ಕುವೆಂಪು, ಕಾರಂತರು ಕನ್ನಡ ಕಣ್ಣುಗಳು: ಪ್ರೊ. ಬಿಳಿಮಲೆ

KannadaprabhaNewsNetwork |  
Published : Oct 11, 2026, 03:45 AM IST
ಫೋಟೋ: ೧೦ಪಿಟಿಆರ್-ಬಾಲವನ ೧ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಕಾರಂತರ ೧೨೫ನೇ ಜನ್ಮದಿನಾಚರಣೆ ನಡೆಯಿತು. ಫೋಟೋ: ೧೦ಪಿಟಿಆರ್-ಬಾಲವನ ೨ಎಸ್.ಕೆ. ಆನಂದ ಕುಮಾರ್ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಡಾ. ಶಿವರಾಮ ಕಾರಂತರ ಕೆಲಸಗಳು ಪರಂಪರೆಯ ಭಾಗವಾಗಿದ್ದು, ಅವರು ಮಹಿಳಾ, ದಲಿತ ಚಳುವಳಿ, ಪರಿಸರ ಸಮಸ್ಯೆಗಳಿಗೆ ಧ್ವನಿ ಎತ್ತಲು ಮೂಲ ಕಾರಣಕರ್ತರಾಗಿದ್ದಾರೆ. ಕುವೆಂಪು ಮತ್ತು ಕಾರಂತರು ಕನ್ನಡದ ಕಣ್ಣುಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಪುತ್ತೂರು: ಡಾ. ಶಿವರಾಮ ಕಾರಂತರ ಕೆಲಸಗಳು ಪರಂಪರೆಯ ಭಾಗವಾಗಿದ್ದು, ಅವರು ಮಹಿಳಾ, ದಲಿತ ಚಳುವಳಿ, ಪರಿಸರ ಸಮಸ್ಯೆಗಳಿಗೆ ಧ್ವನಿ ಎತ್ತಲು ಮೂಲ ಕಾರಣಕರ್ತರಾಗಿದ್ದಾರೆ. ಕುವೆಂಪು ಮತ್ತು ಕಾರಂತರು ಕನ್ನಡದ ಕಣ್ಣುಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಡಾ.ಶಿವರಾಮ ಕಾರಂತರ ೧೨೫ ನೇ ಜನ್ಮ ದಿನೋತ್ಸವದ ಅಂಗವಾಗಿ ಕನ್ನಡ, ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ, ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯ ಆಶ್ರಯದಲ್ಲಿ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಶನಿವಾರ ನಡೆದ ಡಾ.ಶಿವರಾಮ ಕಾರಂತರ ೧೨೫ನೇ ಜನ್ಮ ದಿನೋತ್ಸವ ಮತ್ತು ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ-೨೦೨೬ರಲ್ಲಿ ಕಾರಂತ ಸ್ಮರಣೆ ಪ್ರದಾನ ಭಾಷಣ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಮುಂದಿನ ದಿನಗಳಲ್ಲಿ ಬಾಲವನದಲ್ಲಿ ಯೋಗ, ಸಾಹಿತ್ಯ ರಚನೆ ಮತ್ತು ಧ್ಯಾನಕ್ಕೆ ಪೂರಕವಾಗಿ ಧ್ಯಾನ ಮಂದಿರ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ರು. ೨ ಕೋಟಿ ವೆಚ್ಚದಲ್ಲಿ ಬಾಲವನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಜೊತೆಗೆ ರು. ೫೦ ಲಕ್ಷ ರು. ವೆಚ್ಚದಲ್ಲಿ ವಾಕಿಂಗ್ ಪಥ ಮಾಡಲಾಗುವುದು ಎಂದರು.

ಡಾ.ಕಾರಂತರ ಪುತ್ರಿ ಕ್ಷಮಾ ರಾವ್ ಮಾತನಾಡಿ ನಮ್ಮನ್ನು ಕಾರಂತರು ೬ನೇ ತರಗತಿ ಬಳಿಕ ಶಾಲೆಗೆ ಸೇರಿಸಿದ್ದರು. ಅಲ್ಲಿಯತನಕ ನಾವು ಬಾಲವನದಲ್ಲಿ ಪ್ರಕೃತಿಯ ಮಧ್ಯೆ ಕಾರಂತರಿಂದ ಜೀವನ ಪಾಠ ಕಲಿತಿದ್ದೆವು ಎಂದರು.

ಪ್ರಶಸ್ತಿ ಪ್ರದಾನ: ಡಾ.ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿಯನ್ನು ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತ ಎಸ್.ಕೆ. ಆನಂದ ಕುಮಾರ್ ಬಗ್ಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಾರಾಯಣ ಭಟ್ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ ಪುತ್ತೂರಿನ ಪ್ರಧಾನ ಪ್ರವೇಶ ಭಾಗದಲ್ಲಿ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಸುಂದರ ವೃತ್ತ ನಿರ್ಮಿಸಿ ಕಾರಂತರ ಪ್ರತಿಮೆ ಸ್ಥಾಪಿಸಬೇಕು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷö ಡಾ.ಎಂ.ಪಿ. ಶ್ರೀನಾಥ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ತಾಪಂ ಕಾರ್ಯನಿರ್ವಹಣಾ ಅ ಕಾರಿ ನವೀನ್ ಭಂಡಾರಿ, ಸುದಾನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರೆ. ವಿಜಯ ಹಾರ್ವಿನ್, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರತಿಮಾ ಹೆಗ್ಡೆ, ದತ್ತಾತ್ರೇಯ ರಾವ್, ಸ್ವಾತಿ ಜೆ. ರೈ, ಶಿವಪ್ರಸಾದ್ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಸ್ಟೆಲ್ಲ ವರ್ಗೀಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಡಾ.ಹರಿಪ್ರಸಾದ್ ನಿರ್ವಹಿಸಿದರು. ಬಾಲವನ ಕಾರ್ಯಕ್ರಮ ಸಂಯೋಜಕರಾದ ರಮೇಶ್ ಉಳಯ ಮತ್ತು ಜಗನ್ನಾಥ್ ಅರಿಯಡ್ಕ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ದಕ್ಷ ಬಳಕೆ ಎಲ್ಲರಿಗೂ ಅನಿವಾರ್ಯ: ಅನಂತ ಪದ್ಮನಾಭ
ಪ್ರಜಾಪ್ರಭುತ್ವ ಆಶಯ ಅರಿಯಲು ಯುವಸಂಸತ್ತು ಸಹಕಾರಿ: ಪ್ರೊ.ಆಲೂರ