ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 12.11 ಲಕ್ಷ ರು. ನಿವ್ವಳ ಲಾಭ

KannadaprabhaNewsNetwork |  
Published : Sep 23, 2025, 01:03 AM IST
51 | Kannada Prabha

ಸಾರಾಂಶ

ಮುಂದಿನ ಮಹಾಸಭೆಯ ವೇಳೆಗೆ ಸಂಘ 100 ವರ್ಷಗಳನ್ನು ಪೂರೈಸಲಿದ್ದು, ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ತೀರ್ಮಾನಿಸಿ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘವು 12.11 ಲಕ್ಷ ರು. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎನ್.ಎಂ. ಪ್ರಕಾಶ್ ಹೇಳಿದರು.

ಬಸವೇಶ್ವರ ಬಡಾವಣೆಯಲ್ಲಿರುವ ಶಿವಾನುಭವ ಮಂಟಪದಲ್ಲಿ ನಡೆದ 2024-25ನೇ ಸಾಲಿನ ಸಂಘದ 99ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ ಮಹಾಸಭೆಯ ವೇಳೆಗೆ ಸಂಘ 100 ವರ್ಷಗಳನ್ನು ಪೂರೈಸಲಿದ್ದು, ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಅದಕ್ಕಾಗಿ 3.62 ಲಕ್ಷ ರೂಗಳನ್ನು ಮೀಸಲಿಡಲಾಗಿದೆ ಎಂದರು.

ಸಂಘದ ಸದಸ್ಯರಿಂದ 32 ಲಕ್ಷ ರು. ಗಳ ಠೇವಣಿ ಸಂಗ್ರಹಿಸಿದ್ದು, ವಾರ್ಷಿಕ ಸಾಮಾನ್ಯ ಸದಸ್ಯರಿಗೆ 8.5 ಮತ್ತು ಹಿರಿಯ ನಾಗರೀಕರಿಗೆ 9.0 ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ಷೇರುದಾರ ಸದಸ್ಯರಿಗೆ ಲಾಭಾಂಶದಲ್ಲಿ ಶೇ. 10ರಷ್ಟು ಡಿವಿಡೆಂಡ್ ವಿತರಿಸಲಾಗುತ್ತದೆಂದು ಘೋಷಿಸಿದರು.

ಸಂಘದ ಸಿಇಒ ಬಿ.ಡಿ. ರೇಣುಕಾಪ್ರಸನ್ನ ವಾರ್ಷಿಕ ವರದಿ ಮತ್ತು 2025-26ನೇ ಸಾಲಿನ ಆಯ-ವ್ಯಯವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.

ಉಪಾಧ್ಯಕ್ಷ ಮೋಹನರಾವ್, ನಿರ್ದೇಶಕರಾದ ಕೆ.ಸಿ. ನಾಗರಾಜು, ಸುಭಾಷ್, ಕೆ.ಎಲ್. ರಾಜೇಶ್, ಸೈಯದ್ ಅಸ್ಲಾಂ, ಕೆ.ಎನ್. ಶಂಕರ್, ಅವಿನಾಶ್ ಪಿ. ಪಟೇಲ್, ಸಿ.ಎಂ. ಶಶಿಕಲಾ, ಕೆ.ಸಿ. ಶಿಲ್ಪಾ, ಎಂ.ಎ. ರವೀಂದ್ರಕುಮಾರ್, ಸಿಇಒ ಬಿ.ಡಿ. ರೇಣುಕಾಪ್ರಸನ್ನ, ಸಿಬ್ಬಂದಿಗಳಾದ ಕೆ.ಎಂ. ವಿಶ್ವನಾಥ್, ಎನ್.ಜಿ. ಕವಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ