ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ

KannadaprabhaNewsNetwork |  
Published : Apr 30, 2026, 02:45 AM IST
ಶಿವಬೋಧ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ ಮೂಡಲಗಿಯ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ವರ್ಷ ₹ 7.30 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಪುಲಕೇಶ ಸೊನವಾಲಕರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಮೂಡಲಗಿಯ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ವರ್ಷ ₹ 7.30 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಪುಲಕೇಶ ಸೊನವಾಲಕರ ಹೇಳಿದರು.

ಪಟ್ಟಣದ ಸೊಸೈಟಿಯ ಕಚೇರಿಯಲ್ಲಿ ನಡೆದ ೨೦೨೫-೨೬ರ ಪ್ರಗತಿ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯು ಸದ್ಯ 6.89 ಕೋಟಿ ಶೇರು ಬಂಡವಾಳ, ₹ 476 ಕೋಟಿ ಠೇವುಗಳನ್ನು ಸಂಗ್ರಹಿಸಿದ್ದು, ₹267 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲ ನೀಡಿದೆ. ₹ 35 ಕೋಟಿ ನಿಧಿಗಳನ್ನು ಹೊಂದಿ ₹ 159 ಕೋಟಿ ಗ್ರಾಹಕರ ಭದ್ರತೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾವಣಿಗಳನ್ನು ಮಾಡಿದ್ದು, ₹543 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹1,906 ಕೋಟಿ ವಾರ್ಷಿಕ ವಹಿವಾಟ ನಡೆಸುತ್ತಿದೆ ಎಂದರು.ಸೊಸೈಟಿಯು ಈ ವರೆಗೆ 18 ಶಾಖೆಗಳನ್ನು ಹೊಂದಿದ್ದು ಎಲ್ಲವೂ ಪ್ರಗತಿಯಲ್ಲಿವೆ. ಸದ್ಯ 17,568 ಸಂಘದ ಸದಸ್ಯರಿದ್ದಾರೆ. ಪ್ರಸಕ್ತ ಸಾಲಿಗೆ ಶೇ.೧೬ ರಷ್ಟು ಲಾಭಾಂಶ ಪ್ರಕಟಿಸಿದೆ. ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಶೀಘ್ರದಲ್ಲಿ ನರಗುಂದ, ಬಬಲೇಶ್ವರ, ಬೀಳಗಿ, ಕುಳಗೇರಿ ಕ್ರಾಸ್, ಕೆರೂರ, ಸವದತ್ತಿ ಕೋಲಾರದಲ್ಲಿ ನೂತನ ಶಾಖೆಗಳು ಪ್ರಾರಂಭವಾಗಲಿವೆ ಎಂದರು.ಸಭೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಸುಭಾಸ ಸೋನವಾಲಕರ, ನಿರ್ದೇಕರಾದ ರವೀಂದ್ರ ಸೋನವಾಲಕರ, ಡಾ.ಶಂಕರ ದಂಡಪ್ಪನವರ, ಅಶೋಕ ಹೊಸೂರ, ರೇವಪ್ಪ ಕುರಬಗಟ್ಟಿ, ಶಿವಬಸು ಬೂದಿಹಾಳ, ಶಾರದಾ ಗುಲಗಾಜಂಬಗಿ, ವಿದ್ಯಾವತಿ ಸೋನವಾಲಕರ, ಮಂಜುಳಾ ಬಳಿಗಾರ, ಗಂಗವ್ವಾ ಸಣ್ಣಪ್ಪನವರ , ಹಣಮಂತ ಸಣ್ಣಕ್ಕಿ, ಲೆಕ್ಕಪರಿಶೋಧಕ ಭೀಮಸಿ ಜರಾಳೇ ಹಾಗೂ ಪ್ರಧಾನ ವ್ಯವಸ್ಥಾಪಕ ವೆಂಕಟೇಶ ಬಾಲರೆಡ್ಡಿ, ಪ್ರಧಾನ ಕಚೇರಿ ಮ್ಯಾನೇಜರ್‌ ಮಹೇಶ ಮಾಲಗಾರ, ಮಾರಾಟಾಧಿಕಾರಿ ಹಣಮಂತ ಕುಂಬಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಅವಳಿ ತಾಲೂಕಲ್ಲಿ ಎಸ್ಸೆಸ್ಸೆಲ್ಸಿ ದಾಖಲೆಯ ಫಲಿತಾಂಶ!