ಶತಮಾನ ಕಂಡ ಸಾಹಿತ್ಯ ವಿಜ್ಞಾನಿ ಕಾರಂತರು: ಡಾ. ಸಂಕಮಾರ್

KannadaprabhaNewsNetwork |  
Published : Oct 14, 2026, 02:30 AM IST
ಕಾರಂತ ಜನ್ಮದಿನಾಚರಣೆಯನ್ನು ಡಾ. ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು  | Kannada Prabha

ಸಾರಾಂಶ

ನಗರದ ರೆಡ್ ಕ್ರಾಸ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ 124 ನೇ ಜನ್ಮದಿನಾಚರಣೆ

ಉಡುಪಿ: ಕೋಟ ಶಿವರಾಮ ಕಾರಂತರು ಕಳೆದ ಶತಮಾನದ ಸಾಹಿತ್ಯ ವಿಜ್ಞಾನಿಯಾಗಿದ್ದರು, ಅವರು ಯಾವುದೇ ವಿಚಾರದ ಬಗ್ಗೆ ಅವರಿಗಿದ್ದ ಮುಂದಾಲೋಚನೆ ನಮ್ಮನ್ನು ಬೆರಗುಗೊಳಿಸುತ್ತದೆ, ಅವರು ಪ್ರತಿಯೊಂದು ವಿಚಾರಗಳನ್ನು ವೈಜ್ಞಾನಿಕ ಮತ್ತು ವೈಚಾರಿಕವಾಗಿಯೂ ಗಮನಿಸುತಿದ್ದರು ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.

ಅವರು ನಗರದ ರೆಡ್ ಕ್ರಾಸ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಕಾರಂತರ 124 ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕಾರಂತರೊಂದಿಗಿನ ತಮ್ಮ ಒಡನಾಟದ ಕುರಿತಾಗಿ ಮಾತನಾಡಿದ ಚಿಂತಕ ಸಂಕಯ್ಯ ಶೆಟ್ಟಿ ಬಹುಜನರು ಕಾರಂತರು ಕೋಪಿಷ್ಟ ಎಂದು ತಪ್ಪು ತಿಳಿದಿದ್ದಾರೆ, ಆದರೇ ಅವರದ್ದು ಸಾತ್ವಿಕ ಸಿಟ್ಟು, ಆ ಸಿಟ್ಟಿನೊಳಗೆ ಮಗುವಿನ ಮುಗ್ಧತೆ ಮತ್ತು ತಾಯಿಯ ಪ್ರೀತಿ ಇತ್ತು ಎಂದು ವಿಶ್ಲೇಷಿಸಿದರು. ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಮತ್ತು ರೇಡಿಯೋ ಮಣಿಪಾಲದ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ಹೇಳಿದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಸದಸ್ಯರಾದ ಆತ್ರಾಡಿ ಅಮೃತ ಶೆಟ್ಟಿ, ಡಾ.ಭಾರತಿ ಮರವಂತೆ, ಸಂತೋಷ್ ನಾಯಕ್ ಪಟ್ಲ, ಜಿ.ಎಂ ಶರೀಫ್ ಹೂಡೆ, ಡಾ.ಪ್ರಸಾದ್ ರಾವ್ ಇದ್ದರು.

ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸದಸ್ಯ ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ, ಸತೀಶ್ ಕೊಡವೂರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿ ಸರ್ಕಾರದ ಕೊಡುಗೆಯಲ್ಲ, ಸಾಂವಿಧಾನಿಕ ಸಾಧನ
ಗೌರವ, ವಿನಯ, ಕೃತಜ್ಞತೆ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ: ಡಾ. ನೀಲ್ ರತನ್ ಶೆಂಡೆ