ಸಮಾಜದ ಮುಖಂಡರ ಸಮ್ಮುಖ ನಾಮಪತ್ರ ಸಲ್ಲಿಕೆ । ಬೆಂಬಲ ನೀಡುವಂತೆ ಮುಖಂಡರಲ್ಲಿ ಮನವಿ
ಹಾಸನ ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆ 2024-29 ವರೆಗೆ ೫ ವರ್ಷಗಳ ಅವಧಿಗೆ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ ಕಟ್ಟಾಯ ಶಿವಕುಮಾರ್ ಅವರು ಸಮಾಜದ ಮುಖಂಡರ ಸಮ್ಮುಖದಲ್ಲಿ ತಾಲೂಕು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಕುರಿತು ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಘಟಕದಿಂದ ಹಾಸನ ಜಿಲ್ಲಾ ತಾಲೂಕು ಚುನಾವಣೆಯನ್ನು ಘೋಷಣೆ ಮಾಡಲಾಗಿದ್ದು, ಜೂ.27 ರಿಂದ ನಾಮಪತ್ರ ಸಲ್ಲಿಸಲು ಹೇಳಿದೆ. ನಾನು ಹಾಸನ ತಾಲೂಕಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಬೇಕು ಎಂಬುದು ಅಭಿಲಾಷೆಯಾಗಿದೆ. ಚುನಾವಣೆ ನಡೆದರೂ ಸಹ ನಮಗೆ ಮತವನ್ನು ನೀಡಬೇಕಾಗಿ ನಾನು ವಿನಂತಿ ಮಾಡುತ್ತೇನೆ’ ಎಂದು ಹೇಳಿದರು.
ಚುನಾವಣೆಗೆ ಅವಕಾಶ ಮಾಡಿಕೊಟ್ಟು ಅದರಿಂದ ತೊಂದರೆ ಅನುಭವಿಸುವುದು ಬೇಡ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಒಂದು ಸಂಘಟನೆ ಮಾಡುವುದು ಉತ್ತಮ ಎಂದು ಮನವಿ ಮಾಡಿದರು.
ಹಾಸನ ವೀರಶೈವ ಲಿಂಗಾಯತ ಜಿಲ್ಲಾ ಸಂಘದ ನಿರ್ದೇಶಕ ಶೋಭನ್ ಬಾಬು, ಮುಖಂಡರಾದ ಎಚ್.ಎನ್.ನಾಗೇಶ್, ಶೆಟ್ಟಿಹಳ್ಳಿ ಧರ್ಮ, ಮದನ್, ಬ್ಯಾಡರಹಳ್ಳಿ ಶಿವಪ್ಪ, ಪಾಪು, ಹಾಲಿ ಉಪಾಧ್ಯಕ್ಷ ಕುಮಾರಸ್ವಾಮಿ, ಲೀಲಾವತಿ, ಧರ್ಮಪ್ಪ ಇತರರು ಹಾಜರಿದ್ದರು.