ಶರಣಬಸವದೇವರಿಂದ ಓಂಕಾರ ಮಂತ್ರಪಠಣ

KannadaprabhaNewsNetwork |  
Published : Mar 09, 2024, 01:31 AM IST
ಹಳಿಂಗಳಿ : ಶರಣಬಸವದೇವರಿಂದ ಓಂಕಾರ ಮಂತ್ರಪಠಣ, ನೂರಾರು ಮಕ್ಕಳು ಭಾಗಿ | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ತೀರದ ಹಳಿಂಗಳಿ ಗ್ರಾಮದ ಸಿದ್ಧಲಿಂಗೇಶ್ವರ ಕಮರಿಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಗ್ಗೆ ಶಿವಮಂತ್ರಪಠಣ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಶಿವನು ನಿರಾಕಾರ ರೂಪಿಯಾಗಿದ್ದು, ಭಕ್ತಿಗೆ ಒಲಿಯುವುದನ್ನು ಅನೇಕ ಪುರಾಣಗಳಲ್ಲಿ ಕೇಳುತ್ತೇವೆ. ಭಕ್ತಿ ಎಂಬುದು ಭಕ್ತನಿಗೆ ಇರಬೇಕಾದ ಅಚಲ ನಂಬಿಕೆ ಕಾಯಕ ಶ್ರದ್ಧೆಯಾಗಿದೆ. ಹಾಗಾಗಿ ಶಿವನ ಸ್ವರೂಪಿ ಕಾಯಕದಲ್ಲಿ, ವಿದ್ಯಾಗಮನಗಳಲ್ಲಿ ಭಕ್ತಿ ಇಡಬೇಕೆಂದು ಕಮರಿಮಠದ ಶರಣಬಸವದೇವರು ಹೇಳಿದರು.

ತಾಲೂಕಿನ ಕೃಷ್ಣಾ ತೀರದ ಹಳಿಂಗಳಿ ಗ್ರಾಮದ ಸಿದ್ಧಲಿಂಗೇಶ್ವರ ಕಮರಿಮಠದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ಬೆಳಗ್ಗೆ ಶಿವಮಂತ್ರಪಠಣ ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿ, ಆಶೀರ್ವಚನ ನೀಡಿದರು. ಮಕ್ಕಳಿಗೆ ಓಂಕಾರ ಪ್ರಣವ ಮಂತ್ರವನ್ನು ಪಠಿಸಿದರು. ಶ್ರೀಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ಶಾಲಾ ಮಕ್ಕಳು, ಶಿಕ್ಷಕರು, ಶ್ರೀಮಠದ ಸದ್ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!