ಕನಕಗಿರಿ:
ಪಟ್ಟಣದ ಗಂಗಾವತಿ-ಲಿಂಗಸೂಗುರು ಹೆದ್ದಾರಿಯ ನಂದಿ ಚಿತ್ರಮಂದಿರದ ಬಳಿಯ ಶಿವಾಜಿ ವೃತ್ತಕ್ಕೆ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಪೂಜೆ ಸಲ್ಲಿಸಿ ಬುಧವಾರ ಮಾತನಾಡಿದರು.
ಹಿಂದೂ ಸಂಸ್ಕೃತಿ, ಪರಂಪರೆಗೆ ಶಿವಾಜಿಯ ಹೋರಾಟ ದೇಶವ್ಯಾಪಿ ಸ್ಮರಿಸುವ ದಿನವಾಗಿದೆ. ಇಂತಹ ಅಪ್ರತಿಮ ಹೋರಾಟಗಾರನ ವಿಚಾರಗಳು ಎಂದಿಗೂ ಅಜರಾಮರವಾಗಿದ್ದು, ಇವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದರು.ಪಟ್ಟಣದ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿಯೂ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಸಮಾಜದ ಮುಖಂಡರಾದ ಹನುಮಂತಪ್ಪ ರಾಟಿ, ರಾಘವೇಂದ್ರ ಮರಾಠಿ, ಶರಣಪ್ಪ ಚವ್ಹಾಣ, ಶಂಕರ ಹೂಗಾರ, ನಾಗರಾಜ ಮರಾಠಿ, ರವಿಕುಮಾರ ಎಂ, ವಸಂತಕುಮಾರ ಆರೇರ, ವೀರ ಶಿವಾಜಿ ಸೇನೆ ಹಾಗೂ ರಾಷ್ಟ್ರಮಾತಾ ಜೀಜಾಬಾಯಿ ಮಹಿಳಾ ಸಂಘದವರು ಇದ್ದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಹಾಗೂ ಬಿಜೆಪಿ ಕಚೇರಿ, ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿಯೂ ಶಿವಾಜಿ ಜಯಂತಿ ಆಚರಿಸಲಾಯಿತು.