ಮಹಾನ್ ಹೋರಾಟಗಾರ, ಕಾರ್ಮಿಕರ ಧ್ವನಿ ಕಾಮ್ರೇಡ್ ಡಿ.ಸಿ ಮಾಯಣ್ಣ ಮತ್ತು ಬಡ ಮಕ್ಕಳಿಗೆ ಶಿಕ್ಷಣ ನೀಡಿದ ಮಹಾತ್ಮ, ಕಾರ್ಮಿಕರ ನಾಯಕ ಕಾಳೇಗೌಡ ಈ ಇಬ್ಬರು ಕ್ಷೇತ್ರದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯಗಳಾಗಿ ಉಳಿದುಕೊಂಡಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಬಣ್ಣಿಸಿದ್ದಾರೆ.

ನುಡಿನಮನ ಕಾರ್ಯಕ್ರಮ

ಬಿ.ಕೆ.ಮೋಹನ್ ಬಣ್ಣನೆ । ಸಿಪಿಐ, ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಆಯೋಜನೆ । ಅಗಲಿದ ನಾಯಕರ ಗುಣಗಾನಕನ್ನಡಪ್ರಭ ವಾರ್ತೆ ಭದ್ರಾವತಿ

ಮಹಾನ್ ಹೋರಾಟಗಾರ, ಕಾರ್ಮಿಕರ ಧ್ವನಿ ಕಾಮ್ರೇಡ್ ಡಿ.ಸಿ ಮಾಯಣ್ಣ ಮತ್ತು ಬಡ ಮಕ್ಕಳಿಗೆ ಶಿಕ್ಷಣ ನೀಡಿದ ಮಹಾತ್ಮ, ಕಾರ್ಮಿಕರ ನಾಯಕ ಕಾಳೇಗೌಡ ಈ ಇಬ್ಬರು ಕ್ಷೇತ್ರದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯಗಳಾಗಿ ಉಳಿದುಕೊಂಡಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಬಣ್ಣಿಸಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಕಾಮ್ರೆಡ್‌ಗಳಾದ ಡಿ.ಸಿ ಮಾಯಣ್ಣ, ಕಾಳೇಗೌಡ, ಅನಂತ ಸುಬ್ಬರಾವ್‌ರವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಡಿ.ಸಿ.ಮಾಯಣ್ಣ, ಕಾಳೇಗೌಡರವರನ್ನು ಕಳೆದುಕೊಂಡಿರುವುದು ತುಂಬಾ ನೋವುಂಟು ಮಾಡಿದೆ. ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಸಿ ಮಾಯಣ್ಣನವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾರ್ಮಿಕ ಸಂಘಟನೆಗಳ ನಾಯಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕರು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಡಿ.ಸಿ. ಮಾಯಣ್ಣರಂತಹ ನಾಯಕರನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಕ್ಷೇತ್ರದಲ್ಲಿ ಡಿ.ಸಿ ಮಾಯಣ್ಣ ಒಂದು ಇತಿಹಾಸವಾಗಿ ಉಳಿದುಕೊಂಡಿದ್ದಾರೆ ಎಂದರು.

ಕಾಳೇಗೌಡರವರು ರೂಢಿಸಿಕೊಂಡಿದ್ದ ಸ್ವಾಭಿಮಾನ, ಶಿಸ್ತು, ಬದ್ಧತೆ, ಕಾರ್ಮಿಕ ಹೋರಾಟಗಳಲ್ಲಿ ಅವರ ನೀತಿ, ನಿಲುವುಗಳು ನಮ್ಮೆಲ್ಲರಿಗೂ ಮಾರ್ಗದರ್ಶಕ ಎಂದರು.

ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ ಲೋಕೇಶ್ ಮಾತನಾಡಿ, ಡಿ.ಸಿ ಮಾಯಣ್ಣ ಮತ್ತು ಕಾಳೇಗೌಡರವರನ್ನು ಸಿಪಿಐ ಎಂದಿಗೂ ಮರೆಯುವುದಿಲ್ಲ. ಈ ಇಬ್ಬರು ಮಹಾನ್ ನಾಯಕರು ತಮ್ಮ ಬದುಕನ್ನು ಕಾರ್ಮಿಕರಿಗಾಗಿ ಮುಡುಪಾಗಿಟ್ಟಿದ್ದಾರೆ. ಇವರು ಎಂದಿಗೂ ಹೋರಾಟಕ್ಕೆ ಸ್ಫೂರ್ತಿದಾಯಕರು ಎಂದರು.

ಸಿಪಿಐ ಮುಖಂಡರಾದ ರಾಧಾ ಸುಂದರೇಶ್, ರಾಜ್ಯ ಸಹ ಕಾರ್ಯದರ್ಶಿ ಎಚ್.ಎಂ ಸಂತೋಷ್, ಜಿಲ್ಲಾ ಕಾರ್ಯದರ್ಶಿ ಎಂ. ನಾರಾಯಣ, ಬಿಸಿಯೂಟ ಕಾರ್ಯಕರ್ತೆಯರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಕಮ್ಮ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ್, ಕಾರ್ಮಿಕ ಮುಖಂಡ ದೊರೈ, ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ, ಪ್ರಗತಿಪರ ಒಕ್ಕೂಟಗಳ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರಯ್ಯ, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಪತ್ರಕರ್ತ ಸುರೇಶ್, ನ್ಯಾಯವಾದಿ ಟಿ. ಚಂದ್ರೇಗೌಡ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಸರ್.ಎಂ.ವಿ ವಿವಿದ್ದೋದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ಮುಕುಂದಪ್ಪ, ಕೆಡಿಪಿ ನಿರ್ದೇಶಕ ಎಚ್. ರವಿಕುಮಾರ್, ಕಾರ್ಮಿಕ ಮುಖಂಡ ಎಚ್.ಬಿ ಲಿಂಗೋಜಿರಾವ್, ಭಾರತ ಕಮ್ಯೂನಿಸ್ಟ್ ಪಕ್ಷ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಪದಾಧಿಕಾರಿಗಳು, ಕಾಮ್ರೇಡ್ ಡಿ.ಸಿ ಮಾಯಣ್ಣನವರ ಪುತ್ರ ರವಿ, ಕಾಳೇಗೌಡರವರ ಪತ್ನಿ ಉಷಾ ಇತರರು ಹಾಜರಿದ್ದರು.

ಭಾರತ ಕಮ್ಯೂನಿಸ್ಟ್ ಪಕ್ಷ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಐಸಾಕ್ ಲಿಂಕನ್ ಸ್ವಾಗತಿಸಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಮಿಕ ಮುಖಂಡ ಕೆ. ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಡಿ೧-ಬಿಡಿವಿಟಿ೨

ಭದ್ರಾವತಿಯಲ್ಲಿ ಕಾಮ್ರೆಡ್ ಮಾಯಣ್ಣ, ಕಾಳೇಗೌಡ, ಅನಂತ ಸುಬ್ಬರಾವ್‌ರವರಿಗೆ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಪಾಲ್ಗೊಂಡು ಮಾತನಾಡಿದರು.