ತಾಯಿಗೆ ದ್ರೋಹ ಮಾಡಿ ಕಾಂಗ್ರೆಸ್‌ ಶಾಸಕರಾದ ಕೆಎಂಶಿ

KannadaprabhaNewsNetwork |  
Published : Jan 25, 2026, 01:45 AM IST
ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದ ೩೩ ಕೆವಿ ಗ್ರಿಡ್‌ ವಿದ್ಯುತ್ ಸಂಪರ್ಕ ಜಾಲದ ಉನ್ನತಿಕರಣದ ಕಾಮಗಾರಿಗೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಶಿವಲಿಂಗೇಗೌಡರು ಜೆಡಿಎಸ್‌ಗೆ ದ್ರೋಹ ಮಾಡಿ ಹೋಗಿ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಯಾವುದೋ ಹೊರ ಜಿಲ್ಲೆಯ ಸಚಿವರನ್ನು ತಂದು ಇಲ್ಲಿಗೆ ಉಸ್ತುವಾರಿ ಸಚಿವರನ್ನಾಗಿ ಈ ಸರ್ಕಾರ ನೇಮಿಸಿದೆ. ಅಂದರೆ ಕಾಂಗ್ರೆಸ್‌ ಸರ್ಕಾರ ಕೂಡ ಶಿವಲಿಂಗೇಗೌಡರನ್ನು ಎಲ್ಲಿ ಇಟ್ಟಿದೆ ಹಾಗೂ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಮೂದಲಿಸಿದರು. ದೇವೇಗೌಡರ ರೈತಪರ ಹೋರಾಟದ ಫಲವಾಗಿ ಜೆಡಿಎಸ್ ೨೫ ವರ್ಷ ಪೂರೈಸಿದೆ. ೨೦೨೮ರಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡುವುದು ರಾಜ್ಯದ ಜನರ ಒತ್ತಾಸೆಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜೆಡಿಎಸ್ ಜೊತೆಯಲ್ಲೇ ಇದ್ದು, ನಮ್ಮಲ್ಲೇ ತಿಂದು ಉಂಡು ಕಡೆಗೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದವರು ಇಂದು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ ಎಂದು ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರ ನಡೆಯನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.

ನಗರದಲ್ಲಿ ಶನಿವಾರ ನಡೆದ ಜೆಡಿಎಸ್‌ನ ಜನತಾ ಸಮಾವೇಶದಲ್ಲಿ ಪರಿಣಾಮಕಾರಿ ಭಾಷಣ ಮಾಡಿದ ನಿಖಿಲ್‌, ಶಿವಲಿಂಗೇಗೌಡರು ಜೆಡಿಎಸ್‌ಗೆ ದ್ರೋಹ ಮಾಡಿ ಹೋಗಿ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಯಾವುದೋ ಹೊರ ಜಿಲ್ಲೆಯ ಸಚಿವರನ್ನು ತಂದು ಇಲ್ಲಿಗೆ ಉಸ್ತುವಾರಿ ಸಚಿವರನ್ನಾಗಿ ಈ ಸರ್ಕಾರ ನೇಮಿಸಿದೆ. ಅಂದರೆ ಕಾಂಗ್ರೆಸ್‌ ಸರ್ಕಾರ ಕೂಡ ಶಿವಲಿಂಗೇಗೌಡರನ್ನು ಎಲ್ಲಿ ಇಟ್ಟಿದೆ ಹಾಗೂ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಮೂದಲಿಸಿದರು. ದೇವೇಗೌಡರ ರೈತಪರ ಹೋರಾಟದ ಫಲವಾಗಿ ಜೆಡಿಎಸ್ ೨೫ ವರ್ಷ ಪೂರೈಸಿದೆ. ೨೦೨೮ರಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡುವುದು ರಾಜ್ಯದ ಜನರ ಒತ್ತಾಸೆಯಾಗಿದೆ ಎಂದು ಹೇಳಿದರು.

ಮೋದಿಯಿಂದ ದೇಶದಲ್ಲಿ ಸ್ವಾತಂತ್ರ್ಯ ಇದೆ:

ಸಮಾವೇಶದಲ್ಲಿ ಮಾತನಾಡಿದ ಹೊಳೆನರಸೀಪುರ ಶಾಸಕ ಹಾಗೂ ಮುಖಂಡ ಎಚ್‌.ಡಿ. ರೇವಣ್ಣ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಗೌರವವಿದೆ. ಅವರು ಇರುವುದರಿಂದಾಗಿಯೇ ಭಾರತದಲ್ಲಿ ಸ್ವಾತಂತ್ರ್ಯ ಇದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲೂ ಗಮನ ಇಲ್ಲದೆ ಕಿತ್ತಾಟದಲ್ಲಿ ತೊಡಗಿದೆ. ಹಾಗಾಗಿ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಅದು ದೇವೇಗೌಡರು ಹಾಗೂ ಕುಮಾರಣ್ಣನಿಂದ ಮಾತ್ರ ಸಾಧ್ಯವಿದೆ. ಹಾಗಾಗಿ ಮುಂದಿನ 2028 ರ ಚುನಾವಣೆಯಲ್ಲಿ ರಾಜ್ಯದ ಜನರು ಗಟ್ಟಿ ನಿರ್ಧಾರ ಮಾಡಬೇಕೆಂದು ಕರೆ ನೀಡಿದರು.

ದೇವೇಗೌಡರು ಅಂದೇ ನನಗೆ ಹೇಳಿದ್ದರು. ಅರಸೀಕೆರೆಯಲ್ಲಿ ಶಿವಲಿಂಗೇಗೌಡರನ್ನು ಬೆಳೆಸಬೇಡ. ಯಾರಾದರೂ ಲಿಂಗಾಯಿತ ಅಭ್ಯರ್ಥಿಗೆ ಟಿಕೆಟ್‌ ಕೊಡು ಎಂದು. ಆದರೆ, ಅಂದು ನಾನು ಅವರ ಮಾತು ಕೇಳಲಿಲ್ಲ. ಈಗ ನಮ್ಮ ಬೆನ್ನಿಗೇ ಚೂರಿ ಹಾಕಿದ್ದಾರೆ. ಅವರ ಹೆಸರು ಹೇಳಲ್ಲ ಎಂದು ಶಿವಲಿಂಗೇಗೌಡರ ಹೆಸರೇಳದೆ ಟೀಕಿಸಿದರು.

ಒಟ್ಟಾರೆ, ಈ ಸಮಾವೇಶವು ಜೆಡಿಎಸ್‌ಗೆ ತವರಿನಲ್ಲೆ ಶಕ್ತಿಯ ಪ್ರದರ್ಶನವಾಗಿದ್ದು, ೨೦೨೮ರ ಚುನಾವಣೆಯ ರಾಜಕೀಯ ಜಿದ್ದಾಜಿದ್ದಿನ ವೇದಿಕೆಯಾಗಿತ್ತು. ಸಮಾವೇಶದ ವೇದಿಕೆಯಲ್ಲಿ ಕೋಲಾರ ಸಂಸದ ಮಲ್ಲೇಶಬಾಬು, ಅರಕಲಗೂಡು ಶಾಸಕ ಎ.ಮಂಜು, ಶ್ರವಣಬೆಳಗೊಳ ಶಾಸಕ ಸಿ.ಎನ್‌.ಬಾಲಕೃಷ್ಣ, ಮಾಜಿ ಸಚಿವ ಹೆಚ್‌.ಕೆ.ಕುಮಾರಸ್ವಾಮಿ, ಜೆಡಿಎಸ್‌‍ ಜಿಲ್ಲಾಧ್ಯಕ್ಷ ಕೆ.ಎಸ್‌‍.ಲಿಂಗೇಶ್‌ ಮಾತನಾಡಿದರು. ಶಾಸಕ ಜಿ.ಟಿ.ಹರೀಶ್‌ಗೌಡ, ಎಚ್‌.ಟಿ. ಮಂಜು, ಎಂ.ಪಿ.ಕೃಷ್ಣಪ್ಪ, ಸಮೃದ್ಧಿ ಮಂಜುನಾಥ್‌, ವೆಂಕಟಶಿವಾರೆಡ್ಡಿ, ಶಾರದಾ ಪೂರ್ಯನಾಯಕ, ಶರಣಗೌಡ ಕಂದಕೂರು, ಕರಿಯಮ ಜಿ. ನಾಯಕ, ಭೀಮನಗೌಡ ಪಾಟೀಲ, ಹನೂರು ಮಂಜುನಾಥ್‌, ನೇಮಿರಾಜು, ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಕೋರ್‌ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ಬೋಜೇಗೌಡ, ಟಿ.ಎ.ಶರವಣ, ಇಂಚರ ಗೋವಿಂದರಾಜು, ಮಂಜೇಗೌಡ, ವಿವೇಕಾನಂದ, ಜವರಾಯಿಗೌಡ, ಜೆಡಿಎಸ್‌‍ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ರಶ್ಮೀ ರಾಮೇಗೌಡ, ಮಾಜಿ ಸಂಸದ ಸಿ.ಎಸ್‌‍.ಪುಟ್ಟರಾಜು, ಬಂಡೆಪ್ಪ ಕಾಶಂಪೂರ್‌, ವೆಂಕಟರಾವ್‌ ನಾಗನಗೌಡ, ಸಾ.ರಾ. ಮಹೇಶ್‌, ಡಿ.ಸಿ.ತಮಣ್ಣ, ಸುರೇಶ್‌ಗೌಡ, ಕೆ.ಮಾದೇವ್‌, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಶ್ರೀಕಂಠೇಗೌಡ, ಕೆ.ಎ.ತಿಪ್ಪೇಸ್ವಾಮಿ, ಹೆಚ್‌.ಎಂ.ರಮೇಶ್‌ಗೌಡ, ಮಾಜಿ ಶಾಸಕರಾದ ಅಶ್ವಿನಿ ಕುಮಾರ್‌, ಮಾಗಡಿ ಮಂಜುನಾಥ್‌, ತಿಮರಾಯಪ್ಪ, ಹೆಚ್‌.ಎಸ್‌‍.ಶಿವಶಂಕರ್‌, ನಿಸರ್ಗ ನಾರಾಯಣಸ್ವಾಮಿ, ದೊಡ್ಡಪ್ಪಗೌಡ, ರಾಜಾ ವೆಂಕಟಪ್ಪ ನಾಯಕ, ವೈ.ಎಸ್‌‍.ವಿ.ದತ್ತ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹೊನ್ನವಳ್ಳಿಸ ಸತೀಶ್‌, ಜೆಡಿಎಸ್‌‍ ಜಿಲ್ಲಾ ವಕ್ತಾರ ರಘು ಹೊಂಗೆರೆ ಹಾಗೂ ಇತರರು ಇದ್ದರು.* ಬಾಕ್ಸ್‌: ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್‌ ಸಮಾವೇಶ?ಹಾಸನದ ಶಾಸಕ ಎಚ್. ಪಿ. ಸ್ವರೂಪ್ ಪ್ರಕಾಶ್ ವೇದಿಕೆಯಲ್ಲಿದ್ದ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ, ಹಾಸನ ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ ಜೆಡಿಎಸ್ ಕಾರಣ. ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಾದರೂ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಆದರೂ ಎರಡು ಸಮಾವೇಶ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. ಜೆಡಿಎಸ್ ಸರ್ಕಾರದ ಅವಧಿಯಲ್ಲಿ, ಸರ್ಕಾರ ಎಂಜಿನಿಯರಿಂಗ್ ಕಾಲೇಜು, ಬಸ್ ನಿಲ್ದಾಣ, ಕೋರ್ಟ್, ಮಹಿಳಾ ಕಾಲೇಜುಗಳು, ಹಾಸ್ಟೆಲ್, ಸೇರಿದಂತೆ ಹಲವಾರು ಶಾಶ್ವತ ಅಭಿವೃದ್ಧಿ ಕಾಗಾಮರಿಗಳನ್ನು ಮಾಡಿದ್ದಾರೆ. ಹಾಸನ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ತುಂಬುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಆದರೂ ಜಿಲ್ಲೆಯಲ್ಲಿ ಎರಡು ಸಮಾವೇಶ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂಬುದನ್ನು ಅವರೇ ಹೇಳಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!