ಕೃಷಿ, ತೋಟಗಾರಿಕಾ ಮೇಳದಲ್ಲಿ ಜನ ಜಂಗುಳಿನವುಲೆಯ ಕೃಷಿ ಮತ್ತು ತೋಟಗಾರಿಕೆ ವಿದ್ಯಾವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನವಾದ ಶನಿವಾರ ರೈತರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವ್ಯವಸಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನ ಹಾಗೂ ವಿವಿಧ ಬೆಳೆಗಳು, ಪುಷ್ಪಗಳ ಕುರಿತು ಮಾಹಿತಿ ಪಡೆದು ಪುಳಕಿತರಾದರು.