22ರಂದು ಶಿವ ಸೊಸೈಟಿ ಮಹಾಸಭೆ

KannadaprabhaNewsNetwork |  
Published : Sep 20, 2025, 01:00 AM IST
ಹೊನ್ನಾಳಿ ಫೋಟೋ 19ಎಚ್.ಎಲ್.ಐ2 ಪಟ್ಟಣದ ಶಿವ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯಲ್ಲಿ  ಶುಕ್ರವಾರ  ಸೊಸೈಟಿಯ ಅಧ್ಯಕ್ಷ ಟಿ.ಚಂದ್ರಪ್ಪ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ಸೊಸೈಟಿ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಸ್ವಪ್ರೇರಣೆಯಿಂದ ಮರುಪಾವತಿಸಬೇಕು ಎಂದು ಶಿವ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಚಂದ್ರಪ್ಪ ಹೊನ್ನಾಳಿಯಲ್ಲಿ ಹೇಳಿದರು.

ಹೊನ್ನಾಳಿ: ಸೊಸೈಟಿ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಸ್ವಪ್ರೇರಣೆಯಿಂದ ಮರುಪಾವತಿಸಬೇಕು ಎಂದು ಶಿವ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಚಂದ್ರಪ್ಪ ಹೇಳಿದರು.

ಪಟ್ಟಣದ ಶಿವ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೊಸೈಟಿಯ 25ನೇ ವಾರ್ಷಿಕ ಮಹಾಸಭೆ ಗೊಲ್ಲರಹಳ್ಳಿಯ ಸಮುದಾಯ ಭವನದಲ್ಲಿ 22ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸೊಸೈಟಿಯ ಎಲ್ಲ ಸದಸ್ಯರು ಈ ಮಹಾಸಭೆಗೆ ಆಗಮಿಸಿ, ತಮ್ಮ ಸಲಹೆ- ಸೂಚನೆಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ತರಳಬಾಳು ಜಗದ್ಗುರು ಆಶೀರ್ವಾದದಿಂದ 25 ವರ್ಷಗಳ ಹಿಂದೆಯೇ ಪ್ರಾರಂಭವಾದ ಸಂಸ್ಥೆ 5 ಶಾಖೆಗಳನ್ನು ಪ್ರಾರಂಭಿಸಿ, 6655 ಸದಸ್ಯರನ್ನು ಹೊಂದಿದೆ. ವಾರ್ಷಿಕ ₹237 ಕೋಟಿ ವಹಿವಾಟು ನಡೆಸುತ್ತಿದೆ. ಇದರಲ್ಲಿ ಸಂಘ ಪ್ರಸಕ್ತ ಸಾಲಿನಲ್ಲಿ ₹40.78 ನಿವ್ವಳ ಲಾಭ ಗಳಿಸಿದ್ದು, ₹7.5 ಲಕ್ಷಗಳ ಆದಾಯ ತೆರಿಗೆ ಕಾಯ್ದಿರಿಸಿ ₹33.28 ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ವಾರ್ಷಿಕ ಮಹಾಸಭೆ ತೀರ್ಮಾನದಂತೆ ಸಂಘದ ಸಾಲಗಾರರ ಕ್ಷೇಮನಿಧಿ ಪ್ರಾರಂಭಿಸಲಾಗಿದೆ. ಸದಸ್ಯರು ಮರಣ ಹೊಂದಿದಲ್ಲಿ ₹5 ಸಾವಿರ ನೆರವು ನೀಡಲಾಗುತ್ತಿದೆ. ಇದುವರೆಗೂ ಒಟ್ಟು 66 ಸಂಘದ ಸದಸ್ಯರು ನಿಧನರಾಗಿದ್ದಾರೆ. ಸಂಘದ ಸದಸ್ಯರು ಮರಣ ಹೊಂದಿದ್ದಲ್ಲಿ ಸೊಸೈಟಿಯ ಗಮನಕ್ಕೆ ತರಬೇಕಾಗಿ ಅವರು ಮನವಿ ಮಾಡಿದರು.

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಎಲ್ಲ ಶಾಖೆಗಳಲ್ಲೂ ಲಾಕರ್ ಸೌಲಭ್ಯ ಜೊತೆಗೆ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಆರೋಗ್ಯ ಶಿಬಿರ:

ಸೊಸೈಟಿ ಸದಸ್ಯರ ಆರೋಗ್ಯದ ಹಿತದೃಷ್ಠಿಯಿಂದ ಶಿವಮೊಗ್ಗದ ಆದರ್ಶ ಕಣ್ಣಿನ ಚಿಕಿತ್ಸಾಲಯ ಅವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗ ಎಲ್ಲ ಸೊಸೈಟಿ ಸದಸ್ಯರು ಪಡೆಯಬೇಕು ಎಂದು ವಿನಂತಿಸಿದರು.

ಸೊಸೈಟಿ ಉಪಾಧ್ಯಕ್ಷ ಕೂಲಂಬಿ ಎಂ.ಜಿ.ಲೋಕೇಶ್ ಪಾಟೀಲ್, ಕಾರ್ಯದರ್ಶಿ ಎಚ್.ಎನ್. ರುದ್ರೇಶ್, ನಿರ್ದೇಶಕರಾದ ಎಚ್.ಜಿ. ರುದ್ರೇಶಪ್ಪ, ಡಿ.ಪಿ.ರಂಗನಾಥ್ ಇತರರು ಇದ್ದರು.

- - -

-19ಎಚ್.ಎಲ್.ಐ2.ಜೆಪಿಜಿ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ