ಛತ್ರಪತಿ ಶಿವಾಜಿ ಮಹಾರಾಜರ ಸಾಮಾಜಿಕ ಹಾಗೂ ನ್ಯಾಯ ಸಮ್ಮತದ ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಶಿವಾಜಿ ಮಹಾರಾಜರ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕನ್ನು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆಯ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಸವದತ್ತಿ
ಛತ್ರಪತಿ ಶಿವಾಜಿ ಮಹಾರಾಜರ ಸಾಮಾಜಿಕ ಹಾಗೂ ನ್ಯಾಯ ಸಮ್ಮತದ ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಶಿವಾಜಿ ಮಹಾರಾಜರ ಕಾರ್ಯ ಶ್ಲಾಘನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಮರಾಠ ಸಮಾಜದವರಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರ ಹಾಗೂ ದೇಶದ ಜನರ ಹಿತ ಕಾಪಾಡಿದ ಶಿವಾಜಿಯಂತಹ ಅನೇಕ ಮಹಾನ ನಾಯಕರ ಸ್ಮರಣೆ ಮಾಡುವುದು ಇಂದು ಅತ್ಯವಶ್ಯಕವಾಗಿದೆ ಎಂದರು.
ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕನ್ನು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆಯ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯ ಮೂಡಿಸಿದೆ ಎಂದರು.
ತಹಸೀಲ್ದಾರ ಮಧುಸೂಧನ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗ್ಗೆ ಉದಯಗಿರಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮರಾಠ ಸಮಾಜ ಬಾಂಧವರು ಮತ್ತು ಸುಮಂಗಲೆಯರಿಂದ ಬಾಲ ಶಿವಾಜಿಯನ್ನು ತೊಟ್ಟಿಲಲ್ಲಿ ಹಾಕಿ ಪೂಜೆ ಸಲ್ಲಿಸಲಾಯಿತು. ನಂತರ ಶಿವಾಜಿ ಮಹಾರಾಜರ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಸಮಸ್ತ ಸಮಾಜದವರು ಶಿವಾಜಿ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಸಕಲರು ಪಾಲ್ಗೊಂಡು ಜಯಂತ್ಯುತ್ಸವಕ್ಕೆ ಮೆರಗು ತಂದರು. ಓಬಿ ಬಾಯ್ಸ್ ಯುವಕರಿಂದ ಕೇಸರಿ ಬಾವುಟಗಳೊಂದಿಗೆ ಪಟ್ಟಣದಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಗ್ರೇಡ-2 ತಹಸೀಲ್ದಾರ ಎಂ.ವಿ.ಗುಂಡಪ್ಪಗೋಳ, ತಾ.ಪಂ ಇಒ ಯಶವಂತಕುಮಾರ, ಶ್ರೀ ರಾಮಲಿಂಗೇಶ್ವರ ಅರ್ಬನ್ ಸೊಸೈಟಿ ಅಧ್ಯಕ್ಷ ಪುಂಡಲಿಕ ಬಾಳೋಜಿ, ಪಂಚಮಸಾಲಿ ಲಿಂಗಾಯತ ಸಮಾಜದ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ, ಹೆಸ್ಕಾಂ ಅಧಿಕಾರಿ ವಿಶಾಪುರಕರ, ಕೆ.ಎಸ್.ಕದ್ರಾಪುರ, ಉಪತಹಸೀಲ್ದಾರ ಶಶಿಕುಮಾರ ವನಕಿ, ವಿ.ಜೆ.ಪವಾರ, ಚಂದ್ರಣ್ಣ ಶಾಮರಾಯನವರ, ತಾನಾಜಿರಾವ್ ಮುರಂಕರ, ಹನಮಂತ ನಿಕ್ಕಂ, ತಾನಾಜಿ ಶಿಂಧೆ, ರವಿ ಗಿರಿಜನ್ನವರ, ಮಂಜು ನಿಕ್ಕಮ, ಲಕ್ಷ್ಮಣ ಕಿಟದಾಳ, ಬಸವರಾಜ ಪುಟ್ಟಿ, ಸುರೇಶ ಬಾಳೋಜಿ, ತಾನಾಜಿ ಶಿಂಧೆ, ಸುಭಾಸ ಅರಗಂಜಿ, ಮಲ್ಲೇಶ ರಾಜನಾಳ, ಕೇದಾರ ಮೊಕಾಶಿ, ಬಸವದೇವರು, ಬಿ,ವಿ.ನಲವಡೆ, ಸಿದ್ದಪ್ಪ ರಾಹುತ, ಎಸ್.ಸಿ.ಶಿಂಧೆ, ಮಂಜುನಾಥ ಡಬಕೆ, ಮಲ್ಲಿಕಾರ್ಜುನ ಬೇವೂರ, ಸನ್ನಿ ನರಗೋಳ, ಬಿ.ಎನ್.ಪ್ರಭುನವರ, ಶಿವಾನಂದ ಪಟ್ಟಣಶೆಟ್ಟಿ, ಮಾರುತಿ ಜಾಧವ, ಡಾ.ಹೇಮಂತ ಭಸ್ಮೆ, ಅಣ್ಣಪ್ಪ ಪವಾರ, ಎಫ್.ವೈ.ಗಾಜಿ, ಸಂಜು ಪಾಚಂಗಿ, ಅಂದುಸಿಂಗ್ ರಜಪುತ, ಶಿವಾನಂದ ಹೂಲಿಕಟ್ಟಿ, ರಾಜಶೇಖರ ನಿಡವಣಿ, ಅಶೋಕ ಕದಮ, ಶಿವನಗೌಡ ಪಾಟೀಲ, ಬಸವರಾಜ ಕಪ್ಪಣ್ಣವರ, ಮಲ್ಲು ಬೀಳಗಿ, ವಿಠ್ಠಲ ಜಾಮದಾರ, ಅಶೋಕ ಶಿಂಧೆ, ಗಿರೀಶ ಮುನವಳ್ಳಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಮರಾಠ ಸಮಾಜದ ಮುಖಂಡರು ಇದ್ದರು. ಶಿವಾನಂದ ತಾರೀಹಾಳ ನಿರೂಪಿಸಿ ವಂದಿಸಿದರು.
ಕೋಟ್..
ಛತ್ರಪತಿ ಶಿವಾಜಿ ಮಹಾರಾಜರ ಸಾಮಾಜಿಕ ಹಾಗೂ ನ್ಯಾಯ ಸಮ್ಮತದ ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಶಿವಾಜಿ ಮಹಾರಾಜರ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕನ್ನು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆಯ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯ ಮೂಡಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.