ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶ್ರೀ ಡಾ. ಶಿವಕುಮಾರ ಸ್ವಾಮಿಗಳ ೧೧೭ನೇ ಜಯಂತೋತ್ಸವ ಪ್ರಯುಕ್ತ ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿರುವ ಸಿದ್ದಗಂಗಾ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಹಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ನೀಡಲಾಯಿತು.ಬೆಳಗ್ಗೆ ಸಹಕಾರ ಸಂಘದ ಅಧ್ಯಕ್ಷ ಗೌರಿ ಶಂಕರ್ ಅವರು ಸಿದ್ದಗಂಗಾಶ್ರಿಗಳ ಭಾವಚಿತ್ರಕ್ಕೆ ಪೂಜಾ ಸಲ್ಲಿಸಿ, ಪುರ್ಷ್ಪಾಚನೆ ಮಾಡಿದ ಬಳಿಕ ಉಚಿತವಾಗಿ ಕ್ಯಾನ್‌ಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಡಾ. ಪರಮೇಶ್ವರಪ್ಪ, ಬದನುಗುಪ್ಪೆ ಗುರುಸ್ವಾಮಿ, ಲಿಂಗರಾಜಮೂರ್ತಿ, ಎಚ್.ಎಂ. ಗುರುಸ್ವಾಮಿ, ವಿ. ನಂಜುಂಡಸ್ವಾಮಿ, ಬಿ. ನಾಗೇಂದ್ರ, ಎನ್. ದೊರೆಸ್ವಾಮಿ, ಸಿ. ರಾಜಶೇಖರಮೂರ್ತಿ, ಪ್ರಮೀಳಾ ಉದಗಟ್ಟಿ, ನಾಗಮಣಿ, ಆರ್.ಎಸ್. ಲಿಂಗರಾಜು, ಸಿಇಓ ನಂಜುಂಡಸ್ವಾಮಿ, ಮಹೇಂದ್ರ, ಆಕಾಶ್ ಮೊದಲಾದವರು ಇದ್ದಾರೆ. ಸಿದ್ದಗಂಗಾ ಕ್ಯಾಂಟೀನ್‌ನಲ್ಲಿ ಅನ್ನಸಂತರ್ಪಣೆ
ಚಾಮರಾಜನಗರ: ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಸಿದ್ದಗಂಗಾ ಕ್ಯಾಂಟೀನ್‌ನಲ್ಲಿ ಶ್ರೀ ಶಿವಕುಮಾರಸ್ವಾಮಿಗಳ ಭಕ್ತ ವೃಂದದಿಂದ ಶ್ರೀ ಶಿವಕುಮಾರಸ್ವಾಮಿಗಳ ೧೧೭ನೇ ಜಯಂತೋತ್ಸವ ಪ್ರಯುಕ್ತ ಅನ್ನಸಂತರ್ಪಣೆ ನೇರವೇರಿಸಲಾಯಿತು.ನಗರದ ಸಿದ್ದಗಂಗಾ ಕ್ಯಾಂಟೀನ್ ಮುಂಭಾಗ ಶ್ರೀಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಭಕ್ತವೃಂದವರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಜೊತೆಗೆ ಅವರ ಹೆಸರಿನಲ್ಲಿ ದಾಸೋಹ ಮಾಡಲಾಯಿತು. ಬೆಳಗ್ಗೆಯಿಂದ ಸಾರ್ವಜನಿಕರಿಗೆ ಉಪ್ಪಿಟ್ಟು, ಕೇಸರಿ ಬಾತ್, ರೈಸ್‌ಬಾತ್, ಮೊಸರು ಬಜ್ಜಿಯನ್ನು ಭಕ್ತ ವೃಂದವರು ವಿತರಣೆ ಮಾಡಿದರು. ಭಕ್ತ ವೃಂದದ ನಗರಸಭಾ ಸದಸ್ಯ ಸಿ.ಎಂ. ಮಂಜುನಾಥ್, ನಾಗೇಂದ್ರ, ಕ್ಯಾಂಟೀನ್ ಶಿವು, ಶೈಲೇಶ್, ಅರುಣಾ, ಮಹೇಶ್, ಚಂದನ್, ಹರೀಶ್, ಮಂಜುನಾಥ್, ಮಧು, ನಂದನ್, ಗೋಪಾಲಸ್ವಾಮಿ ಮತ್ತಿತರರಿದ್ದರು.