ನಾಳೆಯಿಂದ ಶಿವಮೊಗ್ಗ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ

KannadaprabhaNewsNetwork |  
Published : Nov 16, 2023, 01:16 AM IST
ಕ್ರಿಕೆಟ್ | Kannada Prabha

ಸಾರಾಂಶ

ಪಂದ್ಯವನ್ನು ಬಿಳಿ ಬಣ್ಣದ ಬಾಲ್‌ನಲ್ಲಿ ಆಡಲಾಗುವುದು. ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತ್ರೃತ್ವದಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಲ್ಲಿನ ನವುಲೆ ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಜೆಎನ್‌ಎನ್‌ಸಿಈ ಟರ್ಫ್‌ ಅಂಕಣದಲ್ಲಿ ನ.17ರಿಂದ 25ವರೆಗೆ ಬಿಸಿಸಿಐ 15 ವರ್ಷ ವಯೋಮಿತಿಯ ಅಂತರ್‌ ರಾಜ್ಯ ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯ ಎಫ್‌ ಗುಂಪಿನ ಪಂದ್ಯಗಳು ನಡೆಯಲಿವೆ.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕ ಎಚ್.ಎಸ್. ಸದಾನಂದ ಮಾತನಾಡಿ, ದೇಶದ 36 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. "ಎಫ್ " ಗುಂಪಿನಲ್ಲಿ ಬರೋಡಾ, , ಹಿಮಾಚಲ ಪ್ರದೇಶ, ಮಣಿಪುರ, ಪಾಂಡಿಚೇರಿ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳ ತಂಡಗಳಿವೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ’ಇ’ ಗುಂಪಿನಲ್ಲಿ ಉತ್ತರ ಪ್ರದೇಶದಲ್ಲಿ ಆಡುತ್ತಿದ್ದು ದೆಹಲಿ, ಅಸ್ಸಾಂ, ಝಾಖಂಡ್, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯ ತಂಡಗಳು ಈ ಗುಂಪಿನಲ್ಲಿ ಇವೆ. ಪಂದ್ಯಕ್ಕೂ ಮಧ್ಯ ಒಂದು ದಿವಸದ ವಿಶ್ರಾಂತಿ ಇರುತ್ತದೆ. ದಿನಂಪ್ರತಿ 3 ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿವೆ ಎಂದರು.

ಈ ಪಂದ್ಯವನ್ನು ಬಿಳಿ ಬಣ್ಣದ ಬಾಲ್‌ನಲ್ಲಿ ಆಡಲಾಗುವುದು. ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತ್ರೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಅಗಮಿಸುತ್ತಿದ್ದು, ಈ ಪಂದ್ಯಾವಳಿಗಳನ್ನು ಆಯೋಜಿಸಲು ಶಿವಮೊಗ್ಗ ವಲಯವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

ಪ್ರತಿ ದಿನ ಪಂದ್ಯಾವಳಿಯು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗಲಿದೆ. 17 ರಂದು ಮೊದಲ ಪಂದ್ಯಗಳನ್ನು ನವುಲೆಯ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ ಆಟಗಾರ ಎ. ರಘುರಾಮ್ ಭಟ್ ಉದ್ಘಾಟಿಸಲಿದ್ದಾರೆ. ಇದೇ ದಿನ ಜೆಎನ್ಎನ್‌ಸಿ ಶಿವಮೊಗ್ಗದಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯನ್ನು ಎನ್.ಇ.ಎಸ್. ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜೇಶ್‌ ಕಾಮತ್, ಐಡಿಯಲ್ ಗೋಪಾಲಕೃಷ್ಣ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ