ತ್ರಿವಿಧ ದಾಸೋಹಿ ಶಿವಕುಮಾರಸ್ವಾಮಿಗಳ 6ನೇ ಪುಣ್ಯಸ್ಮರಣೆ

KannadaprabhaNewsNetwork | Published : Jan 22, 2025 12:31 AM

ಸಾರಾಂಶ

ಶಿವಕುಮಾರ ಸ್ವಾಮೀಜಿಗಳ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಸಂಗಮೇಶ್ವರ ಸ್ವಾಮೀಜಿ ಸಲಹೆ ನೀಡಿದರು. ನಾಡಿನ ಪುಣ್ಯಭೂಮಿಯಲ್ಲಿ ಅನೇಕ ಸಂತರು, ಶರಣರು, ತಪಸ್ವಿಗಳು, ಸಿದ್ಧಪುರುಷರು ತಮ್ಮ ಕಾಯಕದ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಬೆಳಗುತ್ತಿದ್ದಾರೆ. ಆದರೆ ಶಿವಕುಮಾರ ಸ್ವಾಮೀಜಿ ಬಡಮಕ್ಕಳಿಗೆ ಅನ್ನದಾಸೋಹ, ಅಕ್ಷರ, ಆಶ್ರಯ, ಕೊಟ್ಟು ಅವರ ಜೀವನದ ಬದುಕು ಪಾವನಗೊಳಿಸಿರುವ ಸ್ವಾಮೀಜಿವರ ನಡೆ, ನುಡಿ ನಮಗೆ ಮಾರ್ಗದರ್ಶನವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಶಿವಕುಮಾರ ಸ್ವಾಮೀಜಿಗಳ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಸಂಗಮೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಗಂಧದ ಕೋಟೆಯ ವೃತ್ತದಲ್ಲಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ತ್ರಿವಿಧ ದಾಸೋಹಿಗಳು, ನಡೆದಾಡುವ ದೇವರು, ಕಾಯಕಯೋಗಿಗಳು ಶತಾಯುಷಿಯಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿರವರ 6ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಅನ್ನದಾಸೋಹ, ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮ ಕೆಲಸವಾಗಿದೆ ಎಂದರು.

ನಾವು ಡಾ. ಶಿವಕುಮಾರ ಸ್ವಾಮೀಜಿರವರ ಆದರ್ಶ ಗುಣಗಳನ್ನು, ಅವರ ಸೇವಾಕಾರ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ನಾಡಿನ ಪುಣ್ಯಭೂಮಿಯಲ್ಲಿ ಅನೇಕ ಸಂತರು, ಶರಣರು, ತಪಸ್ವಿಗಳು, ಸಿದ್ಧಪುರುಷರು ತಮ್ಮ ಕಾಯಕದ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಬೆಳಗುತ್ತಿದ್ದಾರೆ. ಆದರೆ ಶಿವಕುಮಾರ ಸ್ವಾಮೀಜಿ ಬಡಮಕ್ಕಳಿಗೆ ಅನ್ನದಾಸೋಹ, ಅಕ್ಷರ, ಆಶ್ರಯ, ಕೊಟ್ಟು ಅವರ ಜೀವನದ ಬದುಕು ಪಾವನಗೊಳಿಸಿರುವ ಸ್ವಾಮೀಜಿವರ ನಡೆ, ನುಡಿ ನಮಗೆ ಮಾರ್ಗದರ್ಶನವಾಗಿದೆ. ಶ್ರೀ ಸಿದ್ಧಗಂಗಾ ಮಠ ಸೇರಿದಂತೆ ನಾಡಿನ ಎಲ್ಲಾ ಕಡೆ ಪೂಜೆ ಪುನಸ್ಕಾರಗಳು ಅನ್ನದಾಸೋಹ ಆರೋಗ್ಯ ಶಿಬಿರ, ರಕ್ತದಾನ ಮಾಡುವ ಮೂಲಕ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಹೇಳಿದರು. ಇವರಂತೆ ಆದಿಚುಂಚನಗಿರಿ ಸ್ವಾಮೀಜಿರವರ ಪುಣ್ಯಾರಾಧನೆ ಇದೇ ತಿಂಗಳು ನಡೆದಿದೆ ಎಂದರು.

ಕಾರ್ಯಕ್ರಮ ಆಯೋಜಕರಾದ ಶೇಖರ್, ಮೋಹನ್ ಕುಮಾರ್‌ ಒಳಗೊಂಡಂತೆ ಗಂಧದಕೋಟಿ ಆಟೋ ಚಾಲಕರ, ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಈ ಪೂಜಾ ಕಾರ್ಯಕ್ರಮದಲ್ಲಿ ಹಾಸನ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹಾಸನ ಪ್ರಾಧಿಕಾರ ಯೋಜನಾಧಿಕಾರಿ ಶಿವಕುಮಾರ್, ಹಿರಿಯ ಅಡ್ವೋಕೆಟ್ ಆರ್‌ ಸಿ ಚನ್ನಬಸವಯ್ಯ, ನಗರಸಭಾ ಮಾಜಿ ಸದಸ್ಯ ಚಂದ್ರು, ಸುಬ್ರಮಣ್ಯ, ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಎಚ್. ವಿ. ಹೇಮಂತ್ ಕುಮಾರ್‌, ಸಹ ಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ನಿರ್ದೇಶಕರಾದ ಮಯೂರಿ ಲೋಕೇಶ್, ಹಾಸನ ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಉಪಾಧ್ಯಕ್ಷರಾದ ಪುನಿತ್ ಪಟೇಲ್, ವೀರಶೈವ ಲಿಂಗಾಯತ ಜಿಲ್ಲಾ ಸಂಘದ ನಿರ್ದೇಶಕ ಬಾಳ್ಳು ನಾಗೇಶ್, ಬಿ.ವಿ. ಲತೇಶ್, ಜಿಲ್ಲಾ ಬಿಜೆಪಿ ಮುಖಂಡರಾದ ಎಚ್.ಎನ್. ನಾಗೇಶ್, ವೇಣುಗೋಪಾಲ್, ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್‌, ಅರಕಲಗೂಡು ಚಂದ್ರಶೇಖರ್, ಜಿಲ್ಲಾ ವಿಷ್ಣುವರ್ಧನ ಸಂಘದ ಅಧ್ಯಕ್ಷರಾದ ಮಹಂತೇಶ್, ವಿಜಯಕುಮಾರ್, ದೇವಿರಯ್ಯ, ಎಂ.ವಿ. ದೇವರಾಜು, ಬಿದರಕೆರೆ ದೇವರಾಜ್, ಯು.ಎಸ್. ಮಲ್ಲಿಕಾರ್ಜುನ, ಯು.ಎಸ್. ಬಸವರಾಜ್, ಸೋಮಶೇಖರ್‌, ಇತರರು ಪಾಲ್ಗೊಂಡಿದ್ದರು. ಪೂಜೆಯನ್ನು ಶ್ರೀ ಸಿದ್ಧೇಶ್ವರ ದೇವಸ್ಥಾನದ ಅರ್ಚಕರು ನೆರವೇರಿಸಿದರು. ಸಾವಿರಾರು ಜನರು ಪ್ರಸಾದ ಸ್ವೀಕರಿಸಿದರು, ಹಲವಾರು ಜನರು ರಕ್ತದಾನ ಮಾಡಿದರು. ಸಾರ್ವಜನಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.

Share this article