ಹಾಸನದ ಸಮೀಪ ಹೆಲಿಪ್ಯಾಡಿಗೆ ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟಿಸಿ ಮಾಧ್ಯಮದೊಂದಿಗೆ ಮಾತನಾಡಿದ ಬಿ. ಶಿವರಾಂ, ಜೆಡಿಎಸ್ನಿಂದ ಬಂದ ಶಿವಲಿಂಗೇಗೌಡ ನಮ್ಮ ಕಾಂಗ್ರೆಸ್ನವರ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ನಮ್ಮನ್ನು ಮೀಟಿಂಗ್ ಗೆ ಕರೆಯುವುದಿಲ್ಲ. ಜೆಡಿಎಸ್ ನಿಂದ ಬಂದು ಇವನದೆ ದರ್ಬಾರ್ ಮಾಡುತ್ತಿದ್ದಾನೆ. ನಾವು ಸೋತಿರಬಹುದು, ನಾವೂ ಕೂಡ ಹಿಂದೆ ಒಂದು ಕಾಲದಲ್ಲಿ ಕಾಂಗ್ರೆಸ್ ಆಳಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಯಾರು, ಪಕ್ಷದ ಇತಿಹಾಸ ಏನು ಎಂಬುದನ್ನು ಅರಿತುಕೊಳ್ಳಬೇಕು. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರು ಪಕ್ಷದ ಹಿರಿಯರು ಮತ್ತು ಮೂಲ ಕಾರ್ಯಕರ್ತರನ್ನು ಕಡೆಗಣಿಸುವ ಧೋರಣೆ ತಾಳಬಾರದು ಎಂಬ ಅರ್ಥದಲ್ಲಿ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ಕಾಂಗ್ರೆಸ್ ನೊಳಗಿರುವ ಭಿನ್ನಮತ ಮತ್ತೊಮ್ಮೆ ಸ್ಪೋಟವಾಗಿದ್ದು, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಶಿವರಾಂ ಅವರು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅಬಕಾರಿ ಸಚಿವರಾದ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದು ಬಿ.ಶಿವರಾಂ ಹಾಗೂ ಶಿವಲಿಂಗೇಗೌಡರ ನಡುವೆ ಇರುವ ಶೀತಲಸಮರಕ್ಕೆ ಸಾಕ್ಷಿಯಾಗಿದೆ. ಹಾಸನದ ಸಮೀಪ ಹೆಲಿಪ್ಯಾಡಿಗೆ ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟಿಸಿ ಮಾಧ್ಯಮದೊಂದಿಗೆ ಮಾತನಾಡಿದ ಬಿ. ಶಿವರಾಂ, ಜೆಡಿಎಸ್ನಿಂದ ಬಂದ ಶಿವಲಿಂಗೇಗೌಡ ನಮ್ಮ ಕಾಂಗ್ರೆಸ್ನವರ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ನಮ್ಮನ್ನು ಮೀಟಿಂಗ್ ಗೆ ಕರೆಯುವುದಿಲ್ಲ. ಜೆಡಿಎಸ್ ನಿಂದ ಬಂದು ಇವನದೆ ದರ್ಬಾರ್ ಮಾಡುತ್ತಿದ್ದಾನೆ. ನಾವು ಸೋತಿರಬಹುದು, ನಾವೂ ಕೂಡ ಹಿಂದೆ ಒಂದು ಕಾಲದಲ್ಲಿ ಕಾಂಗ್ರೆಸ್ ಆಳಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಯಾರು, ಪಕ್ಷದ ಇತಿಹಾಸ ಏನು ಎಂಬುದನ್ನು ಅರಿತುಕೊಳ್ಳಬೇಕು. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರು ಪಕ್ಷದ ಹಿರಿಯರು ಮತ್ತು ಮೂಲ ಕಾರ್ಯಕರ್ತರನ್ನು ಕಡೆಗಣಿಸುವ ಧೋರಣೆ ತಾಳಬಾರದು ಎಂಬ ಅರ್ಥದಲ್ಲಿ ಕಿಡಿಕಾರಿದರು.ಸಭೆಯಲ್ಲಿ ಭಾಗವಹಿಸುವವರಿಗೆ ಕನಿಷ್ಠ ಸೌಜನ್ಯ ತೋರಿಸಬೇಕು. ಸಭೆಗೆ ಬಂದು ಕುಳಿತುಕೊಂಡು, ಹೇಳಬೇಕಾದ ವಿಚಾರವನ್ನು ಹೇಳದೆ ಎದ್ದು ಹೊರಟುಹೋಗುವುದು ಸರಿಯಾದ ನಡವಳಿಕೆಯಲ್ಲ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ಹಿಂದೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಮತ್ತು ರಾಜಕೀಯ ಅನುಭವ ಹೊಂದಿದವರು ಇನ್ನೂ ಇದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಇತಿಹಾಸ, ಪಕ್ಷದ ಸಂಘಟನೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಎದುರಿಸಿ ಮಾಡಿದ ರಾಜಕೀಯ ಪ್ರಭಾವದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯರನ್ನು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ ಎಂದು ಏರುದನಿಯಲ್ಲಿ ಕೂಗಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.