ಕನ್ನಡಪ್ರಭ ವಾರ್ತೆ ರಾಯಚೂರು
ತಾಲೂಕಿನ ಯರಗೇರಾ ಸಮೀಪದ ರಾಯಚೂರು ವಿಶ್ವವಿದ್ಯಾಲಯದ ಕೃಷ್ಣತುಂಗಾ ಸಂಭಾಂಗಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಧೈರ್ಯ, ಸಾಹಸವನ್ನು ಮೆರೆಯುವ ಮೂಲಕ ಆತ್ಮಾಭಿಮಾನದಿಂದ ಸ್ವಾತಂತ್ರ್ಯ ಹೊಂದಲು ಜನರನ್ನು ಪ್ರೇರೇಪಿಸಿದರು. ತಾವು ಗೆದ್ದು ಆಡಳಿತಕ್ಕೆ ಬಂದ ನಂತರ ಪ್ರಗತಿಪರ-ಜನಪರ, ನ್ಯಾಯ-ಸಮಾನತೆಯುಳ್ಳ ಜವಾಬ್ದಾರಿಯುತ ಸಮಾಜವನ್ನು ಸ್ಥಾಪಿಸಿದರು. ಇದೇ ಕಾರಣಕ್ಕೆ ಶಿವಾಜಿ ಮಹಾರಾಜರು ಯುಗದ ಶ್ರೇಷ್ಠ ನಾಯಕರಾಗಿದ್ದಾರೆ ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ರಾಘವೇಂದ್ರ ಫತೇಪುರ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಯುದ್ಧ ಕೌಶಲಗಳು (ಮಿಲಿಟರಿ ಕಲೆ) ಮತ್ತು ಧೈರ್ಯ-ಸಾಹಸಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಸ್ತಾರವಾದ ಸಾಮ್ರಾಜ್ಯ, ಸಮುದ್ರ ವ್ಯಾಪಾರ ಮತ್ತು ನೌಕಾಪಡೆ, ಶ್ರೇಷ್ಠ ಧಾರ್ಮಿಕ ತತ್ವಗಳು ಜೊತೆಗೆ ಮಾನವತಾ ವಾದದಡಿಯ ಜನಾನುರಾಗಿ ಆಡಳಿತಕ್ಕೆ ಕೂಡ ಅವರು ಹೆಸರಾಗಿದ್ದಾರೆ ಎಂದು ತಿಳಿಸಿದರು.
ನಗರದಾದ್ಯಂತ ಶಿವಾಜಿ ಜಯಂತಿ ಸಂಭ್ರಮ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು, ಹೋಬಳಿಗಳಲ್ಲಿ ಅದ್ಧೂರಿಯಾಗಿ ಸೋಮವಾರ ಆಚರಿಸಲಾಯಿತು.
ಭಾವಚಿತ್ರದ ಮೆರವಣಿಗೆ: ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಛತ್ರಪತಿ ಶಿವಾಜಿ ಮಹರಾಜರ ಜಯಂತಿ ನಿಮಿತ್ತ ನಗರದಲ್ಲಿ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ನಂತರ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಖಾಸಭಾವಿಯ ಹತ್ತಿರದ ಛತ್ರಪತಿ ಶಿವಾಜಿ ವೃತ್ತದಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.