ಹಿರಿಯೂರು: ಶಿವಾಜಿ ಮಹಾರಾಜರು ಧೈರ್ಯ ಮತ್ತು ಶೌರ್ಯದ ಪ್ರತೀಕವಾಗಿದ್ದರು ಎಂದು ಪ್ರಾಧ್ಯಾಪಕ ಡಾ.ಡಿ.ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.
ಶಿವಾಜಿಯು ತನ್ನ 16ನೇ ವಯಸ್ಸಿಗೆ ಸೈನ್ಯ ಕಟ್ಟುವಂತಹ ಧೈರ್ಯ, ಪರಾಕ್ರಮ ತೋರಿದ್ದರು. ಆ ದಿಟ್ಟ ಮನಸ್ಥಿತಿಗೆ ಅವರು ಬೆಳೆದು ಬಂದ ರೀತಿ ಕಾರಣವಾಗಿತ್ತು. ಶಿವಾಜಿಯ ತಾಯಿ ಜೀಜಾಬಾಯಿಯವರು ತಮ್ಮೆಲ್ಲ ಆದರ್ಶ ಗುಣಗಳನ್ನು ಶಿವಾಜಿಗೆ ತುಂಬಿ ಬೆಳೆಸಿದರು. ಸ್ವಾಭಿಮಾನಿ ರಾಷ್ಟ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ.ಆಡಳಿತಗಾರರಿಗೆ ಅವರ ಧೈರ್ಯ, ಸಾಹಸ ಸ್ಫೂರ್ತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ತಿಪ್ಪೇಸ್ವಾಮಿ, ಮಾರುತಿ ರಾವ್ ಜಾಧವ್, ಬಿಸಿಎಂ ಇಲಾಖೆಯ ಕೃಷ್ಣಮೂರ್ತಿ, ನಗರಸಭೆಯ ಅಶೋಕ್,ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಕೆಎಂ ಮನೋಹರ್, ಮರಾಠ ಸಮಾಜದ ಅಧ್ಯಕ್ಷ ನರಸಿಂಗರಾವ್ ಸೂರ್ಯವಂಶಿ, ಶಾಂತಕುಮಾರ್, ಚಂದ್ರಕಾಂತ್, ಕುಮಾರ್ ಬೋಸ್ಲೆ, ಬಾಬುರಾವ್ ಸಾಳಂಕಿ ಮುಂತಾದವರು ಹಾಜರಿದ್ದರು.