ಕನ್ನಡಪ್ರಭ ವಾರ್ತೆ ಅಥಣಿ
ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ಶಿವಯೋಗಿ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸೈಟಿ ಕಾರ್ಯಾಲಯದಲ್ಲಿ 24ನೇ ಸರ್ವಸಾಧಾರಣ ವಾರ್ಷಿಕ ಸಭೆಯ ನಿಮಿತ್ತ ಆಯೋಜಿಸಲಾಗಿದ್ದ ಶ್ರೀ ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ಪೂಜಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಪಾರದರ್ಶಕ ಆಡಳಿತದಿಂದ ಪ್ರಗತಿ ಹೊಂದಲು ಸಾಧ್ಯ. ಜನರ ಸಹಕಾರ ಪಡೆದುಕೊಂಡು ಪ್ರಾಮಾಣಿಕ, ನಿಷ್ಠೆ ಮತ್ತು ಹೊಸತನ ರೂಢಿಸಿಕೊಂಡು ವಿಶೇಷ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಬೇಕು. ಕೇವಲ ಸಾಲಸೌಲಭ್ಯ ಕೊಡಲು ಸೀಮಿತವಾಗದೆ ಸೇವಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಒದಗಿಸಲು ಮುಂದಾಗಬೇಕು ಎಂದರು.
ಶ್ರೀ ಶಿವಯೋಗಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಶ್ರೀಮಂತ ಶಿಂದೆ ಮಾತನಾಡಿ, ಸೊಸೈಟಿ 973 ಸದಸ್ಯತ್ವ ಹೊಂದಿದ್ದು, ₹50.43 ಲಕ್ಷ ಶೇರು ಬಂಡವಾಳ ಹೊಂದಿದೆ, ₹276.32 ಲಕ್ಷ ಸ್ವಂತ ಬಂಡವಾಳ ಹೊಂದಿದ್ದು, ₹1079.31 ಲಕ್ಷ ಠೇವಣಿ ಹೊಂದಿದೆ. ಈಗಾಗಲೇ ₹560.76 ಲಕ್ಷ ಸಾಲ ಸೌಲಭ್ಯ ಒದಗಿಸಲಾಗಿದೆ. ₹1406.06 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ವರ್ಷದಲ್ಲಿ ₹20.97 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದರು.ವ್ಯವಸ್ಥಾಪಕ ಬಿ.ಜಿ.ನಂದಗಾಂವ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಸೊಸೈಟಿ ಉಪಾಧ್ಯಕ್ಷ ಸಿದ್ದು ಸೌದತ್ತಿ, ಆಡಳಿತ ಸದಸ್ಯರಾದ ಶೈಲೇಶ್ ಜಾಧವ, ಚಂದ್ರಶೇಖರ ಬಳ್ಳೊಳ್ಳಿ, ಸುಭಾಷ್ ಶಿಂದೆ, ಲಲಿತಾ ಬಳ್ಳೊಳ್ಳಿ, ಮಂಗಲ ಮೋರೆ, ಅಪ್ಪಾಸಾಬ ಬಿರಾದಾರ, ಸಿದ್ದು ಬಿರಾದಾರ, ಭೀಮಪ್ಪ ಮಾಂಗ, ಸಂತೋಷ ಬಂಡಗರ ಸೇರಿ ಇತರರಿದ್ದರು. ಬಿ.ಜಿ.ನಂದಗಾoವ ಸ್ವಾಗತಿಸಿ, ದಿಲೀಪ ಪಾಟೀಲ ನಿರೂಪಿಸಿದರು. ಆರ್.ಸಿ.ತೋರಿ ವಂದಿಸಿದರು.