ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಶಿವಕುಮಾರ ಸಮುದಾಯದ ಭವನದಲ್ಲಿ ತಾಲೂಕು ಬೇಡ ಜಂಗಮ ಸಮಾಜ ಸಂಘದ ವತಿಯಿಂದ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ ಮೀಸಲಾತಿ ಜಾರಿ ಬಂದ ದಿನದಿಂದ ಬೇಡ ಜಂಗಮರಿಗೆ ನ್ಯಾಯಬದ್ಧವಾದ ಮೀಸಲಾತಿ ನೀಡಲಾಗಿದೆ. ಕೆಲವರು ಅಡ್ಡಪಡಿಸುವ ಮೂಲಕ ನ್ಯಾಯಬದ್ಧ ಮೀಸಲಾತಿ ಅಡ್ಡಗೊಡೆ ಮೇಲೆ ನಿಂತಿದೆ. ಈ ಕಾರಣದಿಂದ ಹಿರೇಮಠರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟಕ್ಕೆ ತಾಲೂಕಿನಿಂದ ಮೂರು ಭಾರಿ ತೆರಳಿ ಬೆಂಬಲ ನೀಡಲಾಗಿದೆ. ಸದ್ಯ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಸದಸ್ಯತ್ವ ಪಡೆಯುವ ಮೂಲಕ ರಾಜ್ಯ ಸಂಘಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಶಿವರಾಜ್ ಮಾತನಾಡಿ, 1995ರಲ್ಲಿ ಆರಂಭವಾದ ಬೇಡ ಜಂಗಮ ಸಂಘ ಇಲ್ಲಿಯವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ, ಕನಿಷ್ಠ ನಮ್ಮ. ತಾಲೂಕಿನಲಗಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಯಾವುದೇ ಸ್ಥಾನ ಮಾನ ಲಭ್ಯವಾಗಿಲ್ಲ. ವೀರಶೈವ ಲಿಂಗಾಯತ ಪರಂಪರೆಯಲ್ಲಿ ಜಂಗಮರಿಗೆ ವಿಶೇಷ ಸ್ಥಾನವಿದೆ. ಆದರೆ ಜಂಗಮ ಸಮುದಾಯದ ಹಕ್ಕು ಮತ್ತು ಸೌಲಭ್ಯಗಳಿಗೆ ಹೋರಾಟ ದುಸ್ಥಿತಿ ಶೋಚನೀಯ, ನಮಗೆ ಮೀಸಲಾತಿ ಮಾನದಂಡವಲ್ಲ, ನಮಗೆ ಶಿವ ಕೊಟ್ಟ ಕಾರುಣ್ಯ ಜೋಳಿಗೆ ಇದೆ, ಬೇಡ ಜಂಗಮ ಸಮುದಾಯದ ತಮ್ಮ ಹಕ್ಕೊತ್ತಾಯಕ್ಕಾಗಿ ಹೆಚ್ಚಿನ ಸದಸ್ಯತ್ವಕ್ಕೆ ಒತ್ತು ನೀಡಿ ಯಾರಿಗೆ ಒಂದು ಸಾವಿರ ಸದಸ್ಯತ್ವ ಶುಲ್ಕ ಪಾವತಿಗೆ ಶಕ್ತಿ ಇಲ್ಲದ ಬಡವರಿಗೆ ತಾವೇ ಸಹಾಯ ಮಾಡುವುದಾಗಿ ಹೇಳಿದರು.ತಾಲೂಕು ಬೇಡ ಜಂಗಮ ಸಮಾಜದ ಸಂಘ ಅಧ್ಯಕ್ಷ ರುದ್ರಯ್ಯ ಮಾತನಾಡಿ, ತಾಲೂಕು ಸಂಘದಲ್ಲಿ ಸದ್ಯ 180 ಸದಸ್ಯತ್ವ ಹೊಂದಿದ್ದು, ಸಂಘದ ಹೆಸರಿನಲ್ಲಿ ಬ್ಯಾಂಕಿನಲ್ಲಿ ₹ 3 ಲಕ್ಷ ಹಣ ಇದೆ. ಬೇಡ ಜಂಗಮರು ಹೆಚ್ಚಿನ ಸದಸ್ಯತ್ವ ಪಡೆಯಬೇಕು ಮತ್ತು ಪ್ರತಿ ತಿಂಗಳು ಹಾಗೂ ವಾರ್ಷಿಕ ಸಭೆಯ ವೆಚ್ಚವನ್ನು ಆಡಳಿತ ಮಂಡಳಿ ಸದಸ್ಯರು ವೈಯಕ್ತಿಕವಾಗಿ ಭರಿಸಲಾಗುತ್ತಿದೆ ಎಂದರು. ಉಮೇಶಯ್ಯನವರು ಸಂಘದ ಹಿತದೃಷ್ಟಿಯಿಂದ ಹಾಗೂ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸಲು ಸಲಹೆ ನೀಡಿದರು. ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಯ್ಯ ಸಂಘದ ವಾರ್ಷಿಕ ಲೆಕ್ಕಚಾರ ಮಂಡನೆ ಮಾಡಿದರು.ಉಪಾಧ್ಯಕ್ಷ ವಿರೂಪಾಕ್ಷಯ್ಯ, ಖಜಾಂಚಿ ರೇಣುಕಾ ಆರಾಧ್ಯ, ಗೌರವ ಸಲಹೆಗಾರಾದ ಲಿಂಗಾರಾದ್ಯ, ಅಡಗೂರು ವಿಶ್ವನಾಥ್ಯಯ್ಯ, ರವಿಕುಮಾರ್, ಸಂಘಟನೆ ಕಾರ್ಯದರ್ಶಿ ಅರುಣ್ ಕುಮಾರ್, ಸಾಲುಮರದ ಸದಾಶಿವಯ್ಯ, ವಿಜಯಕುಮಾರಶಾಸ್ತ್ರಿ, ಗುರುಮಲ್ಲಯ್ಯ, ಸೋಮಶೇಖರಯ್ಯ, ಶಿವಶಂಕರಯ್ಯ ಹಾಜರಿದ್ದರು.