳಾರಿ ಹಾಜರಿದ್ದರು.