ಹೊಯ್ಸಳ ಶಾಲೆಯವರು ಸರ್ವೆ 185ರಲ್ಲಿ ಭಸ್ಮೀಕರಣ ಹೊಂಡದ 20ಗುಂಟೆ ಹಾಗೂ ಪುರಸಭೆ ಖಾತೆ ನಂ1027ರಲ್ಲಿ 7000ಅಡಿ ಪುರಸಭೆ ಆಸ್ತಿಯನ್ನು ಒತ್ತುವರಿ ಮಾಡಿದ್ದು, ಈ ಜಾಗವನ್ನು ತೆರವು ಮಾಡಿ, ಸರ್ಕಾರದ ಜಾಗವನ್ನು ಸರ್ಕಾರಕ್ಕೆ ಉಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು ಎಂದು ನಾವು ಅರ್ಜಿಕೊಟ್ಟಿದ್ದೇವು, ಆದರೆ ಪುರಸಭೆಯವರು, ಶಾಸಕರು ಹಾಗೂ ತಹಸೀಲ್ದಾರ್ ಅವರು ಜುಲೈ 2ರಂದು ನಾಮ್‌ಕಾವಸ್ಥೆ ಸರ್ವೆ ಮಾಡಿಸಿದ್ದು ಜಾಗವನ್ನು ತೆರವುಗೊಳಿಸುವ ಕ್ರಮ ಕೈಗೊಂಡಿಲ್ಲ. ವಿಳಂಬದ ಬಗ್ಗೆ ಪುರಸಭೆಯ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ಒಬ್ಬರ ಮೇಲೆ ಒಬ್ಬರು ಕೈ ತೋರಿಸುತ್ತಿದ್ದು ಯಾವುದೇ ಸ್ವಷ್ಟ. ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಇಲ್ಲಿನ ಪುರಸಭೆ ಆವರಣದಲ್ಲಿ ಕೆಆರ್‌ಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಆದೇಶ್ ಲಿಂಗರಾಜು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.
ಪುರಸಭೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಪಟ್ಟಣದ ಹೊಳೆಬೀದಿಯಲ್ಲಿ ಹೊಯ್ಸಳ ಶಾಲೆಯವರು ಒತ್ತುವರಿ ಮಾಡಿರುವ ಸರ್ಕಾರಿ ಜಾಗವನ್ನು, ಪುರಸಭೆಯವರು ಸ್ವಾಧೀನಕ್ಕೆ ಪಡೆಯಲು ಮೀನಾಮೇಷ ಎಣಿಸುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕೆಆರ್‌ಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಆದೇಶ್ ಲಿಂಗರಾಜು ಎಚ್ಚರಿಸಿದರು. ಹೊಯ್ಸಳ ಶಾಲೆಯವರು ಸರ್ವೆ 185ರಲ್ಲಿ ಭಸ್ಮೀಕರಣ ಹೊಂಡದ 20ಗುಂಟೆ ಹಾಗೂ ಪುರಸಭೆ ಖಾತೆ ನಂ1027ರಲ್ಲಿ 7000ಅಡಿ ಪುರಸಭೆ ಆಸ್ತಿಯನ್ನು ಒತ್ತುವರಿ ಮಾಡಿದ್ದು, ಈ ಜಾಗವನ್ನು ತೆರವು ಮಾಡಿ, ಸರ್ಕಾರದ ಜಾಗವನ್ನು ಸರ್ಕಾರಕ್ಕೆ ಉಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು ಎಂದು ನಾವು ಅರ್ಜಿಕೊಟ್ಟಿದ್ದೇವು, ಆದರೆ ಪುರಸಭೆಯವರು, ಶಾಸಕರು ಹಾಗೂ ತಹಸೀಲ್ದಾರ್ ಅವರು ಜುಲೈ 2ರಂದು ನಾಮ್‌ಕಾವಸ್ಥೆ ಸರ್ವೆ ಮಾಡಿಸಿದ್ದು ಜಾಗವನ್ನು ತೆರವುಗೊಳಿಸುವ ಕ್ರಮ ಕೈಗೊಂಡಿಲ್ಲ. ವಿಳಂಬದ ಬಗ್ಗೆ ಪುರಸಭೆಯ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ಒಬ್ಬರ ಮೇಲೆ ಒಬ್ಬರು ಕೈ ತೋರಿಸುತ್ತಿದ್ದು ಯಾವುದೇ ಸ್ವಷ್ಟ. ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಜಾಗವನ್ನು ಒತ್ತುವರಿ ಮಾಡಿರುವುದು ಕಾಂಗ್ರೆಸ್ ಮಾಜಿ ಶಾಸಕರು ಎಂದು, ಕ್ಷೇತ್ರದ ಹಾಲಿ ಬಿಜೆಪಿ ಶಾಸಕರು ಹೇಳುತ್ತಾರೆ. ಈ ಬಗ್ಗೆ ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರೆ ಯಾವುದೇ ಮಾಹಿತಿ ಗೊತ್ತಿಲ್ಲದ ರೀತಿ ವರ್ತಿಸುತ್ತಿದ್ದು, ಈ ವಿಷಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದರು. ಸಾಮಾಜಿಕ ಹೋರಾಟಗಾರ ಡಿ. ಕೆ. ವೆಂಕಟೇಶ್ ಮಾತನಾಡಿ, ಹೊಯ್ಸಳ ಶಾಲೆಯವರು ಒತ್ತುವರಿ ಜಾಗವನ್ನು ಲೇಔಟ್ ನಿರ್ಮಾಣದವರಿಗೆ ಮಾರಾಟ ಮಾಡಲು ಅಧಿಕಾರಿಗಳು ಸಂಚು ರೂಪಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಉಳಿಸಬೇಕು ಎಂಬ ಮನಸ್ಸು ಅಧಿಕಾರಿಗಳಿಗಿಲ್ಲ, ಪುರಸಭೆಯಲ್ಲಿ ಸಾರ್ವಜನಿಕರ ದೂರುಗಳ ಬಗ್ಗೆ ಮನ್ನಣೆ ನೀಡುತ್ತಿಲ್ಲ. ಅಧಿಕಾರಿಗಳು ಶಾಮೀಲಾಗಿ ಒತ್ತುವರಿ ಜಾಗಕ್ಕೆ ಕಾಪೌಂಡ್ ಹಾಕಿಕೊಳ್ಳಲು ಬಿಟ್ಟಿರುವರು. ಶಾಸಕರು ಇತಂಹ ಘಟನೆಗಳನ್ನು ಗಮನಿಸಿ ಸರ್ಕಾರಿ ಜಾಗವನ್ನು ಉಳಿಸಬೇಕು. ಎಕರೆ ಗಟ್ಟಲೆ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದು ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಇದನ್ನು ಖಂಡಿಸಿ ಸರ್ಕಾರದ ಆಸ್ತಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾಂವಿ, ಆರ್‌ಐ ಲಕ್ಷ್ಮಣ್ ಮಾತನಾಡಿ, ಸರ್ಕಾರಿ ಸರ್ವೆ ನಂ ಜಾಗವಲ್ಲದೆ ಪುರಸಭೆ ಜಾಗವೂ ಸಹ ಒತ್ತುವರಿಯಾಗಿದ್ದು, ಗುರುವಾರ ತೆರವುಗೊಳಿಸಲಾಗುವುದು ಎಂದು ಉತ್ತರಿಸಿದರು. ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಹರ್ಷ, ಕಾರ್ಯಾಧ್ಯಕ್ಷ ಸಚಿನ್, ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ರಿಯಾಜ್ ಅಹಮ್ಮದ್, ಸಹ ಕಾರ್ಯದರ್ಶಿ ಯೋಗೇಶ್, ಅರೇಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಶಶಿಕಲಾ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.