ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು

Published : Apr 15, 2026, 11:39 AM IST
dr samiksha reddy died in shivamogga zoo

ಸಾರಾಂಶ

ಪಶು ವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹೆಣ್ಣು ನೀರಾನೆ ಹಂಸಿನಿ (12) ಮಂಗಳವಾರ ಅನಾರೋಗ್ಯದಿಂದ ಸಾವನ್ನಪ್ಪಿದೆ. ಗರ್ಭಿಣಿಯಾಗಿದ್ದ ಹಂಸಿಣಿ ಮರಿ ಹಾಕುವ ಅವಧಿ ಮುಗಿದಿದ್ದರೂ. ಮರಿ ಹಾಕಿರಲಿಲ್ಲ

 ಶಿವಮೊಗ್ಗ :  ಪಶು ವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹೆಣ್ಣು ನೀರಾನೆ ಹಂಸಿನಿ (12) ಮಂಗಳವಾರ ಅನಾರೋಗ್ಯದಿಂದ ಸಾವನ್ನಪ್ಪಿದೆ.

ಅವಧಿ ಮುಗಿದಿದ್ದರೂ ಮರಿ ಹಾಕಿರಲಿಲ್ಲ

ಗರ್ಭಿಣಿಯಾಗಿದ್ದ ಹಂಸಿಣಿ ಮರಿ ಹಾಕುವ ಅವಧಿ ಮುಗಿದಿದ್ದರೂ  ಮರಿ ಹಾಕಿರಲಿಲ್ಲ. ಇದರಿಂದ ಏ.10ರಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ವನ್ಯಜೀವಿ ಪಶು ವೈದ್ಯರ ತಂಡವು ಹಂಸಿನಿ ಆರೋಗ್ಯ ತಪಾಸಣೆ ನಡೆಸಿತ್ತು. ಇದರ ರಕ್ತ ಹಾಗೂ ಇತರ ಮಾದರಿಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ಗಂಭೀರವಾದ ಸೋಂಕು

ಆ ಬಳಿಕ ಲ್ಯಾಬ್ ವರದಿ ಆಧಾರದ ಮೇಲೆ ಹಂಸಿನಿ ಗರ್ಭಾಶಯದಲ್ಲಿ ಗಂಭೀರವಾದ ಸೋಂಕು ಇರುವುದು ಪತ್ತೆಯಾಗಿತ್ತು. ಇದರಿಂದ ಗರ್ಭಾಶಯದ ಒಳಗಿನ ಭ್ರೂಣ ಮರಣ ಹೊಂದಿರಬಹುದು ಎಂದು ಹೇಳಲಾಗಿತ್ತು. ಸೋಂಕಿನಿಂದಲೇ ಹಂಸಿನಿಯ ಪ್ರಮುಖ ಅಂಗಾಂಗಳ ಕಾರ್ಯ ಸ್ಥಗಿತವಾಗಿತ್ತು. ಇದರಿಂದ ಮಂಗಳವಾರ ಮಧ್ಯಾಹ್ನ 3.30ಕ್ಕೆ ಹಂಸಿನಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Stay informed with the latest news and developments from Shivamogga district (ಶಿವಮೊಗ್ಗ ನ್ಯೂಸ್) — covering local politics, community issues, environment, tourism, culture, crime and civic matters in Shivamogga district on Kannada Prabha News.
Read more Articles on

Recommended Stories

ಜೀವನದಲ್ಲಿ ಅಂಬೇಡ್ಕರ್ ಚಿಂತನೆ, ಆದರ್ಶ ಅಳವಡಿಸಿಕೊಳ್ಳಿ: ಶಾಸಕ ಸಂಗಮೇಶ್ವರ್
ಅಸಮಾನತೆ ತೊಲಗಲು ಅಂಬೇಡ್ಕರ್‌ ತತ್ವ ಸಹಕಾರಿ: ಶಾಸಕ ಬಿ.ವೈ.ವಿಜಯೇಂದ್ರ