ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜರುಗಿದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸೈಟಿಯ 2025-26ನೇ ಸಾಲಿನ 30ನೇ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ನಿರ್ದೇಶಕ ಡಾ.ಸದಾಶಿವ ಪವಾರ ಮಾತನಾಡಿ, ಜಿಲ್ಲೆಯಲ್ಲಿಯೇ ನಮ್ಮ ಸಹಕಾರ ಸಂಘ ಸದಸ್ಯರ ನಂಬಿಕೆ ಮತ್ತು ವಿಶ್ವಾರ್ಹತೆಗೆ ಪೂರಕವಾಗಿ ಸದಸ್ಯರ ಆರ್ಥಿಕ ಸ್ವಾವಲಂಬಿ ಬದುಕಿನ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘ ತನ್ನ 29 ವರ್ಷಗಳ ಸಾರ್ಥಕ ಪಯಣದಲ್ಲಿ ನೆರವು ಬೇಡಿದ ಸಾವಿರಾರು ಸದಸ್ಯರ, ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಕಾಮಧೇನುವಾಗಿದೆ ಎಂದು ಹೇಳಿದರು.ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ಹಾಗೂ ಅಹವಾಲು ಮಂಡನೆ ಮಾಡಿದ ಉಪಾಧ್ಯಕ್ಷ ಸಂಜಯ ಜಂಬೂರೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 5,177 ಸದಸ್ಯರನ್ನು ಹೊಂದುವುದರ ಮೂಲಕ ಹೆಮ್ಮರವಾಗಿ ಬೆಳೆದಿದೆ. ₹3.40 ಕೋಟಿ ಶೇರು ಬಂಡವಾಳ, ₹74.65 ಕೋಟಿ ಠೇವುಗಳು, ₹4.02 ಕೋಟಿ ಕಾಯ್ದಿರಿಸಿದ ನಿಧಿ, ₹5.24 ಕೋಟಿ ಇತರೆ ನಿಧಿಗಳು, ₹63.33 ಕೋಟಿ ಸಾಲ ಹಾಗೂ ಮುಂಗಡಗಳು, ₹87.32 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ₹17.70 ಕೋಟಿ ಸಾಲ ವಿತರಿಸಲಾಗಿದ್ದು, ₹15.38 ಕೋಟಿ ಸಾಲ ವಸೂಲಿ ಮಾಡಲಾಗಿದೆ ಎಂದರು. ವಿಶೇಷ ಸಾಧನೆಗೈದ ಸಂಘದ ಸದಸ್ಯರಾದ ಡಾ.ನಾಮದೇವ ಗೌಡ, ಆನಂದ ಕಂಬಾರ, ಮಂಜುಳಾ ಹಿಪ್ಪರಗಿ, ಅಭಿಷೇಕ ಧನವಡೆ, ಜಯಶ್ರೀ ಭಾರತೆ ಅವರನ್ನು ಸನ್ಮಾನಿಸಲಾಯಿತು. ಜತೆಗೆ 101 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.