ಎಲ್ಲೆಡೆ ಶಿವ-ಬಸವ ಜಯಂತಿಯ ಸಂಭ್ರಮ

KannadaprabhaNewsNetwork |  
Published : Apr 20, 2026, 03:00 AM IST
ಫೋಟೋ ಶೀರ್ಷಿಕೆ ೧೯ಎಸ್‌ಡಿಟಿ೧ಸವದತ್ತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜ ವರ್ತುಳದಲ್ಲಿ ಶಿವಾಜಿ ಮಹಾರಾಜರ ಮತ್ತು ಬಸವೇಶ್ವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಿವ-ಬಸವ ಜಯಂತಿಯನ್ನು ಆಚರಿಸಲಾಯಿತು.ಫೋಟೋ ಶೀರ್ಷಿಕೆ ೧೯ಎಸ್‌ಡಿಟಿ೨ಸವದತ್ತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಾಲ ಶಿವಾಜಿಯನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಮರಾಠ ಸಮಾಜ ಬಾಂಧವರು ಶಿವ-ಬಸವ ಜಯಂತಿಯನ್ನು ಆಚರಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮರಾಠ ಸಮಾಜ ಬಾಂಧವರು ಹಾಗೂ ಪಟ್ಟಣದ ವಿವಿಧ ಸಮಾಜ ಭಾಂಧವರು ರವಿವಾರ ಶಿವ-ಬಸವ ಜಯಂತಿಯನ್ನು ಆಚರಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ ಶಿವಾಜಿ ಮಹಾರಾಜರ ಹಾಗೂ ಬಸವೇಶ್ವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಿವಬಸವ ಜಯಂತಿಗೆ ಚಾಲನೆ ನೀಡಿದರು. ನಂತರ ಸಮಾಜ ಬಾಂಧವರು ಬಸವೇಶ್ವರ ವೃತ್ತಕ್ಕೆ ತೆರಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮರಾಠ ಸಮಾಜ ಬಾಂಧವರು ಹಾಗೂ ಪಟ್ಟಣದ ವಿವಿಧ ಸಮಾಜ ಭಾಂಧವರು ರವಿವಾರ ಶಿವ-ಬಸವ ಜಯಂತಿಯನ್ನು ಆಚರಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ ಶಿವಾಜಿ ಮಹಾರಾಜರ ಹಾಗೂ ಬಸವೇಶ್ವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಿವಬಸವ ಜಯಂತಿಗೆ ಚಾಲನೆ ನೀಡಿದರು. ನಂತರ ಸಮಾಜ ಬಾಂಧವರು ಬಸವೇಶ್ವರ ವೃತ್ತಕ್ಕೆ ತೆರಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ, ಪಟ್ಟಣದಲ್ಲಿ ಏನೇ ಧಾರ್ಮಿಕ ಆಚರಣೆಗಳಿದ್ದರೂ ಸರ್ವ ಸಮಾಜ ಬಾಂಧವರೆಲ್ಲಾ ಸೇರಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಬಸವೇಶ್ವರ ಜಯಂತಿ ಅಂಗವಾಗಿ ಇಂದು ಶಿವ-ಬಸವ ಜಯಂತಿಯನ್ನು ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಬಸವೇಶ್ವರರ ವೃತ್ತಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು.ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿ, ದೇಶ ರಕ್ಷಣೆಗೋಸ್ಕರ ಹೋರಾಟ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಜಗಜ್ಯೋತಿ ಬಸವೇಶ್ವರ ತತ್ವಾದರ್ಶಗಳು ನಮಗೆಲ್ಲಾ ಮಾದರಿಯಾಗಿವೆ. ಪಟ್ಟಣದಲ್ಲಿ ಶಿವ-ಬಸವ ಜಯಂತಿಯನ್ನು ಜ್ಯಾತ್ಯಾತೀತವಾಗಿ ಎಲ್ಲ ಸಮಾಜ ಬಾಂಧವರು ಸೇರಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಗಿರಿಜನ್ನವರ ಓಣಿಯ ಉದಯಗಿರಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಗದಗಯ್ಯ ಚಿಕ್ಕಮಠ ವೈದಿಕತ್ವ್ವದಲ್ಲಿ ಸಮಾಜ ಬಾಂಧವರು ಬಾಲ ಶಿವಾಜಿಯನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಯೊಂದಿಗೆ ಆಚರಿಸಿದರು.

ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ, ಜಗದೀಶ ಶಿಂತ್ರಿ, ರಾಮಲಿಂಗೇಶ್ವರ ಅರ್ಬನ್‌ ಅಧ್ಯಕ್ಷ ಪುಂಡಲೀಕ ಭೀ.ಬಾಳೋಜಿ, ಬಸವರಾಜ ಕಪ್ಪಣ್ಣವರ, ಕುಮಾರಸ್ವಾಮಿ ತಲ್ಲೂರಮಠ, ವಿ.ಜೆ.ಪವಾರ, ಬಸವರಾಜ ಅರಮನಿ, ಐ.ಪಿ.ಪಾಟೀಲ, ಬಸವರಾಜ ಪುಟ್ಟಿ, ಅಶೋಕ ಮುರಗೋಡ, ಅಡಿವೆಪ್ಪ ಬೀಳಗಿ, ಜಗದೀಶ ಹಳೆಮನಿ, ಮಲ್ಲು ಬೀಳಗಿ, ರಾವ್‌ಸಾಹೇಬ ಜಾಮದಾರ, ಸುಭಾಸ ಅರಗಂಜಿ, ಆನಂದ ಜಾನ್ವೇಕರ, ಬಾಬು ಮೊಕಾಶಿ, ಚಂದ್ರಶೇಖರ ಮಲಕನ್ನವರ, ಭೀಮರಾವ್ ಆನಿ, ಸುಭಾಸ ಪವಾರ, ರವಿ ಗಿರಿಜನ್ನವರ, ಸುರೇಶ ಬಾಳೋಜಿ, ಅಣ್ಣಪ್ಪ ಪವಾರ, ಕೇದಾರ ಮೊಕಾಶಿ, ಸಿದ್ದಯ್ಯ ವಡಿಯರ, ಎಫ್.ವೈ.ಗಾಜಿ, ಮಂಜು ಪಾಚಂಗಿ, ಲಕ್ಷ್ಮಣ ಕಿಟದಾಳ, ಶಿವಾನಂದ ತಾರೀಹಾಳ, ಸುಧೀಂದ್ರ ಬಂಗ್ಲೆದಾರ, ಸಿದ್ದಪ್ಪ ರಾಹುತ, ಮಲ್ಲೇಶ ರಾಜನಾಳ, ಗಿರೀಶ ರೇವಡಿ, ಮಹೇಶ ಜಾಮದಾರ, ಶಿವಾಜಿ ಕುದರಿ, ಮಂಜುನಾಥ ಡಬಕೆ, ಪ್ರಶಾಂತ ಪವಾರ, ಆನಂದ ಶಿಂಧೆ, ಸಂತೋಷ ಜಾಧವ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯಗಳೊಡನೆ ಬದುಕಿದರೆ ಜೀವನ ಸಾರ್ಥಕ
ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ