ಶಿವಾಜಿ ಮಹಾರಾಜರ ದೇಶ ಪ್ರೇಮ ಅನುಕರಣೀಯ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Feb 21, 2026, 01:45 AM IST
20ಕೆಕೆಡಿಯು1. | Kannada Prabha

ಸಾರಾಂಶ

ಕಡೂರುಶಿವಾಜಿ ಮಹಾರಾಜರ ದೇಶಾಭಿಮಾನ ಅನುಕರಣೀಯ. ಯುವ ಜನರು ಅವರ ಸ್ವರಾಜ್ಯ ಧ್ಯೇಯ, ಮಾತೃಪ್ರೇಮ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು.

ತಾಲೂಕು ಪಂಚಾಯಿತಿಯಲ್ಲಿ 397ನೇ ಶಿವಾಜಿ ಜಯಂತಿ

ಕನ್ನಡಪ್ರಭ ವಾರ್ತೆ, ಕಡೂರು

ಶಿವಾಜಿ ಮಹಾರಾಜರ ದೇಶಾಭಿಮಾನ ಅನುಕರಣೀಯ. ಯುವ ಜನರು ಅವರ ಸ್ವರಾಜ್ಯ ಧ್ಯೇಯ, ಮಾತೃಪ್ರೇಮ ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ 397ನೇ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂ ಸಾಮ್ರಾಜ್ಯದ ಕನಸು ಕಂಡ ಶಿವಾಜಿ ತನ್ನ ತಾಯಿ ಜೀಜಾಬಾಯಿ ಹಾಗೂ ಸಮರ್ಥ ರಾಮದಾಸರಿಂದ ಪ್ರೇರಿತರಾಗಿ ಸ್ವಾಭಿಮಾನದಿಂದ ಹೋರಾಟ ನಡೆಸಿದರು. ಈ ಸಮೂದಾಯದ 7 ಶಾಸಕರು, ಒಬ್ಬ ಸಚಿವರು ಕಾಂಗ್ರೆಸ್ ಸರ್ಕಾರದಲ್ಲಿ ಅವಕಾಶ ಪಡೆದಿದ್ದಾರೆ. ಕಡೂರು ಕ್ಷೇತ್ರದ ಶಿವಾಜಿ ಪುರದಲ್ಲಿರುವ ಸಮಾಜದ ಬೇಸಾಯ ಸಹಕಾರ ಸಂಘಕ್ಕೆ ಹಕ್ಕುಪತ್ರದ ವ್ಯವಸ್ಥೆ ಆಗಬೇಕಿದೆ. ನಿಮಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಸಲು ಅವಕಾಶವಿದ್ದರೂ ದಾಖಲಾತಿಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಸಮಾಜದಿಂದ ಸಮುದಾಯ ಭವನಕ್ಕೆ ಎರಡು ಎಕರೆ ಸ್ಥಳಾವಕಾಶ ನೀಡುವ ಸಂಬಂಧ ತಾಲೂಕು ಆಡಳಿತಕ್ಕೆ ಸೂಚಿಸುವುದಾಗಿ ಹೇಳಿದರು. ಮರಾಠ ಸಮಾಜದ ತಾಲೂಕು ಅಧ್ಯಕ್ಷ ಎ.ಎಂ.ರಾಮಚಂದ್ರರಾವ್ ಥಾವರೆ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಇಡೀ ಹಿಂದೂ ಸಮಾಜ ಅವರನ್ನು ಆರಾಧ್ಯ ಭಾವದಿಂದ ನೋಡುತ್ತದೆ. ಹಿಂದುಳಿ ದಿರುವ ನಮ್ಮ ಸಮಾಜದ ಏಳಿಗೆಗೆ ಸರ್ಕಾರ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಛತ್ರಪತಿ ಶಿವಾಜಿ ಮೊಘಲರ ವಿರುದ್ಧ ಹೋರಾಡಿ ಸಂಖ್ಯೆಯಲ್ಲ, ಶೌರ್ಯ ಮುಖ್ಯ ಎಂದು ಸಾಬೀತು ಪಡಿಸಿದವರು. ಕಡೂರಿನ ಜೀಜಾಬಾಯಿ ಮಹಿಳಾ ಸಮಾಜದವರು ಪುರಸಭೆ ಅಧ್ಯಕ್ಷರ ಅವಧಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಕೋರಿದ್ದ ನಿವೇಶನ ಒದಗಿಸಿದ ಹೆಮ್ಮೆ ತಮಗಿದೆ ಎಂದು ನುಡಿದರು,

ತಹಸೀಲ್ದಾರ್ ಸಿ.ಎಸ್. ರ್ಪೂರ್ಣಿಮಾ ಮಾತನಾಡಿ, ಜೀಜಾಬಾಯಿ ತಮ್ಮ ಮಗನಿಗೆ ಕತ್ತಿಕೊಟ್ಟು ದೇಶಪ್ರೇಮ ಕಲಿಸಿದರೆ ಇಂದಿನ ತಾಯಂದಿರು ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ ಎಂದರು. ಸಮಾರಂಭದಲ್ಲಿ ಲೋಹಿತ್ಪವಾರ್, ಜೀಜಾಬಾಯಿ ಮಹಿಳಾ ಸಮಾಜದ ಅಧ್ಯಕ್ಷೆ ಪಾರ್ವತೀ ಬಾಯಿ ಅವತಾಡೆ, ರಮೇಶ್ ರಾವ್, ರುದ್ರೇಗೌಡ, ಖಾರದ ಶಿವಣ್ಣ, ವಸಂತ್, ವನಜಾಕ್ಷಿ, ಅನ್ನಪೂರ್ಣಮ್ಮ, ಹೋಟೆಲ್ ಬಾಬು, ಸುರೇಶ್, ಆನಂದರಾವ್ ಮತ್ತಿತರರು ಇದ್ದರು. ಮಕ್ಕಳು ಶಿವಾಜಿ ಮತ್ತು ಜೀಜಾಬಾಯಿಯ ಛದ್ಮವೇಷ ಧರಿಸಿ ಗಮನ ಸೆಳೆದರು. 19ಕೆಕೆಡಿಯು1.

ಕಡೂರಿನ ತಾಪಂ ಸಭಾಂಗಣದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಆನಂದ್, ತಹಸೀಲ್ದಾರ್ ಸಿ..ಎಸ್.ಪೂರ್ಣಿಮಾ, ಭಂಡಾರಿ ಶ್ರೀನಿವಾಸ್, ರಾಮಚಂದ್ರರಾವ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌